BREAKING: ರಾಜ್ಯ ಸರ್ಕಾರದಿಂದ ಎಸ್ಸಿ, ಎಸ್ಟಿ ಸಮುದಾಯಕ್ಕೆ ಘೋಷಿಸಿದ್ದ 75 ಯುನಿಟ್ ಉಚಿತ ಯೋಜನೆ ವಾಪಾಸ್

ಬೆಂಗಳೂರು: ರಾಜ್ಯ ಸರ್ಕಾರದಿಂದ ಬಡತನ ರೇಖೆಗಿಂತ ಕಡಿಮೆಯಿರುವಂತ ಬಿಪಿಎಲ್ ಪಡಿತರ ಚೀಟಿಯ ಎಸ್ಸಿ, ಎಸ್ಟಿ ಸಮುದಾಯದವರಿಗೆ ಘೋಷಣೆ ಮಾಡಿತ್ತು. ಆದ್ರೇ ಈ ಯೋಜನೆಯನ್ನು ಇದೀಗ ದಿಢೀರ್ ವಾಪಾಸ್ ಪಡೆಯಲಾಗಿದೆ.

ಈ ಬಗ್ಗೆ ಇಂಧನ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ಎಸ್ಸಿ, ಎಸ್ಟಿ ಸಮುದಾಯದ ಬಿಪಿಎಲ್ ಪಡಿತರ ಕುಟುಂಬಗಳಿಗೆ ಸರ್ಕಾರದಿಂದ 75 ಯುನಿಟ್ ಉಚಿತ ವಿದ್ಯುತ್ ಯೋಜನೆಯನ್ನು ಘೋಷಣೆ ಮಾಡಿ ದಿನಾಂಕ 24-08-2022ರಂದು ಆದೇಶಿಸಲಾಗಿತ್ತು ಎಂದಿದ್ದಾರೆ.

ರಾಜ್ಯ ಸರ್ಕಾರದಿಂದ ದಿನಾಂಕ 24-08-2022ರಂದು ಹೊರಡಿಸಿದ್ದಂತ ಉಚಿತ 75 ಯುನಿಟ್ ವಿದ್ಯುತ್ ಯೋಜನೆಯನ್ನು, ಈ ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ ಎಂಬುದಾಗಿ ಹೇಳಿದ್ದಾರೆ.

About The Author