Manglore News:
ದಕ್ಷಿಣ ಕನ್ನಡ ಸುಳ್ಯ ತಾಲೂಕಿನಲ್ಲಿ ಮನೆಗೆ ಬೆಂಕಿ ತಗುಲಿ ವ್ಯಕ್ತಿಯೋರ್ವ ಸಜೀವ ದಹನವಾಗಿರುವ ಘಟನೆ ನಡೆದಿದೆ. ಸುಳ್ಯದ ಐವರ್ನಾಡಿನ ಪರ್ಲಿಕಜೆ ಸುಧಾಕರ (47) ಸಾವನ್ನಪ್ಪಿದ ದುರ್ದೈವಿ. ಸುಧಾಕರರವರು ಬೆಳಗ್ಗೆ ಮನೆಯಲ್ಲಿ ಮಲಗಿದ್ದ ವೇಳೆ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆಯ ಒಂದು ಪಾರ್ಶ್ವ ಸುಟ್ಟು ಹೋಗಿತ್ತು. ಅಸೌಖ್ಯದಿಂದಿದ್ದ ಸುಧಾಕರ ಅವರಿಗೆ ತತ್‌ಕ್ಷಣಕ್ಕೆ ಹೊರಗೋಡಲು ಸಾಧ್ಯವಾಗದೆ ಇದ್ದ ಕಾರಣ ಬೆಂಕಿಯಲ್ಲಿ ಸಿಲುಕಿ ಸಜೀವ ದಹನವಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಮನೆಯಲ್ಲಿ ಸುಧಾಕರ್ ಮಾತ್ರ ಇದ್ದರು. ಈ ಸಮಯದಲ್ಲಿ ಸುಧಾಕರ ಅವರ ಪತ್ನಿ ಟ್ಯಾಪಿಂಗ್‌ಗೆ ತೆರಳಿದ್ದರು, ಪುತ್ರಿ ಶಾಲೆಗೆ ಹೋಗಿದ್ದಳು. ಮನೆಯೊಳಗೆ ಉರಿಸಿದ್ದ ದೀಪದಿಂದ ಬೆಂಕಿ ತಗುಲಿರಬಹುದು ಎಂದು ಅಂದಾಜಿಸಲಾಗಿದೆ. ಪೊಲೀಸರು, ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿದ್ದಾರೆ.
ಕೇಂದ್ರ, ರಾಜ್ಯ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ಕನ್ನಡ ಬಳಕೆ ಕಡ್ಡಾಯಗೊಳಿಸಿ ಸರ್ಕಾರ ಆದೇಶ