Sunday, December 22, 2024

Latest Posts

ಎರಡು ಮಕ್ಕಳ ತಾಯಿ ಬಾಲ್ಯದ ಪ್ರೇಮಿಯೊಂದಿಗೆ ಎಸ್ಕೇಪ್..! ಮಹಿಳೆಯನ್ನು ತಮಿಳುನಾಡಿಗೆ ಹಿಂತಿರುಗಿಸಿದ ಪೊಲೀಸರು

- Advertisement -

Karavara News:

ತಮಿಳುನಾಡಿನಿಂದ ಕಾರವಾರಕ್ಕೆ ಓಡಿ ಬಂದ ಪ್ರೇಮಿಗಳನ್ನು ಟ್ರ್ಯಾಕ್ ಮಾಡಿ ತಮಿಳುನಾಡಿನ ಪೊಲೀಸರಿಗೆ ಕಾರವಾರ ಪೊಲೀಸರು ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.  ಎರಡು ಮಕ್ಕಳ ತಾಯಿಯೊಂದಿಗೆ ಯುವಕ ಪ್ರೀತಿಯಲ್ಲಿ ಬಿದ್ದಿದ್ದು, ಆಕೆಯೊಂದಿಗೆ ತಮಿಳುನಾಡಿನಿಂದ ಕಾರವಾರಕ್ಕೆ ಓಡಿ ಬಂದಿದ್ದ. ತಮಿಳುನಾಡಿನ ಪುದುಕೋಟೆ ಜಿಲ್ಲೆಯ ಗಣೇಶ್‌ ನಗರದ ನಿವಾಸಿಗಳಾದ ಅಯಿಷಾ ರೆಹಮತುಲ್ಲಾಹ್ (24) ಹಾಗೂ ಬೀರ್ ಮೈದಿನ್ (27) ನಡುವೆ ಪ್ರೇಮಾಂಕುರವಾಗಿತ್ತು. ಆರು ತಿಂಗಳಿನಿಂದ ಪ್ರೇಮಿಗಳು ಕಾರವಾರದ ಸೋನಾರವಾಡದಲ್ಲಿ ವಾಸವಾಗಿದ್ದರು.

ಮಹಿಳೆ ಈಗ ಮತ್ತೆ ಮೂರು ತಿಂಗಳು ಗರ್ಭಿಣಿಯಾಗಿದ್ದಾರೆ. ತನಗೆ ಇಷ್ಟವಿಲ್ಲದೇ ಪೋಷಕರ‌ ಒತ್ತಾಯಕ್ಕೆ ಮಹಿಳೆ ಆಯಿಷಾ ಮದುವೆಯಾಗಿದ್ದರು ಎನ್ನಲಾಗಿದೆ.  ಈ ಕಾರಣದಿಂದ ತನ್ನ ಪ್ರೇಮಿಯೊಂದಿಗೆ  ಆಯಿಷಾ ಓಡಿ ಬಂದಿದ್ದಾರೆ. ಮೆಕಾನಿಕಲ್ ಎಂಜಿನಿಯರ್ ಪದವೀಧರ ಬೀರ್ ಮೈದಿನ್ ಜತೆ ಆಯಿಷಾ ಓಡಿಬಂದಿದ್ದರು. ಮೈದಿನ್ ಬಿಇ ಪದವೀಧರನಾಗಿದ್ದು ಗಾರೆ ಕೆಲಸ ಮಾಡಿ ತನ್ನ ಪ್ರೇಮಿಯೊಂದಿಗೆ ಜೀವನ ನಡೆಸುತ್ತಿದ್ದ.

ತನ್ನ ಬಾಲ್ಯದ ಗೆಳತಿ ಅಯಿಷಾಳಿಗೆ ಮದುವೆಯಾಗಿ ಎರಡು ಮಕ್ಕಳಿದ್ದರೂ ಮೈದಿನ್ ಹಾರಿಸಿಕೊಂಡು ಬಂದಿದ್ದ.  ಆದರೆ ಸದ್ಯ ಪ್ರೇಮಿಗಳನ್ನು ಪತ್ತೆ ಮಾಡಿ ತಮಿಳುನಾಡಿನ ಪೊಲೀಸರಿಗೆ ಮತ್ತು ಯುವತಿಯ ಮಾವನಿಗೆ ಕಾರವಾರ ಪೊಲೀಸರು ಒಪ್ಪಿಸಿದ್ದಾರೆ.

ವಿದ್ಯಾರ್ಥಿನಿಯರಿಗೆ ಸ್ವಾಮೀಜಿಯಿಂದ ಲೈಂಗಿಕ ಕಿರುಕುಳ: ಪ್ರಕರಣ ದಾಖಲು

ಬೆಂಗಳೂರಿನಲ್ಲಿ ಪ್ರೇಯಸಿಯಿಂದ ಪ್ರಿಯಕರನ ಕಿಡ್ನಾಪ್…?!

ಸ್ನೇಹಿತೆಯಿಂದಲೇ ಕೊಲೆಯಾದ ಚಂದ್ರಕಲಾ…! 1 ವರ್ಷದ ಬಳಿಕ ರಹಸ್ಯ ಬಯಲು..!

- Advertisement -

Latest Posts

Don't Miss