Saturday, July 27, 2024

Latest Posts

ಭಾರತಕ್ಕೆ ವಿರೋಚಿತ ಸೋಲು

- Advertisement -

ದುಬೈ: ಮೊಹ್ಮದ್ ನವಾಜ್ ಅವರ ಅಮೋಘ ಬ್ಯಾಟಿಂಗ್ಗೆ ತತ್ತರಿಸಿದ ಭಾರತ ತಂಡ ಸೂಪರ್ 4ನಲ್ಲಿ ಪಾಕಿಸ್ಥಾನ ವಿರುದ್ಧ ವಿರೋಚಿತ ಸೋಲು ಅನುಭವಿಸಿದೆ.

ಇಲ್ಲಿನ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು. ಪಾಕ್ ತಂಡ 19.5 ಓವರ್ ಗಳಲ್ಲಿ 182/5 ರನ್ ಗಳಿಸಿತು.

182 ರನ್ ಗುರಿ ಬೆನ್ನತ್ತಿದ ಪಾಕ್ ತಂಡ ಆರಂಭಿಕ ಬಾಬರ್ ಅಜಂ (14ರನ್) ಅವರ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಫಾಕರ್ ಜಾಮನ್ (15), ಮೊಹ್ಮದ್ ನವಾಜ್ (42), ಮೊಹ್ಮದ್ ನವಾಜ್ (71), ಖುಷ್ದಿಲ್ ಶಾ ಅಜೇಯ (14), ಆಸಿಫ್ ಅಲಿ(16), ಈಫ್ತಿಕಾರ್ ಅಹಮದ್(2)ರನ್ ಗಳಿಸಿದರು.

ಭಾರತ ಪರ ಭೂವನೇಶ್ವರ್, ಆರ್ಷದೀಪ್, ರವಿ ಬಿಷ್ಣೊಯಿ, ಹಾರ್ದಿಕ್ ಮತ್ತು ಚಾಹಲ್ ತಲಾ 1 ವಿಕೆಟ್ ಪಡೆದರು.

ವಿರಾಟ್ ಅರ್ಧ ಶತಕ            

ಇದಕ್ಕೂ ಮುನ್ನ ಭಾರತ ತಂಡದ ಪರ ಕೆ.ಎಲ್. ರಾಹುಲ್ (28 ರನ್) , ರೋಹಿತ್ ಶರ್ಮಾ (28ರನ್), ವಿರಾಟ್ ಕೊಹ್ಲಿ (60 ರನ್), ಸೂರ್ಯ ಕುಮಾರ್ 13, ರಿಷಬ್ ಪಂತ್ (14 ರನ್)ಹಾರ್ದಿಕ್ ಪಾಂಡ್ಯ 0 ರನ್ ಗಳಿಸಿದರು. ಶಾದಾಬ್ ಖಾನ್ 31ಕ್ಕೆ 2 ವಿಕೆಟ್ ಪಡೆದರು.

 

 

- Advertisement -

Latest Posts

Don't Miss