Thursday, October 23, 2025

Latest Posts

ಯುವಕರಲ್ಲೇ ಹಾರ್ಟ್ ಅಟ್ಯಾಕ್..! ಕಾರಣವೇನು..?

- Advertisement -

ಯುವಕರಲ್ಲೇ ಹಾರ್ಟ್ ಅಟ್ಯಾಕ್..!

ಯಂಗ್ ಜನರೇಶನ್ ಜಾಲಿ ಮೂಡ್ ನಲ್ಲಿ ಆರೋಗ್ಯದ ಕಡೆ ಕಾಳಜಿ ನೀಡೋದು ಕಡಿಮೆಯಾಗುತ್ತಿದೆ. ಇದರಿಂದ ಅನೇಕ ರೋಗಗಳು ಆತನನ್ನು ಒಕ್ಕರಿಸಿ ಬಿಡುತ್ತದೆ. ಇತ್ತೀಚೆಗೆ ಹರ‍್ಟ್ ಬಡಿತದ ವಿಚಾರ ಯಂಗ್ ಜನರೇಶನ್ ಗೆ ತುಂಬಾನೆ ತಲೆನೋವಾಗಿ ಬಿಟ್ಟಿದೆ. ಹಿಂದೆ ಒಂದು ಕಾಲವಿತ್ತ ಶತ ವಯಸ್ಸಿನ ವರೆಗು ನಿಶ್ಚಿಂತೆ ಅನ್ನೋದು ಆದರೆ ಇದೀಗ ೫೦ ತಲುಪುತ್ತೇವೆ ಅನ್ನೋ ಧರ‍್ಯವೇ ಯುವಕರಿಗೆ ದೊಡ್ಡ ಸವಾಲಾಗಿದೆ. ಈ ಕ್ಷಣ ಜೊತೆಗಿದ್ದವ ನೆಕ್ಸ್ಟ್ ಸೆಕೆಂಡ್ ಗೆ ಚಿರ ನಿದ್ರೆಗೆ ಜಾರಿರುತ್ತಾನೆ. ಇಂತಹ ತಕ್ಷಣದ ಸಾವುಗಳಿಗೆ ಕಾರಣ ಮಾತ್ರ ಕೇಳಿಬರೋದು ಒಂದೇ ಅದೇ ಹರ‍್ಟ್ ಅಟ್ಯಾಕ್… ಅಷ್ಟಕ್ಕೂ ಯುವಕರನ್ನೇ ಈ ಹರ‍್ಟ್ ಅಟ್ಯಾಕ್ ಕಾಡ್ತಿರೋದೇಕೆ ಜಮರಾಯನಿಗ್ಯಾಕೆ ಯುವಜನತೆ ಮೇಲೆ ಅಷ್ಟೊಂದು ಪ್ರೀತಿ..? ಇನ್ನು ಬಾಳಿ ಬದುಕಬೇಕಾದ ವಯಸ್ಸಿಗೆ ಇದೇನು ಶಾಪವೇ..?ನಿಜಕ್ಕೂ ಹರ‍್ಟ್ ಅಟ್ಯಾಕ್ ಆಗಲು ಕಾರಣವೇನು..?
ಇದೆಲ್ಲ ಪ್ರಶ್ನೆಗಳಿಗೆ ವೈದ್ಯರು ಏನಂತಾರೆ..? ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಭಾರತದಲ್ಲಿ ಎಳೆ ವಯಸ್ಸಿಗೆ ಯುವಕ ಯುವತಿಯರು ಹರ‍್ಟ್ ಅಟ್ಯಾಕ್ ಗೆ ಒಳಗಾಗುತ್ತಿದ್ದಾರೆ.ಇತ್ತೀಚೆಗಷ್ಟೇ ಕನ್ನಡದ ಖ್ಯಾತ ನಟ ಪುನೀತ್ ರಾಜ್ ಕುಮಾರ್ ಕೇವಲ ೪೭ ವಯಸ್ಸಿನಲ್ಲಿ ನಮ್ಮನ್ನೆಲ್ಲಾ ಬಿಟ್ಟು ಹೋದದ್ದು ಮಾತ್ರ ಎಂದೂ ಮರೆಯಲಾಗದ ಆಘಾತ. ಅಲ್ಲೂ ಕಾರಣ ಮಾತ್ರ ಹರ‍್ಟ್ ಅಟ್ಯಾಕ್.
ಮತ್ತೊಂದೆಡೆ ಕೇವಲ ೨೬ ರ‍್ಷಕ್ಕೆ ಮರೆಯಾದ ಚಿರಂಜೀವಿ ರ‍್ಜಾ ನೆನಪು ತುಂಬಾನೆ ಕಾಡುವಂತದ್ದು ಇದಕ್ಕೂ ಕಾರಣ ಮಾತ್ರ ಹರ‍್ಟ್ ಅಟ್ಯಾಕ್.
ಮತ್ತೊಂದೆಡೆ ಬಾಲಿವುಡ್ ನಟಿ ಸೋನಾಲಿ ಒಂದೆರಡು ದಿನಗಳ ಹಿಂದೆ ಇಹಲೋಕ ತ್ಯಜಿಸಿದ್ಲು ಇದಕ್ಕೂ ಕಾರಣ ಹರ‍್ಟ್ ಅಟ್ಯಾಕ್.
ಶೇನ್ ವರ‍್ನ್ ಕೂಡಾ ಕೇವಲ ೫೨ ರ‍್ಷಕ್ಕೆ ಪ್ರಾಣ ಬಿಟ್ಟಿದ್ರು. ಇದಕ್ಕೂ ಕಾರಣ ಹರ‍್ಟ್ ಅಟ್ಯಾಕ್.
ಕೆಲದಿನಗಳ ಹಿಂದೆಯಷ್ಟೇ ರ‍್ನಾಟಕದ ಮುಖ್ಯಮಂತ್ರಿ ಕ್ಯಾಮಾರಾ ಸಂಯೋಜಕ ಪತ್ರರ‍್ತ ಗುರುಲಿಂಗ ಸ್ವಾಮಿ ತನ್ನ ೪೬ ನೇ ವಯಸ್ಸಿಗೆ ಪರಮಾತ್ಮನ ಬಳಿ ಸೇರಿದ್ರು. ಇದಕ್ಕೂ ಕಾರಣ ಮಾತ್ರ ಹರ‍್ಟ್ ಅಟ್ಯಾಕ್…

ಎಲ್ಲರೂ ಫಿಟ್ ಅಂಡ್ ಫೈನ್ ಆಗಿಯೇ ರ‍್ತಾರೆ.. ಆದ್ರೆ, ಇದ್ದಕ್ಕಿದ್ದಂತೆ ಸಾವನ್ನಪ್ತಾರೆ. ಚೆನ್ನಾಗಿದ್ದೀಯ ಅಂತ ಕೇಳಿ ನಿಮಿಷಗಳೊಳಗೆ ಸಾವಿನ ಸುದ್ದಿ ಬಂದು ಬಿಡತ್ತೆ.
ಯಾಕೆ..? ಈ ರೀತಿ ಆಗ್ತಿದೆ.. ಯಂಗ್ ಜನರೇಷನ್‌ನಲ್ಲಿ ಹಾರ್ಟ್ ಅಟ್ಯಾಕ್ ಆಗ್ತಿರೋದು ಯಾಕೆ.? ಅನ್ನೋ ಪ್ರಶ್ನೆ ಎಲ್ಲರಲ್ಲೂ ಕಾಡತೊಡಗಿದೆ. ಇದಕ್ಕೆ ವೈದ್ಯರ ಬಳಿ ಪ್ರಶ್ನಿಸಿದಾಗ ಅವರು ನೀಡಿದ ಉತ್ತರ ಮಾತ್ರ ಕೇವಲ ೬ ಕಾರಣ. ಹಾಗಿದ್ರೆ ಆ ೬ ಕಾರಣಗಳೇನು..?

ಕಾರಣ-೧: ಡಯಾಬಿಟೀಸ್-ಶುಗರ್:

ಶುಗರ್ ಅನ್ನೋದು ಜಂಜಾಟದ ಜಮಾನದಲ್ಲಿ ಈಗ ರ‍್ವೇ ಸಾಮಾನ್ಯವಾಗಿ ಬಿಟ್ಟಿದೆ. ಪರಿಸ್ಥಿತಿ ಹೇಗಾಗಿದೆ ಅಂದರೆ ಹುಟ್ಟಿದ ಮಗುವನ್ನು ಕೂಡ ಕೆಂಭೂತದಂತೆ ಕಾಡುತ್ತಿದೆ ಈ ಶುಗರ್ ಖಾಯಿಲೆ.ಇದಕ್ಕಾಗಿ ಪಥ್ಯದ ಆಹಾರ ಕ್ರಮವನ್ನು ಸೇವಿಸುವುದೇ ಸೂಕ್ತ.

ಕಾರಣ-೨- ಹೈ ಲೆವೆಲ್ ಬ್ಲಡ್ ಕೊಲೆಸ್ಟಾçಲ್:
ಹೈ ಲೆವೆಲ್ ಬ್ಲಡ್ ಕೊಲೆಸ್ಟ್ರಾಲ್ ಗೆ ಪ್ರಮುಖ ಕಾರಣವಾಗುವುದೇ ದಿನ ನಿತ್ಯ ನಾವು ಉಪಯೋಗಿಸೊ ಆಹಾರ ಕ್ರಮ.ಒಂದೆಡೆ ಕೆಲಸದ ಜಂಜಾಟ ಮತ್ತೊಂದೆಡೆ ಸಮಯದ ಅಭಾವ ಇವೆಲ್ಲದರ ನಡುವೆ ನಾವು ಸಿಲುಕಿ ಹಾಕಿ ಕೊಳ್ಳೋದೆ ಆಹಾರ ಕ್ರಮದಲ್ಲಿನ ವ್ಯತ್ಯಯ ಹಾಗೆ ಕೆಲಸದಿಂದ ಸ್ವಲ್ಪ ಹೊರ ನಡೆದಾಗ ತಿನ್ನೋ ಕುರುಕಲು ತಿಂಡಿ ಇವೆಲ್ಲದರಿಂದ ನಮ್ಮ ಬೋಡಿಯನ್ನು ಕೊಲೆಸ್ಟ್ರೋಲ್ ಆವರಿಸಿ ಬಿಡುತ್ತೆ. ಇದರಿಂದ ರಕ್ತ ಸಂಚಾರ ತುಂಬಾನೇ ಕಡಿಮೆ ಆಗ್ತಾ ಹೋಗುತ್ತೆ..

ಯಾಕಂದ್ರೆ, ಕೊಲೆಸ್ಟಾçಲ್ ಹೆಚ್ಚಾಗ್ತಿರುತ್ತೆ..ಕೊಲೆಸ್ಟಾçಲ್ ಹೆಚ್ಚಾದಂತೆ ಕ್ರಮೇಣ ಹೃದಯಕ್ಕೆ ರಕ್ತ ಸಂಚಾರ ಆಗಲ್ಲ.. ರಕ್ತ ನಾಳ ಬ್ಲಾಕ್ ಆದ್ರೆ, ಮುಗೀದೇ ಹೋಗುತ್ತೆ.. ನಾವು ನೆಗ್ಲೆಟ್ ಮಾಡಿದ್ರೆ, ಅಲ್ಲಿ ಆಯಸ್ಸು ಮುಗಿದಂತೆ..

ಕಾರಣ-೩- ಹೈ-ಬ್ಲಡ್ ಪ್ರಷರ್

ಹೈ ಬ್ಲಡ್ ಪ್ರಷರ್ ಅಂದ್ರೆ ರಕ್ತದೊತ್ತಡ ಇದಕ್ಕೆ ಕಾರಣವೇ ನಿತ್ಯದ ಜಂಜಾಟದಲ್ಲಿ ಕ್ಷುಲ್ಲಕ ಕಾರಣಕ್ಕೂ ಟೆನ್ಶನ್. ಕೆಲಸದ ಒತ್ತಡ ಮನೆ ಜವಾಬ್ದಾರಿ ಅನಗತ್ಯ ಆಹಾರ ಕ್ರಮ ಇದಕ್ಕೆ ಕಾರಣ. ಆದ್ದರಿಂದ ಚಿಂತೆ ಕಡಿಮೆ ಮಾಡಿ ರಕ್ತದ ಒತ್ತಡವನ್ನು ಕಡಿಮೆ ಮಾಡಬೇಕು.

ಕಾರಣ-೪-ಸ್ಮೋಕಿಂಗ್

ಸ್ಮೋಕಿಂಗ್ ಯಂಗ್ ಜನರೇಶನ್ ನ ಸೈಲಿಷ್ ಹ್ಯಾಬಿಟ್. ಆದ್ರೆ ಇದು ಚಟ್ಟಕ್ಕೆ ದಾರಿ ಅನ್ನೋದನ್ನೇ ಯುವ ಪೀಳಿಗೆ ಮರೆತು ಬಿಡುತ್ತಾರೆ. ಸ್ಮೋಕಿಂಗ್ ಕಂಟ್ರೋಲ್ ನಮ್ಮ ಕೈಯಲ್ಲಿಯೇ ಇರುತ್ತೆ.

ಕಾರಣ-೫-ಫ್ಯಾಮಿಲಿ ಹಿಸ್ಟರಿ
ಇನ್ನು ಇವೆಲ್ಲದಕ್ಕೂ ಭಿನ್ನ ಕಾರಣ ಅಂದ್ರೆ ಅದುವೇ ಅನುವಂಶಿಕ ತೊಂದರೆ.ಪಾರಂಪರಿಕವಾಗಿ ಹೃದಯದ ತೊಂದರೆ ಅನುಭವಿಸುತ್ತಿದ್ದರೆ ಅದರ ಪರಿಹಾರ ಕಷ್ಟ ಸಾಧ್ಯ.

ಕಾರಣ-೬-ಲೈಫ್ ಸ್ಟೆöÊಲ್

ಕಾಲ ಬದಲಾದಂತೆ ನಾವು ಬದಲಾಗಬೇಕು ಅನ್ನೋ ಜಮಾನದಲ್ಲಿರೋ ನಾವು ಬದುಕುವ ರೀತಿಯೇ ಭಿನ್ನ ಹಿರಿ ತಲೆಮಾರಿನ ಜೀವನ ಶೈಲಿಗೂ ಯಂಗ್ ಜನರೇಶನ್ ಗೂ ಅಜಗಜಾಂತರ ವ್ಯತ್ಯಾಸವಿರುತ್ತೆ. ದಿನನಿತ್ಯದ ಓಡಾಟ ಅನಗತ್ಯ ಚಿಂತೆ,ಆಹಾರದ ಅಜಾಗರೂಕತೆ ಇವೆಲ್ಲವೂ ನಮಗೆ ಮುಳುವಾಗುವುದು.

ಇವೆಲ್ಲಾ ಕೇವಲ ನೆಪಗಳಂತೆ ಕಂಡರೂ ಸತ್ಯಕ್ಕೆ ಹತ್ತಿರವಾದದ್ದು. ಈ ಮೊದಲು ೭೦ ವರ್ಷಕ್ಕೋ.. ೬೦ ವರ್ಷಕ್ಕೋ ಹರ‍್ಟ್ ಪ್ರಾಬ್ಲಂ, ಹಾರ್ಟ್ ಅಟ್ಯಾಕ್ ಆಗ್ತಿತ್ತು.. ಅದನ್ನ ಕೇಳ್ತಿದ್ವಿ.. ಆದ್ರೀಗ ೩೦-೪೦ ವರ್ಷಕ್ಕೆ ಹರ‍್ಟ್ ಅಟ್ಯಾಕ್ ಆಗೋದು ಸಾಮಾನ್ಯ ಆಗ್ತಿದೆ..

ಅದರಲ್ಲೂ ಈ ೨ ರ‍್ಷಗಳಿಂದ ಹರ‍್ಟ್ ಅಟ್ಯಾಕ್ ಕೇಸ್ ಹೆಚ್ಚಾಗುತ್ತಾ ಹೋಗುತ್ತಿದೆ. ಅದಕ್ಕೆ ಮೆಂಟಲ್ ಸ್ಟೆçಸ್, ಬಾಡಿ ಸ್ಟೆçಸ್, ಕೆಲಸದ ಸ್ಟೆçಸ್, ಫ್ಯಾಮಿಲಿ ಹಿಸ್ಟರಿ ಕೂಡ ಆಗಿರಬಹುದು.

ಆದ್ರೆ ಮತ್ತೆರಡು ಪ್ರಮುಖ ಬದಲಾವಣೆಯೂ ಇದಕ್ಕೆ ಕಾರಣ ವೆನ್ನ ಬಹುದು.

ಎರಡು ವರ್ಷಗಳಲ್ಲಿ ಚೇಂಜ್ ಆಗಿದ್ದೇನು…

೧. ಕೊರೋನಾ..
ಕೊರೊನಾ ಸಾಂಕ್ರಾಮಿಕ ರೋಗ ಇಡೀ ವಿಶ್ವವನ್ನೇ ಮರಣಕೂಪಕ್ಕೆ ತಳ್ಳಿತ್ತು ಈ ರೋಗಕ್ಕೆ ತುತ್ತಾದವರಿಗೂ ಹರ‍್ಟ್ ಅಟ್ಯಾಕ್ ಗೋಚರವಾಗುತ್ತಿತ್ತು.ಜೊತೆಗೆ ಇತ್ತೀಚೆಗಷ್ಟೇ ಪ್ರಪಂಚ ಮೊದಲಿನ ಸ್ಥಿತಿಗೆ ಬರುತ್ತಿದೆ. ಕೊರೊನಾ ಕಾಲದಿಂದ ಕುಂದು ಹೋಗಿದ್ದ ಆದಾಯವನ್ನು ಜನ ಈಗ ಗಳಿಸೊ ತರಾತುರಿಯಲ್ಲಿದ್ದಾರೆ.ಇದು ಒತ್ತಡಕ್ಕೆ ಕಾರಣವಾಗುತ್ತಿದೆ.

೨:ಸ್ಟೆçಸ್ ಲೆವಲ್
ಜಗತ್ತು ಬದಲಾಗುತ್ತಿದೆ.ಸ್ರ‍್ಧಾತ್ಮಕ ಜಗತ್ತಿನಲ್ಲಿ ಎಷ್ಟು ಗಳಿಸಿದರೂ ಸಾಲದು ಸಂಸಾರ, ವ್ಯವಹಾರಗಳ ಸಮತೋಲನ ಕಷ್ಟವಾಗುತ್ತಿರುವ ಜಗತ್ತಿಗೆ ಒತ್ತಡ ಹೆಚ್ಚಾಗುತ್ತಲೇ ಇದೆ.

೩.ಸ್ಮೋಕಿಂಗ್
ಯುವಪೀಳಿಗೆ ಟ್ರೆಂಡ್ ಗೂ ಆಧುನಿಕತೆಗೋ ಮಾರು ಹೋಗಿ ಮರಣವನ್ನು ತಾವೇ ಆಹ್ವಾನಿಸುತ್ತಿದ್ದಾರೆ. ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದಿದ್ದರೂ ಜನ ಮಾರುಹೋಗುತ್ತಿದ್ಧಾರೆ.

೪.ವರ್ಕ್ಔಟ್..
ಬೆಳೆಯುತ್ತಿರೋ ಪ್ರಪಂಚದಲ್ಲಿ ಜನ ಇಂದು ಆಧುನಿಕತೆಗೆ ಮಾರು ಹೋಗಿ ಬಾಡಿ ಬ್ಯುಲ್ಡ್ ಸೌಂರ‍್ಯ ಕಾಪಾಡುವ ದೃಷ್ಟಿಯಿಂದ ಹುಚ್ಚು ಸಾಹಸಕ್ಕೆ ಕೈ ಹಾಕುತ್ತಿದ್ದಾರೆ. ಅಗತ್ಯಕ್ಕಿಂತ ಹೆಚ್ಚು ರ‍್ಕೌಟ್ ಮಾಡಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ವರದಿಗಳ ಪ್ರಕಾರವಾಗಿ ಭಾರತದಲ್ಲೇ ಹೆಚ್ಚು ಹೃದಯಾಘಾತ..

ಭಾರತವನ್ನ ಡಯಾಬಿಟಿಕ್ ಕ್ಯಾಪಿಟಲ್ ಅಂತನೂ ಕರೀತಾರೆ.. ಇದರಿಂದ ಭಾರತದಲ್ಲಿ ಸಹಜವಾಗಿಯೇ ಹಾರ್ಟ್ ಅಟ್ಯಾಕ್ ಜಾಸ್ತಿ ಆಗುತ್ತೆ.ಭಾರತೀಯರ ಜಿನೆಟಿಕ್ಸ್ನಲ್ಲೇ ಸಮಸ್ಯೆ ಇದೆ ಅನ್ನೋ ವಾದವೂ ಇದೆ.. ಜೊತೆ ಫ್ಯಾಮಿಲಿ ಹಿಸ್ಟರಿ ಕೂಡ ತುಂಬಾನೇ ಇಂಪರ‍್ಟೆAಟ್..
ಭಾರತೀಯರಲ್ಲಿ ಬ್ಲಡ್ ವೆಸಲ್ಸ್ ಇದೆ. ಈ ಕಾರಣಕ್ಕೆ ಭಾರತೀಯರು ಹೆಚ್ಚು ಹರ‍್ಟ್ ಅಟ್ಯಾಕ್ ಗೆ ಒಳಗಾಗುತ್ತಿದ್ದಾರೆ. ಅಮೆರಿಕದಲ್ಲಿ ೬೦ ವರ್ಷಕ್ಕೆ ಹಾರ್ಟ್ ಸಮಸ್ಯೆ ರ‍್ತಿದೆ.

ಒಟ್ನಲ್ಲಿ ಕಾರಣ ಏನೇ ಇರಬಹುದು ಆದರೆ ನಮ್ಮ ಆರೋಗ್ಯ ನಮ್ಮ ಕೈಯಲ್ಲಿರುತ್ತೆ ಆದ್ದರಿಂದ ಚೆಕ್ ಮಾಡಿಕೊಳ್ಳೋದೇ ಒಳ್ಳೇದು..

- Advertisement -

Latest Posts

Don't Miss