Political News: ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ನಾಯಕರ ವಿರುದ್ಧ ಆಗಾಗ ವಾಗ್ದಾಳಿ ನಡೆಸುತ್ತಿತೋದು ಎಲ್ಲರಿಗೂ ತಿಳಿದಿರುವ ಸಂಗತಿ. ಅದೇ ರೀತಿ ಇಂದು ಕೂಡ ಯತ್ನಾಳ್ ಕಾಂಗ್ರೆಸ್ ರಾಷ್ಟ್ರೀಯ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ಈ ಬಗ್ಗೆ ಮತ್ತೆ ಪ್ರದೀಪ್ ಈಶ್ವರ ಆಕ್ರೋಶ ವ್ಯಕ್ತಪಡಿಸಿ, ಎಕ್ಸ್ ಖಾತೆಯಲ್ಲಿ ಯತ್ನಾಳ್ ವಿರುದ್ಧ ಕಿಡಿಕಾರಿದ್ದಾರೆ. ಯತ್ನಾಳ್ ಎಂಬ ಅರೆಹುಚ್ಚ ಇಂದು ಮತ್ತೆ ನಾಲಿಗೆ ಹರಿಬಿಟ್ಟಿದ್ದಾನೆ. ನಮ್ಮ ಪಕ್ಷದ ರಾಷ್ಟ್ರೀಯ ನಾಯಕರು ಮತ್ತು ನಮ್ಮ ಆತ್ಮಗೌರವವಾದ ಇಂದಿರಾಗಾಂಧಿ ಅವರು ಮತ್ತು ರಾಜೀವ್‌ಗಾಂಧಿ ಅವರ ಬಗ್ಗೆ ಕೇವಲವಾಗಿ ಮಾತನಾಡಿದ್ದಾನೆ. ನಾನು ಯತ್ನಾಳ್ ಎಂಬ ಅಲ್ಪಜ್ಞಾನಿಗೆ ಹೇಳಲು ಬಯಸುತ್ತೇನೆ. ಯತ್ನಾಳ್ ಅವರೇ, ನಿಮ್ಮ ನಾಲಿಗೆ ನಿಯಂತ್ರಣದಲ್ಲಿರಬೇಕು. ಮಾತು ನಿಮಗಿಂತ ಚೆಂದವಾಗಿ ನಾವು ಮಾತನಾಡಬಲ್ಲೆವು. ಮತ್ತೊಮ್ಮೆ ಎಚ್ಚರಿಸುತ್ತಿದ್ದೇನೆ, ನಮ್ಮ ನಾಯಕರ ಬಗ್ಗೆ ಮಾತನಾಡುವಾಗ ಮೈಮೇಲೆ ಪ್ರಜ್ಞೆ ಇರಬೇಕು ಎಂದು ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದ್ದಾರೆ..
ಕೆಲ ದಿನಗಳ ಹಿಂದೆ ರಾಹುಲ್ ಗಾಂಧಿ ಡಿಎನ್‌ಎ ರಿಪೋರ್ಟ್ ಬಗ್ಗೆ ಯತ್ನಾಳ್ ವ್ಯಂಗ್ಯವಾಡಿದ್ದ ವೇಳೆ, ಪ್ರದೀಪ್ ಈಶ್ವರ ಯತ್ನಾಳ್ ಅವರನ್ನು ಬೊಗಳುವ ನಾಯಿ ಎಂದೇ ಸಂಬೋಧಿಸಿದ್ದರು.
ಯತ್ನಾಳ್ ಎಂಬ ಮಾಜಿ ಕೇಂದ್ರ ಮಂತ್ರಿ ಮತ್ತು ಕಚ್ಚಲು ಸಾಧ್ಯವಾಗದ, ಕೇವಲ ಬೊಗಳುತ್ತಲೇ ಕಾಲ ಕಳೆಯುತ್ತಿರುವ ಯತ್ನಾಳ್‌ರವರು ನಮ್ಮ ಪಕ್ಷದ ರಾಷ್ಟ್ರೀಯ ನಾಯಕರ ಬಗ್ಗೆ ಕೇವಲವಾಗಿ ಮಾತನಾಡುತ್ತಿದ್ದಾರೆ. ಯತ್ನಾಳ್‌ರವರೇ, ನಿಮ್ಮ DNA ಬಗ್ಗೆ ನನಗೆ ಸಂಶಯವಿದೆ. ನಿಮ್ಮ DNA Report ಅನ್ನು ರಾಜ್ಯದ ಜನತೆಯ ಮುಂದೆ ಇಡಿ. ಆ Report ನೋಡಿ ನಮಗೆ ಸಮಾಧಾನವಾದ ಮೇಲೆ ನೀವು ಮತ್ತೊಬ್ಬರ DNA Report ಬಗ್ಗೆ ಕೇಳಲು ಬನ್ನಿ ಎಂದು ಪ್ರದೀಪ್ ಈಶ್ವರ್ ಕಿಡಿಕಾರಿದ್ದರು.
ಒಟ್ಟಾರೆಯಾಗಿ ಪ್ರದೀಪ್ ಈಶ್ವರ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ತಮ್ಮದೇ ಪಕ್ಷದ ಸಚಿವ ಸುಧಾಕರ್ ಅವರ ವಿಚಾರವಾಗಿ ಮತ್ತು ರಕ್ಷಾ ರಾಮಯ್ಯ ವಿಚಾರವಾಗಿ ವಾಗ್ದಾಳಿ ನಡೆಸಿ, ಪ್ರದೀಪ್ ಈಶ್ವರ್ ಕಾಂಗ್ರೆಸ್ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.




