Special News:
ಇದ್ದಕ್ಕಿದ್ದಂತೆ ಸಿಂಹ ಮತ್ತು ಹುಲಿಯ ಮಧ್ಯೆ ಕಾಳಗ ಶುರುವಾಗಿದೆ. ಸಿಂಹದ ಮೇಲೆ ಅನಿರೀಕ್ಷಿತವಾಗಿ ದಾಳಿ ಮಾಡುತ್ತದೆ ಹುಲಿ. ಸಿಂಹ ಕಾಡಿನ ರಾಜ ಹಾಗಾಗಿ ಗೆಲ್ಲಬೇಕು ಎನ್ನುವುದು ಸಾಮಾನ್ಯ ನಿರೀಕ್ಷೆ. ಆದರೆ ಅನೇಕ ಸಂಶೋಧನಾ ವರದಿಗಳ ಪ್ರಕಾರ, ಹುಲಿಯು ಸಿಂಹದ ವಿರುದ್ಧ ಗೆಲ್ಲುವ ಸಾಧ್ಯತೆ ಹೆಚ್ಚಿರುತ್ತದೆ. ಬೆಂಗಾಲ್ ಹುಲಿ ಮತ್ತು ಆಫ್ರಿಕನ್ ಸಿಂಹದ ನಡುವಿನ ಕಾಳಗದಲ್ಲಿ ಶೇ.೯೦ ರಷ್ಟು ಹುಲಿಯೇ ಗೆಲ್ಲುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ವಿಜ್ಞಾನಿಗಳು. ಸಿಂಹಕ್ಕಿಂತಲೂ ಹುಲಿ ಚುರುಕು. ಇವುಗಳು ಕಾದಾಟಕ್ಕೆ ಬಿದ್ದಾಗ ಹುಲಿಯ ಪಟ್ಟುಗಳು ಎಷ್ಟು ಬಲಿಷ್ಠ ಎನ್ನುವುದು ಅರಿವಿಗೆ ಬರುತ್ತದೆ. ಹುಲಿಯು ಸಿಂಹಕ್ಕಿಂತ ಶೇ. ೫ ರಷ್ಟು ಎತ್ತರ ಮತ್ತು ಶೇ. ೮ ರಷ್ಟು ತೂಕದಲ್ಲಿ ಹೆಚ್ಚಿರುತ್ತದೆ. ಈ ವಿಡಿಯೋದಲ್ಲಿ ಹುಲಿ ಮತ್ತು ಸಿಂಹ ‘ಮಾಡು ಇಲ್ಲವೆ ಮಡಿ’ ಎಂಬಂತೆ ಬಿರುಸಿನಿಂದ ಕಾದಾಟಕ್ಕೆ ಬಿದ್ದಿವೆ. ‘ನೇಪಾಳ ಊ೨ಔ’ ಚಾನೆಲ್ ಈ ವಿಡಿಯೋ ಅನ್ನು ಯೂಟ್ಯೂಬ್ನಲ್ಲಿ ಹಂಚಿಕೊಂಡಿದೆ. ೩೮ ಮಿಲಿಯನ್ ಜನರು ಈ ವಿಡಿಯೋ ವೀಕ್ಷಿಸಿದ್ದರಿಂದ ಇದು ವೈರಲ್ ಆಗಿದೆ ಎನ್ನಲಾಗಿತ್ತಿದೆ.

