- Advertisement -
ಹೊಸದಿಲ್ಲಿ: ಒಂಬತ್ತನೆ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಅ.7ರಿಂದ ಆರಂಭವಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಆ.5 ಹಾಗೂ 6ರಂದು ಮುಂಬೈನ ಮಾರ್ಷಲ್ ಸ್ಪೋಟ್ಸ್‍ನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆದಿತ್ತು.
ಪ್ರೊ ಕಬಡ್ಡಿ ಲೀಗ್ ಸಂಘಟಕರಾದ ಮಾರ್ಷಲ್ ಸೋಟ್ರ್ಸ್ 9ನೇ ಆವೃತ್ತಿಯ ದಿನಾಂಕವನ್ನು ಪ್ರಕಟಿಸಿದೆ. ಅ.7ರಿಂದ ಆರಂಭವಾಗಿ ಡಿಸೆಂಬರ್ ಮಧ್ಯಾಹ್ನದವರೆಗೆ ನಡೆಯಲಿದೆ.
ಲೀಗ್ ಪಂದ್ಯಗಳು ಬೆಂಗಳೂರು, ಪುಣೆ ಮತ್ತು ಹೈದ್ರಾಬಾದ್‍ನಲ್ಲಿ ನಡೆಯಲಿದೆ. ವೇಳಾಪಟ್ಟಿಯನ್ನು ಮುಂದಿನ ವಾರ ಪ್ರಕಟಿಸಲಾಗುವುದೆಂದು ತಿಳಿಸಿದೆ. ಎಂಟನೆ ಆವೃತ್ತಿ ಬಯೋ ಬಬಲ್ ಅಡಿಯಲ್ಲಿ ಬೆಂಗಳೂರಿನಲ್ಲಿ ನಡೆದಿತ್ತು.
- Advertisement -