Monday, July 22, 2024

Latest Posts

ಮೇಘನಾ ರಾಜ್ ಕೈಯಲ್ಲಿ ಆ ಹೆಸರು…? ಎರಡನೇ ಮದುವೆ ವಿಚಾರಕ್ಕೆ ಉತ್ತರ ಇದೇನಾ..?!

- Advertisement -

Film News:

ಪತಿ ಚಿರಂಜೀವಿ ಸರ್ಜಾ ಅವರ ನೆನಪುಗಳು ಮೇಘನಾ ರಾಜ್ ಹೃದಯದಲ್ಲಿ ಎಂದೆಂದಿಗೂ ಹಸಿರಾಗಿ ಇರಲಿವೆ ಅನ್ನೋದಕ್ಕೆ ಮತ್ತೊಂದು ಸಾಕ್ಷಿ ದೊರೆತಂತಾಗಿದೆ. ಹೊಸದಾಗಿ ಟ್ಯಾಟೂ ಹಾಕಿಸಿಕೊಂಡು  ಮೇಘನಾ  ಪ್ರೀತಿಯನ್ನು ಶಾಶ್ವತವಾಗಿಸಿದ್ದಾರೆ.

ಮೇಘನಾ ರಾಜ್​ ಸರ್ಜಾ ಅವರು ಸಿನಿಮಾ ಕೆಲಸಗಳಿಗೆ ಕೊಂಚ ಬಿಡುವು ನೀಡಿ ವಿದೇಶಕ್ಕೆ ತೆರಳಿದ್ದಾರೆ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಭಾಗಿ ಆಗಿದ್ದಾರೆ. ಅಲ್ಲಿಂದಲೇ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರ ಜೊತೆಗೆ ಅವರು ಶೇರ್​ ಮಾಡಿಕೊಂಡಿರುವ ಟ್ಯಾಟೂ ಫೋಟೋ ಸಖತ್​ ಗಮನ ಸೆಳೆಯುತ್ತಿದೆ.

ಚಿರಂಜೀವಿ ಸರ್ಜಾ ಮತ್ತು ರಾಯನ್​ ರಾಜ್​ ಸರ್ಜಾ ಹೆಸರುಗಳು ತಮ್ಮ ಕೈಮೇಲೆ ಶಾಶ್ವತವಾಗಿ ಇರುವಂತೆ ಮೇಘನಾ ರಾಜ್​ ಅವರು ಈ ಹಚ್ಚೆ ಹಾಕಿಸಿಕೊಂಡಿದ್ದಾರೆ. ಅವರ ಬದುಕಿನಲ್ಲಿ ಇವರಿಬ್ಬರು ತುಂಬ ಪ್ರಮುಖ ವ್ಯಕ್ತಿಗಳು. ವಿಶೇಷವಾದ ವಿನ್ಯಾಸದಲ್ಲಿ ಇರುವ ಈ ಟ್ಯಾಟೂ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಜನರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಆ ಮೂಲಕ ತಮ್ಮ ನೆಚ್ಚಿನ ನಟಿಗೆ ಪ್ರೀತಿ ತೋರುತ್ತಿದ್ದಾರೆ. ಮದುವೆಯಲ್ಲಿ  ಸುದ್ದಿಯಲ್ಲಿದ್ದ ಮೇಘನಾ ರಾಜ್ ಈ ರೀತಿಯಾಗಿ ಚಿರು ನೆನಪು ಶಾಶ್ವತ ಎಂಬ ಸಂದೇಶ ನೀಡಿದಂತಿತ್ತು ಈ ಟ್ಯಾಟು ಫೋಟೋ ಎನ್ನುತ್ತಿದ್ದಾರೆ ಅಭಿಮಾನಿಗಳು.

ನಟಿ ಸೊನಾಲಿ ಸಾವಿಗೆ ಮಹತ್ತರ ಟ್ವಿಸ್ಟ್: ಸಹಜ ಸಾವಲ್ಲ ಕೊಲೆ…!

ಬಾಲಿವುಡ್ ನಲ್ಲಿ ರಾಕಿ ಭಾಯ್ ಗೆ ನಂ.1 ಪಟ್ಟ..?!

ಮುಹೂರ್ತ ನೆರವೇರಿಸಿಕೊಂಡ ‘The Darwin’s in ದಂಡಿದುರ್ಗ’ ಸಿನಿಮಾ..ಹೊಸಬರಿಗೆ ಸಾಥ್ ಕೊಟ್ಟ ನಿರ್ದೇಶಕ ಸತ್ಯಪ್ರಕಾಶ್ ಹಾಗೂ ಅಜಯ್ ರಾವ್

- Advertisement -

Latest Posts

Don't Miss