Technology News:
ನಿಮಗೇನಾದ್ರು ಕಾರು ಚಲಾಯಿಸುವಾಗ ನಿದ್ದೆ ಬರುತ್ತಾ ಹಾಗಿದ್ರೆ ಈ ಉಪಕರಣ ನಿಮಗೆ ಬಹಳ ಉಪಕಾರಿಯಾಗುತ್ತೆ ಹೌದು ಆಂಟಿ ಸ್ಲೀಪ್ ಅಲರಾಂ ಸಿಸ್ಟಮ್ ಸಾಧನ ಇದೀಗ ನಿಮಗೆ ಪರಿಹಾರ ನೀಡುತ್ತದೆ.
ಜನಪ್ರಿಯ ಇ-ಕಾರ್ಟ್ ಆಂಟಿ ಸ್ಲೀಪ್ ಅಲರಾಂ ಸಿಸ್ಟಮ್ ಸಾಧನ ಖರೀದಿಗೆ ಲಭ್ಯವಿದೆ. ಈ ಸಾಧನವು ಕಾರು ಚಾಲನೆ ಮಾಡುವ ಸಂದರ್ಭದಲ್ಲಿ ಚಾಲಕನು ನಿದ್ದೆ ಮಾಡುವಾಗ ಎಚ್ಚರಿಸುತ್ತದೆ. ಈ ಡಿವೈಸ್‌ನ ಬೆಲೆ ಕೇವಲ 499ರೂ. ಆಗಿದೆ. ಈ ಸಾಧನವನ್ನು ಅಮೆಜಾನ್ ಮತ್ತು ಫ್ಲಿಫ್ ಕಾರ್ಟ್ ತಾಣಗಳಲ್ಲಿ ಕಾಣಬಹುದು. ಈ ಡಿವೈಸ್ ಅನ್ನು ಚಾಲಕರು ಕಿವಿಯ ಮೇಲೆ ಧರಿಸಬೇಕು, ಇದು ನಿದ್ದೆ ಮಾಡುವಾಗ ಚಾಲಕನನ್ನು ಎಚ್ಚರವಾಗಿರಿಸುತ್ತದೆ.
ಆಂಟಿ ಸ್ಲೀಪ್ ಅಲರಾಂ ಸಿಸ್ಟಮ್ ಸಾಧನವು ದಣಿದ ತಕ್ಷಣ ಅದನ್ನು ಧರಿಸುವವರಿಗೆ ಎಚ್ಚರಿಕೆ ನೀಡುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ನರ‍್ದಿಷ್ಟ ಕೋನದ ನಂತರ ನಿಮ್ಮ ತಲೆಯನ್ನು ಓರೆಯಾದ ತಕ್ಷಣ ಈ ಸಾಧನವು ಚಾಲಕರನ್ನು ಎಚ್ಚರಗೊಳಿಸುತ್ತದೆ. ಹಾಗೆಯೇ ಇದು ಸ್ವಿಚ್ ಆಫ್ ಮಾಡಲು ಬಟನ್ ಪಡೆದಿದೆ.