Banglore News:
ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರು ಜನರ ಜೀವನ ಅಸ್ತವ್ಯಸ್ತವಾಗಿದೆ. ಒಂದೆಡೆ ಮನೆಗಳಿಗೆ ನುಗ್ಗಿದ ಮಳೆ ನೀರು ಅವಾಂತರ ಸೃಷ್ಟಿಸಿದರೆ, ಮತ್ತೊಂದೆಡೆ ರಸ್ತೆಗಳಿಂದ ನಿಂತ ನೀರಿನಿಂದಾಗಿ ಮಾರುದ್ದ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದೆ. ಬೆಂಗಳೂರಿನಲ್ಲಿ ಒಂದೆಡೆ ಸಂಚಾರಕ್ಕೆ ನಿಂತ ನೀರು ತೊಂದರೆಯಾಗಿರುವುದನ್ನು ಕಂಡು ಟ್ರಾಫಿಕ್ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ತಾವೇ ಸ್ವತಹ ರಸ್ತೆಗಿಳಿದು ನಿಂತಿದ್ದ ನೀರನ್ನು ಹರಿಯುವಂತೆ ರಸ್ತೆ ಬದಿಯಲ್ಲಿ ಹೊಂಡ ತೆಗೆಯಲು ಮುಂದಾಗಿದ್ದಾರೆ. ಕಬ್ಬಿಣದ ಸಲಕರಣೆ ಉಪಯೋಗಿಸಿ ಸಂಚಾರಿ ಪೊಲೀಸರು ತಾವೇ ರಸ್ತೆಯಲ್ಲಿ ನಿಂತಿದ್ದ ನೀರನ್ನು ರಸ್ತೆ ಬದಿಯಲ್ಲಿ ಹರಿಯುವಂತೆ ಮಾಡಿದ್ದಾರೆ. ನಂತರ ರಸ್ತೆ ಸಂಚಾರ ಸುಗಮವಾಗಿದೆ. ಹಾಗೆ ಪೊಲೀಸರ ಈ ಕಾರ್ಯವನ್ನು ಸಿಬ್ಬಂದಿಯೋರ್ವರು ಸಂಚಾರಿ ಪೊಲೀಸ್ ಟ್ವೀಟ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ನಮ್ಮ ಅಧಿಕಾರಿ ತುಕಾರಾಂ ಮತ್ತು ಸಿಬ್ಬಂದಿಗಳಾದ ಶ್ರೀ ಜಗದೀಶ್, ಆದರ್ಶ್, ಸಂಗಮೇಶ್ ಮತ್ತು ಮಂಜಪ್ಪ ಅವರು ಸಾಂಬಾರ ತೋಟದಲ್ಲಿ ನೀರು ನಿಂತಿದ್ದನ್ನು ತೆರವುಗೊಳಿಸಿದರು, ಈಗ ಕುಂದನಹಳ್ಳಿ ಕಡೆಗೆ ಸಂಚಾರವು ವೇಗವಾಗಿದೆ. ಎಂದು ಸಿಬ್ಬಂದಿ ಟ್ವೀಟ್ ಮಾಡಿದ್ದಾರೆ.
Our officer Tukaram and staffs Mr jagdeesh,Adharsh,Sangamesh and Manjappa cleared the water logging in spice garden,now traffic movement is faster towards kundanahalli.@DCPTrEastBCP @blrcitytraffic @acpwfieldtrf @AddlCPTraffic @CPBlr pic.twitter.com/4sSdQYvzo4
— HAL AIRPORT TRAFFIC BTP (@halairporttrfps) September 5, 2022




