Sports News: ಜಾವಲಿನ್ ಥ್ರೋನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದ ನೀರಜ್ ಛೋಪ್ರಾ, ಕಳೆದ ವರ್ಷ ಇನ್‌ಸ್ಟಾಗ್ರಾಮ್ ಪೋಸ್ಟ್ ಹಾಕಿ, ಪಿ.ವಿ.ಸಿಂಧು ಒಟ್ಟಿಗೆ ವಿವಾಹವಾಗಲಿದ್ದಾರೆಂದು ಟ್ರೋಲ್ ಆಗಿದ್ದರು. ಬಳಿಕ ಅದು ಮ್ಯಾರೇಜ್ ಪೋಸ್ಟ್ ಅಲ್ಲ, ಕ್ರೀಡೆಗೆ ಸಂಬಂಧಿಸಿದ ಪೋಸ್ಟ್ ಅಂತಾ ಎಲ್ಲರಿಗೂ ಖಚಿತವಾಯ್ತು. ಅಲ್ಲದೇ, ಪಿ.ವಿ.ಸಿಂಧು ಉದ್ಯಮಿಯ ಜೊತೆ ಸಪ್ತಪದಿಯೂ ತುಳಿದಾಯ್ತು.
ಇನ್ನು ಓಲಂಪಿಕ್ಸ್ ಪದಕ ವಿಜೇತೆ ಮನುಭಾಕರ್, ನೀರಜ್ ಛೋಪ್ರಾಗೆ ಉತ್ತಮ ಜೋಡಿ ಅಂತಾ ಸೋಶಿಯಲ್ ಮೀಡಿಯಾದಲ್ಲಿ ಜನ ಮಾತಾಡಿಕೊಳ್ಳುತ್ತಿದ್ದರು. ಇದರ ಮಧ್ಯೆ ನೀರಜ್ ಛೋಪ್ರಾ, ಸೈಲೆಂಟ್ ಆಗಿ ಸಪ್ತಪದಿ ತುಳಿದಿದ್ದಾರೆ. ಇವರ ಜೀವನ ಸಂಗಾತಿ ಕೂಡ, ಕ್ರೀಡೆಗೆ ಸಂಬಂಧಿಸಿದವರೇ.
ಇವರ ಪತ್ನಿ ಹಿಮಾನಿ ಸದ್ಯ ಅಮೆರಿಕದಲ್ಲಿ ಓದುತ್ತಿದ್ದಾರೆ. ಅಲ್ಲದೇ ಇವರು ಕೂಡ ಟೆನ್ನಿಸ್ ಆಟಗಾರ್ತಿಯಾಗಿದ್ದಾರೆ. ನೀರಜ್ ಯಾವ ಗಣ್ಯರನ್ನೂ ಈ ಮದುವೆಗೆ ಆಹ್ವಾನಿಸಿರಲಿಲ್ಲ. ಈ ಮದುವೆ ಗುಟ್ಟಾಗಿ ನಡೆದಿದ್ದು, ವಧು-ವರನ ಸಂಬಂಧಿಕರಿಗೆ ಮಾತ್ರ ಆಹ್ವಾನವಿತ್ತು.
ನನ್ನ ಕುಟುಂಬದೊಂದಿಗೆ ಜೀವನದ ಹೊಸ ಅಧ್ಯಾಯ ಪ್ರಾರಂಭಿಸುತ್ತಿದ್ದೇನೆ. ಪ್ರೀತಿಯಿಂದ ಬಂಧಿತನಾಗಿದ್ದೇನೆ. ಎಂದೆಂದಿಗೂ ಸಂತೋಷವಾಗಿರುತ್ತೇನೆ ಎಂಬ ಬರಹ ಕೊಟ್ಟು ನೀರಜ್ ಛೋಪ್ರಾ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ವಿವಾಹದ ಬಗ್ಗೆ ಪೋಸ್ಟ್ ಹಾಕಿದ್ದಾರೆ.