ಅಮೂಲ್ಯ ಗೆ ಹುಟ್ಟುಹಬ್ಬದ ಸಂಭ್ರಮ…!

Film News:

ಅಮೂಲ್ಯ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಈ ಹುಟ್ಟು ಹಬ್ಬಕ್ಕೆ ವಿಶೇಷ ಅನ್ನುವಂತೆ ಎರಡು ಮಕ್ಕಳು ಜೊತೆಯಾಗಿವೆ. ಹೀಗಾಗಿ ಅಮೂಲ್ಯ ಬಾಳಲ್ಲಿ ಸಂಭ್ರಮ ಮನೆಮಾಡಿದೆ. ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಅಮೂಲ್ಯ ಅವರಿಗೆ ಅವರ ಅಭಿಮಾನಿಗಳು ಎಂದಿನಂತೆ ಬೇಡಿಕೆ ಇಟ್ಟಿದ್ದಾರೆ. ಆದಷ್ಟು ಬೇಗ ಮತ್ತೆ ನೀವು ಸಿನಿಮಾ ರಂಗಕ್ಕೆ ಬರಬೇಕು ಎಂದು ಮನವಿ ಮಾಡಿದ್ದಾರೆ. ಮದುವೆ ನಂತರ ಮತ್ತೆ ಅಮೂಲ್ಯ ನಟಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಅಭಿಮಾನಿಗಳ ಆಸೆ ಈಡೇರಲಿಲ್ಲ.ಇನ್ನಾದರೂ ಸಿನಿ ರಂಗಕ್ಕೆ ಮತ್ತೆ ಬರಲಿ ಎಂದು ಕೇಳುತ್ತಿದ್ದಾರೆ.

 

About The Author