Sunday, December 22, 2024

Latest Posts

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ..!

- Advertisement -

ಮಂಡ್ಯ: ಜಿಲ್ಲೆಯಾದ್ಯಂತ ನೀರಿಲ್ಲದೆ ಸೊರಗಿದ್ದ ರೈತರ ಬೆಳೆಯಲ್ಲಿ ನವಚೈತನ್ಯ ತಂದಿರುವ ಕಾವೇರಿ ಇದೀಗ ತಮಿಳುನಾಡಿನತ್ತ ಮುಖ ಮಾಡಿದ್ದಾಳೆ. ಹೌದು, ಕಾವೇರಿ ನದಿ ನೀರು ನಿರ್ವಹಣಾ ಮಂಡಳಿಯ ಸೂಚನೆಯಂತೆ ಇದೀಗ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಲಾಗಿದೆ.

ಮಂಡ್ಯ ಜಿಲ್ಲೆಯಾದ್ಯಂತ ಬೆಳೆಗಳು ನೀರಿಲ್ಲದೆ ಒಣಗುತ್ತಿದ್ದ ಹಿನ್ನೆಲೆಯಲ್ಲಿ ನಿರಂತರ ಹೋರಾಟ ನಡೆಸಿದ ರೈತರು ಕೊನೆಗೂ ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಕೆಆರ್ ಎಸ್ ನಿಂದ ಮಂಡ್ಯ ಜಿಲ್ಲಾದ್ಯಂತ ನಾಲೆಗಳಿಗೆ ನೀರು ಹರಿಬಿಟ್ಟಿದ್ದು ರೈತರಲ್ಲಿ ಮಂದಹಾಸ ಮೂಡಿಸಿತ್ತು. ಮಂಡ್ಯದ ವಿ.ಸಿ ನಾಲೆ ಸೇರಿದಂತೆ ಜಿಲ್ಲೆಯ ಎಲ್ಲಾ ನಾಲೆಗಳು ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಇದೀಗ ತಮಿಳುನಾಡಿಗೆ ಕಾವೇರಿ ನೀರು ಹರಿಬಿಡಲಾಗಿದೆ. ಕಾವೇರಿ ನದಿ ನೀರು ನಿರ್ವಹಣಾ ಮಂಡಳಿಯ ಸೂಚನೆಯಂತೆ ಕೆಆರ್ ಎಸ್ ನಿಂದ 5ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗಿದೆ.

ತಮಿಳುನಾಡಿನ ಮೆಟ್ಟೂರು ಡ್ಯಾಂಗೆ 3 ಸಾವಿರ ಕೂಸೆಕ್ ನೀರು ಭರ್ತಿಯಾಗಲಿದೆ. ಕಳೆದ ತಿಂಗಳು ಕಾವೇರಿ ನಿರ್ವಹಣಾ ಪ್ರಾಧಿಕಾರವು ರಾಜ್ಯದಲ್ಲಿ ಉತ್ತಮ ಮಳೆಯಾಗಿ ಅಣೆಕಟ್ಟು ತುಂಬಿದರೆ ಮಾತ್ರ ತಮಿಳುನಾಡಿಗೆ ನೀರು ಹರಿಸಬೇಕು ಅಂತ ರಾಜ್ಯಕ್ಕೆ ಸೂಚನೆ ನೀಡಿತ್ತು.

- Advertisement -

Latest Posts

Don't Miss