Technology News:
ಫ್ಲಿಪ್ ಕಾರ್ಟ್ ಗ್ರಾಹಕರಿಗೆ ವಿಶೇಷ ಸುದ್ದಿಯೊದನ್ನು ನೀಡಿದೆ. ಸದ್ಯ ಇದೀಗ ಅನೇಕ ಆಫರ್ ಗಳ ಸುರಿಮಳೆಯೇ ನೀಡಿದೆ. ಫ್ಲಿಪ್ ಕಾರ್ಟ್ ಶಾಪಿಂಗ್ ಉತ್ಸವವನ್ನೇ ನೀಡುತ್ತಿದೆ. ಖಂಡಿತ ನೀವು ಈ ಆಫರ್ ಗಳಿಗೆ ಮಾರುಹೋಗೋದಂತು ಗ್ಯಾರಂಟಿ ಆ ಆಫರ್ ಗಳು ಹೇಗಿವೆ ಹೇಳ್ತೀವಿ.
ಪ್ಲಿಪ್ಕಾರ್ಟ್ ಮಾರಾಟದ ಜೊತೆಗೆ, ಅಮೆಜಾನ್ ತನ್ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಶಾಪಿಂಗ್ ಉತ್ಸವವನ್ನು ಆಯೋಜಿಸುತ್ತಿದೆ ಎಂದು ಹೇಳಲಾಗಿದೆ.
ಆನ್ಲೈನ್ ಮಾರಾಟ ಮಳಿಗೆಯಾದ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಆಯೋಜನೆ ಮಾಡಲು ಮುಂದಾಗಿದೆ. ಇದೇ ತಿಂಗಳಿನಿಂದ ಗ್ರಾಹಕರಿಗೆ ಭರ್ಜರಿ ಉಡುಗೊರೆ ನೀಡಲು ತಯಾರಾಗಿದೆ.
ಪ್ಲಿಪ್ಕಾರ್ಟ್ ಮಾರಾಟವು ಈ ತಿಂಗಳ ಅಂತ್ಯದ ವರೆಗೆ ನಡೆಯುವ ಸಾಧ್ಯತೆಯಿದೆ. ಸೆಪ್ಟೆಂಬರ್ 23 ರಂದು ಲೈವ್ ಆಗಲಿದೆ ಮತ್ತು ಸೆಪ್ಟೆಂಬರ್ 30 ರವರೆಗೆ ಇರುತ್ತದೆ ಎಂದು ಟಿಪ್ಸ್ಟಾರ್ ಅಭಿಷೇಕ್ ಯಾದವ್ ಹೇಳಿದ್ದಾರೆ.
ಪ್ಲಿಪ್ಕಾರ್ಟ್ ಖರೀದಿದಾರರು iPhone 13 ಮತ್ತು iPhone 12 ನಲ್ಲಿ ಹಲವಾರು ಡೀಲ್ಗಳು ಮತ್ತು ರಿಯಾಯಿತಿಗಳನ್ನು ನೀಡುತ್ತದೆ ಎನ್ನಲಾಗಿದೆ. Flipkart ಮಾರಾಟ-ನಿರ್ದಿಷ್ಟ ರಿಯಾಯಿತಿಗಳ ಜೊತೆಗೆ ಬ್ಯಾಂಕ್ ಕೊಡುಗೆಗಳನ್ನು ಕ್ಲಬ್ ಮಾಡುವ ನಿರೀಕ್ಷೆಯಿದೆ.
ICICI ಬ್ಯಾಂಕ್ ಕಾರ್ಡ್ , Axis ಬ್ಯಾಂಕ್ ಖಾತೆದಾರಾಗಿದ್ದರೆ, ನೀವು ಆಯ್ದ ಉತ್ಪನ್ನಗಳ ಮೇಲೆ 10 ಪ್ರತಿಶತದಷ್ಟು ತ್ವರಿತ ರಿಯಾಯಿತಿ ಪಡೆಯುವ ಸಾಧ್ಯತೆಯಿದೆ.
ಬ್ಯಾಂಕ್ ಕೊಡುಗೆಗಳ ಜೊತೆಗೆ ಗ್ರಾಹಕರಿಗೆ ಇಎಂಐ ಮತ್ತು ಸ್ಮಾರ್ಟ್ಫೋನ್ಗಳ ಮೇಲೆ ವಿನಿಮಯ ಕೊಡುಗೆಗಳು ಸಹ ಸಿಗಲಿದೆ ಎನ್ನಲಾಗುತ್ತಿದೆ. ಸೆಪ್ಟೆಂಬರ್ 23ರಿಂದ ಈ ಪ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮೂಲಕ ಗ್ರಾಹಕರು ರಿಯಾಯಿತಿ ಬೆಲೆಗೆ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ ಎನ್ನಲಾಗಿದೆ.
ಇನ್ನು ಎಲೆಕ್ಟ್ರಾನಿಕ್ ವಸ್ತುಗಳಲ್ಲಿ ಅನೇಕ ಆಫರ್ ಗಳನ್ನು ನೀಡಿದೆ. Asus, Realme, POCO, Samsung, Vivo ಈ ಮೊಬೈಲ್ ಗಳ ಮೇಲೆ ಭಾರೀ ಡಿಸ್ಕೌಂಟ್ ಸೇಲ್ ನಡೆಯುತ್ತಿದೆ. ಎಲೆಕ್ಟ್ರಾನಿಕ್ ವಸ್ತುಗಳಲ್ಲಿ ಕೇವಲ 80% ಆಫರ್ ನೀಡಲಾಗುತ್ತಿದೆ. ಇನ್ನು ಟ್ರಿಮ್ಮರ್ ಗಳ ಮೇಲೆ 75% ಆಫರ್ ನೀಡುತ್ತಿದೆ. ಜೊತೆಗೆ ಲ್ಯಾಪ್ ಟಾಪ್ ಗಳ ಮೇಲೆ 40% ಆಫರ್ ಗಳನ್ನು ನೀಡಿದೆ. ಪ್ರಿಂಟರ್ ಮತ್ತು ಮಾನಿಟರ್ ಮೇ;ಲೆ 80% ಆಫರ್ ಗಳನ್ನು ನೀಡಿದೆ.
ಇನ್ನು ಫ್ಯಾಶನ್ ಮೇಲು ಬೃಹತ್ ಆಫರ್ ನೀಡಿದೆ 60 ರಿಂದ 80 % ಆಫರ್ ನೀಡಿದೆ. ನೈಕಾ ಅಡಿದಾಸ್ ಪೂಮಾ ದಂತಹ ಬ್ರಾಂಡ್ ಗಳಿಗೆ ಇದೀಗ ಕೇವಲ50 ರಿಂದ 80% ನಷ್ಟು ಆಫರ್ ಗಳನ್ನು ನೀಡಿದೆ.
ಬ್ಯೂಟಿ ಕಾಸಮೆಟಿಕ್ಸ್ ಇರಬಹುದು ಅಥವಾ ಟಾಯ್ಸ್ ಸ್ಪೋರ್ಟ್ಸ ಐಟೆಮ್ಸ್ ಇರಬಹುದು ಎಲ್ಲದರ ಮೇಲು ಆಫರ್ ಗಳ ಸುರಿಮಳೆ ನೀಡುತ್ತಿದೆ. 85 80% ಆಫರ್ ನೀಡಿದೆ.
ಫರ್ನಿಚರ್ ಮ್ಯಾಟ್ರೆಸ್ ಗಳ ಮೇಲೂ ಫುಲ್ ಆಫರ್ ಗಳನ್ನೇ ನೀಡಿದೆ. 85 % ಆಫರ್ ಗಳನ್ನು ನೀಡಿದೆ.
ಎಸ್ಸಿ, ಎಸ್ಟಿ ಸಮುದಾಯದವರ ಗಮನಕ್ಕೆ: ಉಚಿತ ವಿದ್ಯುತ್ ಅನುಷ್ಠಾನಕ್ಕೆ ಹೊಸ BESCOMನಿಂದ ಆ್ಯಪ್
ಬೆಂಗಳೂರಿನಲ್ಲಿ ಬೆಸ್ಕಾಂ ನಿರ್ಲಕ್ಷ್ಯಕ್ಕೆ ವಿದ್ಯುತ್ ಪ್ರವಹಿಸಿ ಯುವತಿ ಸಾವನ್ನಪ್ಪಿಲ್ಲ – ಬೆಸ್ಕಾಂ ಸ್ಪಷ್ಟನೆ