- Advertisement -
Film News:
ಸೋನು ಸೂದ್ ಕಡೆಯಿಂದ ಕನ್ನಡದ ನಟಿ ಮಾನ್ವಿತಾ ಕಾಮತ್ ಕುಟುಂಬಕ್ಕೆ ಸಹಾಯ ಸಿಕ್ಕಿದೆ. ಇದನ್ನು ಮಾನ್ವಿತಾ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಮಾನ್ವಿತಾ ತಾಯಿಗೆ ಅನಾರೋಗ್ಯ ಕಾಡಿದ್ದು ಸೋನು ಸೂದ್ ಸಹಾಯ ಮಾಡಿದ್ದಾರೆ.. ಅವರಿಗೆ ಚಿಕಿತ್ಸೆ ಕೊಡಿಸಬೇಕಿತ್ತು. ಸೋನು ಸೂದ್ ಕಡೆಯಿಂದ ಇದಕ್ಕೆ ಸಹಾಯ ಸಿಕ್ಕಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಮಾನ್ವಿತಾ ಕಾಮತ್, ‘ಈಗತಾನೇ ಸೋನು ಸೂದ್ ಅವರ ಜತೆ ಮಾತನಾಡಿದೆ. ನನ್ನ ತಾಯಿಗೆ ಅವರು ಮಾಡಿದ ಸಹಾಯಕ್ಕೆ ಧನ್ಯವಾದ ಹೇಳಿದೆ. ನೀವು ನಿಜವಾದ ಹೀರೋ ಸರ್. ಎಲ್ಲದಕ್ಕೂ ಧನ್ಯವಾದ’ ಎಂದಿದ್ದಾರೆ ಮಾನ್ವಿತಾ ಕಾಮತ್. ‘ನಮ್ಮ ಸಂಕಷ್ಟದಲ್ಲಿ ಏಂಜಲ್ ರೀತಿ ಬಂದಿರಿ. ನಿಮ್ಮಿಂದಾಗಿ ನನ್ನ ತಾಯಿ ಇಂದು ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ಮಾನ್ವಿತಾ ಟ್ವಿಟ್ ಮಾಡಿದ್ದಾರೆ.
- Advertisement -