ಕೊಚ್ಚಿನ್ : ವಿಮಾನವಾಹಕ ನೌಕೆ ಐಎನ್‌ಎಸ್‌ ವಿಕ್ರಾಂತ್‌ಗೆ ಪ್ರಧಾನಿ ಚಾಲನೆ

K erala  News:

ಇಂದು [ಸೆ.2] ಮೋದಿ ಮಂಗಳೂರು  ಭೇಟಿ  ಹಿನ್ನಲೆ ಮಂಗಳೂರು ಫುಲ್  ಸನ್ನದ್ಧವಾಗಿದೆ. ಮಂಗಳೂರಿಗೆ  ಹೋಗೋ ಮೊದಲು ಕೇರಳಕ್ಕೆ ಆಗಮಿಸಿರೋ ಮೋದಿ  ಇಂದು  ವಿಮಾನವಾಹಕ ನೌಕೆ ಐಎನ್ ಎಸ್ ಗೆ ಚಾಲನೆ ನೀಡಿದ್ದಾರೆ.ದೇಶದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ಐಎನ್‌ಎಸ್‌ ವಿಕ್ರಾಂತ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ಕೊಚ್ಚಿಯ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ ಚಾಲನೆ ನೀಡಿದರು.

ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಕಮಿಷನಿಂಗ್ ಸಮಾರಂಭಕ್ಕೆ ಆಗಮಿಸುತ್ತಿದ್ದಂತೆ ಶಿಪ್‌ಯಾರ್ಡ್‌ನಲ್ಲಿ ಗಾರ್ಡ್ ಆಫ್ ಆನರ್ ಸ್ವೀಕರಿಸಿದರು. ಹೊಸ ನೌಕಾ ಧ್ವಜವನ್ನೂ ಈ ವೇಳೆ ಅನಾವರಣಗೊಳಿಸಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಸಿಎಂ ಪಿಣರಾಯಿ ವಿಜಯನ್ ಮತ್ತಿತರರು ಉಪಸ್ಥಿತರಿದ್ದರು.

ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ಅಡಿಯಲ್ಲಿ ಸಾರ್ವಜನಿಕ ವಲಯದ ಶಿಪ್‌ಯಾರ್ಡ್ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನಿಂದ ಐಎನ್‌ಎಸ್ ವಿಕ್ರಾಂತ್ ನಿರ್ಮಿಸಲ್ಪಟ್ಟಿದೆ. ಭಾರತೀಯ ನೌಕಾಪಡೆಯ ಆಂತರಿಕ ಯುದ್ಧನೌಕೆ ವಿನ್ಯಾಸ ಬ್ಯೂರೋವು ಇದನ್ನು ವಿನ್ಯಾಸಗೊಳಿಸಿದ್ದು, ಐಎನ್‌ಎಸ್ ವಿಕ್ರಾಂತ್‌ ದೇಶದ ಮೊದಲ ಸ್ವದೇಶಿ ವಿಮಾನವಾಹಕ ನೌಕೆಯಾಗಿದೆ. ಹಲವು ಆಧುನಿಕ ಯಾಂತ್ರೀಕತೃತ ವೈಶಿಷ್ಟ್ಯಗಳೊಂದಿಗೆ ನಿರ್ಮಿಸಲಾದ ನೌಕೆಯು ಭಾರತದ ಕಡಲಿನ ಇತಿಹಾಸದಲ್ಲೇ ಅತಿದೊಡ್ಡ ಹಡಗಾಗಿದೆ ಎಂದು ಹೇಳಲಾಗಿದೆ.

ಮಂಗಳೂರು: ಮೋದಿ ಕಾರ್ಯಕ್ರಮಕ್ಕೆ ಕಪ್ಪು ಬಟ್ಟೆ ತರುವಂತಿಲ್ಲ, ಧರಿಸುವಂತಿಲ್ಲ…!

ಮಂಗಳೂರು: ಮೋದಿಗೆ ಭಾಗವತಿಕೆಯ ಸ್ವಾಗತ…!

ಮಂಗಳೂರು: ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಬೃಹತ್ ಪೆಂಡಾಲ್ ನಿರ್ಮಾಣ

About The Author