ಗಣಪತಿ ವಿಸರ್ಜನೆಯಲ್ಲಿ ಕವಾಲಿ ಗಾಯನ: ಹಿಂದೂ–ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಹೊಸನಗರ

Mundagod News: ಮುಂಡಗೋಡ: ತಾಲೂಕಿನ ಕೋಡಂಬಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸನಗರ ಗ್ರಾಮದಲ್ಲಿ ನಡೆದ ಗಣಪತಿ ವಿಸರ್ಜನಾ ಕಾರ್ಯಕ್ರಮದಲ್ಲಿ ಹಿಂದೂ–ಮುಸ್ಲಿಂ ಭಾವೈಕ್ಯತೆ ಸಾರುವ ಅಪರೂಪದ ದೃಶ್ಯ ಕಂಡುಬಂದಿತು.

ಗಣಪತಿ ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ಕವಾಲಿ ಹಾಡು ಹಾಕುವ ಮೂಲಕ ಎರಡೂ ಸಮುದಾಯಗಳ ನಡುವಿನ ಸೌಹಾರ್ದತೆ ಮತ್ತು ಪರಸ್ಪರ ಗೌರವವನ್ನು ಸಾರಲಾಯಿತು. ಗಣಪತಿ ಹಬ್ಬದ ಸಂಭ್ರಮದಲ್ಲಿ ಮುಸ್ಲಿಂ ಸಮುದಾಯದವರು ಕೂಡ ಭಾಗವಹಿಸಿ, ಹಿಂದೂ ಸಮುದಾಯದವರೊಂದಿಗೆ ಸಂತಸ ಹಂಚಿಕೊಂಡರು.

ಹೊಸನಗರ ಗ್ರಾಮದ ಈ ನಡೆ ಧರ್ಮಕ್ಕಿಂತ ಮಾನವೀಯತೆ ಮತ್ತು ಸೌಹಾರ್ದತೆಯೇ ಮುಖ್ಯ ಎಂಬ ಸಂದೇಶ ಸಾರಿದ್ದು, ಸ್ಥಳೀಯರಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ಹಬ್ಬ-ಹರಿದಿನಗಳು ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತವಾಗದೆ, ಸಮಾಜದಲ್ಲಿ ಸೌಹಾರ್ದತೆ ಮತ್ತು ಸಹಬಾಳ್ವೆ ಬೆಳೆಸುವ ವೇದಿಕೆಗಳಾಗಬೇಕು ಎಂಬುದಕ್ಕೆ ಹೊಸನಗರ ಗ್ರಾಮದ ಗಣಪತಿ ವಿಸರ್ಜನಾ ಕಾರ್ಯಕ್ರಮ ಸಾಕ್ಷಿಯಾಯಿತು.

About The Author