ಬೆಳಗಾವಿ: ಬೈಕ್ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ, ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಅವರ ಕಾರು, ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೆ ಈಡಾಗಿದೆ. ಆದ್ರೇ ಕಾರು ಪಲ್ಟಿಯಾದ್ರೂ ಲಕ್ಷ್ಮಣ್ ಸವದಿಯವರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇಂದು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿಯ ಅವರು, ಅಥಣಿಯಿಂದ ಬೆಳಗಾವಿಗೆ ತೆರಳುತ್ತಿದ್ದಂತ ಸಂದರ್ಭದಲ್ಲಿ, ಹಾರೊಗೇರಿ ಪಟ್ಟಣದ ಬಳಿಯಲ್ಲಿ ಬೈಕ್ ಗೆ ಡಿಕ್ಕಿಯಾಗೋದನ್ನು ತಪ್ಪಿಸೋದಕ್ಕೆ ಹೋದಂತ ವೇಳೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಘಟಪ್ರಭ ಎಡದಂಡೆ ನಾಲೆಗೆ ಉರುಳಿ ಬಿದ್ದಿದೆ.
ಕೂಡಲೇ ಕಾರು ಉರುಳಿ ಬಿದ್ದಿದ್ದನ್ನು ಕಂಡಂತ ಸ್ಥಳೀಯರು ಕಾರಿನಲ್ಲಿದ್ದಂತ ಲಕ್ಷ್ಮಣ್ ಸವದಿ ಸೇರಿದಂತೆ ಐವರನ್ನು ರಕ್ಷಿಸಿದ್ದಾರೆ. ಹೀಗಾಗಿ ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಅವರು ಪಾರಾಗಿದ್ದಾರೆ. ಈ ಸಂಬಂಧ ಹಾರೊಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




