Film News:
ರಕ್ಷಿತ್ ಶೆಟ್ಟಿಯವರೊಂದಿಗೆ ಎಂಗೇಜ್ಮೆಂಟ್ ಮುರಿದು ಬಿದ್ದ ಮೇಲೆ ರಶ್ಮಿಕಾ ಸದಾ ಒಂದಿಲ್ಲೊಂದು ವಿವಾದಗಳಿಂದಲೂ ಸುದ್ದಿಯಾಗುತ್ತಿದ್ದಾರೆ. ತಮ್ಮದೇ ಆದ ಫ್ಯಾನ್ ಫಾಲೋವರ್ಸ್ ಹೊಂದಿದ್ದರೂ, ಹಲವರು ಅವರನ್ನು ಟ್ರೋಲ್ ಮಾಡುತ್ತಲೇ ಇರುತ್ತಾರೆ. ನಟ ವಿಜಯ್ ದೇವರಕೊಂಡ ಅವರೊಂದಿಗೆ ನಟಿಸಿದ ಬಳಿಕ ಅವರೊಂದಿಗೆ ಆಗಾಗ ಕಾಣಿಸಿಕೊಳ್ಳುತ್ತಿದ್ದ ರಶ್ಮಿಕಾ ಆ ಕಾರಣಕ್ಕೂ ಸಖತ್ ಸುದ್ದಿಯಾಗಿದ್ದರು. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಡುವೆ ಲವ್ ಇದೆ ಎಂದೇ ಅಭಿಮಾನಿಗಳು ಭಾವಿಸಿದ್ದರು. ಆದರೆ ಈಗೀಗ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳದೇ ಇರುವುದಕ್ಕೆ ಬ್ರೇಕಪ್ ವದಂತಿಯೂ ಹಬ್ಬಿತ್ತು.
ಇದೀಗ ರಶ್ಮಿಕಾ ಮಂದಣ್ಣ ಅವರು ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಜೊತೆ ಒಂದೆರಡು ದಿನ ಕಾಣಿಸಿಕೊಂಡಿರುವುದಕ್ಕೆ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಇಬ್ಬರೂ ಯಾವುದೇ ಸಿನಿಮಾ ಮಾಡುತ್ತಿಲ್ಲ. ಹಾಗಿದ್ದರೆ ಇವರಿಬ್ಬರು ಒಟ್ಟಿಗೆ ಕಾಣಿಸಿಕೊಳ್ಳಲು ಕಾರಣವೇನು? ಎಂಬುದೇ ಸದ್ಯ ಅಭಿಮಾನಿಗಳ ಪ್ರಶ್ನೆ. ಆದರೆ ಕಾರ್ತಿಕ್ ಜೊತೆ ರಶ್ಮಿಕಾ ಕಾಣಿಸಿಕೊಳ್ಳುವುದಕ್ಕೆ ಕಾರಣ ಜಾಹೀರಾತೊಂದರಲ್ಲಿ ನಟಿಸುವುದಕ್ಕಾಗಿ.
ಹೌದು ಕಾರ್ತಿಕ್ ಆರ್ಯನ್ ಜೊತೆಗೆ ಜಾಹೀರಾತೊಂದರಲ್ಲಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ. ಈ ಜಾಹೀರಾತು ಸೀಕ್ವೆನ್ಸ್ ಮಾದರಿಯಲ್ಲಿದ್ದು, ಹಾಸ್ಯ ಪ್ರಧಾನವಾಗಿರಲಿದೆ ಎನ್ನಲಾಗಿದೆ. ಈಗಾಗಲೇ ಜನಪ್ರಿಯ ಬ್ರಾಂಡ್ಗಳ ರಾಯಭಾರಿಯಾಗಿರುವ ರಶ್ಮಿಕಾಗೆ ಜಾಹೀರಾತುಗಳಲ್ಲಿ ನಟಿಸಲು ಹಲವಾರು ಅವಕಾಶಗಳು ಅರಸಿ ಬರುತ್ತಿವೆ.
ಸುಮಲತಾ ಅಂಬರೀಷ್ ಹುಟ್ಟುಹಬ್ಬದಂದೇ ಅಭಿಷೇಕ್ ಹೊಸ ಮೂವಿ ಪೋಸ್ಟರ್ ರಿಲೀಸ್
ಮೇಘನಾ ರಾಜ್ ಕೈಯಲ್ಲಿ ಆ ಹೆಸರು…? ಎರಡನೇ ಮದುವೆ ವಿಚಾರಕ್ಕೆ ಉತ್ತರ ಇದೇನಾ..?!