ರಸ್ತೆಯಲ್ಲಿ ನಡೆದಾಡುತ್ತಿದ್ದ ವೃದ್ಧನ ಮೇಲೆ ಎಗರಿದ ಚಿರತೆ…!

Udupi News:

ವ್ಯಕ್ತಿಯ ಮೇಲೆ  ಚಿರತೆಯೊಂದು ಏಕಾ ಏಕಿ ದಾಳಿ ಮಾಡಿದ ಘಟನೆ ನಡೆದಿದೆ. ಸದ್ಯ ವೃದ್ಧ ಅಧೃಷ್ಟವಶಾತ್ ಪಾರಾಗಿದ್ದಾರೆ. ಉಡುಪಿಯಲ್ಲಿ  ಈ ಘಟನೆ ನಡೆದಿದೆ.

ಉಡುಪಿಯ ಕೃಷ್ಣ ಶೆಟ್ಟಿ ಎಂಬವರು ಮುಲ್ಲಡ್ಕದ ರಾಜಶ್ರೀ ರೈಸ್ ಮಿಲ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಚಿರತೆ ಏಕಾಏಕಿ ಮೇಲೆರಗಿದೆ. ಗಾಯಗೊಂಡ ‌ ಕೃಷ್ಣ ಶೆಟ್ಟಿಯವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಮತ್ತು ಪೊಲೀಸ್ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದಾರೆ.

ಕಳೆದ ತಿಂಗಳು ಚಿರತೆಯೊಂದು ಬೋನಿಗೆ ಬಿದ್ದಿದ್ದು, ಪರಿಸರದಲ್ಲಿ ಇನ್ನೆರಡು ಚಿರತೆಗಳು ಓಡಾಡುತ್ತಿವೆ ಎಂಬುವುದಾಗಿ ಸ್ಥಳಿಯರು ಆತಂಕ ವ್ಯಕ್ತಪಡಿಸಿದ್ದು ಚಿರತೆ ‌ಹಿಡಿಯುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳ  ಬಳಿ ಗ್ರಾಮಸ್ಥರು ಆಗ್ರಹಿಸಿದ್ದಾರೆ ಎನ್ನಲಾಗಿದೆ.

ಮನೆಯೊಳಗೆ ಅವಿತು ಕುಳಿತ ಚಿರತೆ…! ಮುಂದೇನಾಯ್ತು ಗೊತ್ತಾ..?

ಕುಡಿದ ಮತ್ತಿನಿಂದ ರೈಲ್ವೇ ಹಳಿಯಲ್ಲಿ ಮಲಗಿದ…! ಮುಂಜಾನೆ ವೇಳೆಗೆ ಶವವಾದ…!

ಎಣ್ಣೆ ಏಟಿನಲ್ಲೇ ಟೀಚರ್ ಪಾಠ…!

About The Author