Devotional story:
ಗಾಯತ್ರಿ ಮಂತ್ರವು ಹಿಂದೂ ಧರ್ಮದ ಅತಿ ಶ್ರೇಷ್ಠ ಮಂತ್ರಗಳಲ್ಲೊಂದಗಿದೆ ಈ ಮಂತ್ರಕ್ಕಿಂತ ಮಿಗಿಲಾದ ಮಂತ್ರವಿಲ್ಲ ಎನ್ನಬಹುದು ಬ್ರಹ್ಮದೇವರೇ ಈ ಮಂತ್ರದ ಮುಂದೆ ಬೇರೆ ಜಪತಪವಿಲ್ಲ ಎಂದು ಪುರಾಣಗಳಲ್ಲಿ ಹೇಳಲಾಗಿದೆ .ಈ ಮಂತ್ರದಲ್ಲಿ ಸವಿತೃ ದೇವನನ್ನು ಆವಾಹನೆ ಮಾಡಿರುವ ಕಾರಣದಿಂದ ಈ ಮಂತ್ರವನ್ನು ಸಾವಿತ್ರ ಮಂತ್ರ ಎಂದು ಕೂಡ ಕರೆಯಲಾಗಿದೆ ಹಾಗು ಈ ಮಂತ್ರವು ಭೋಮಿಯಮೇಲೆ ಮೊದಲನೇ ಮಂತ್ರವೆಂದು ಪರಿಗಣಿಸಲಾಗುಗಿದೆ . ಪ್ರಪಂಚದ ಮೊದಲ ಪುಸ್ತಕವಾದ ಋಗ್ವೇದವು ಈ ಮಂತ್ರದಿಂದ ಪ್ರಾರಂಭವಾಗುತ್ತದೆ.ನಾಲ್ಕು ವೇದಗಳನ್ನು ರಚಿಸುವ ಮೊದಲು ಬ್ರಹ್ಮದೇವರು ಮೊದಲು 24 ಅಕ್ಷರಗಳ ಗಾಯತ್ರಿ ಮಂತ್ರವನ್ನು ರಚಿಸಿದರು ಎಂದು ಹೇಳಲಾಗುತ್ತದೆ . ಪುರಾಣಗಳ ಪ್ರಕಾರ ಮಂತ್ರಕ್ಕೆ 2500-3500 ವರ್ಷಗಳ ಇತಿಹಾಸವಿದೆ ಎನ್ನಲಗಿದೆ ಗಾಯಂತ್ರಿ ಮಂತ್ರವು ಮನುಷ್ಯರ ಬುದ್ಧಿಶಕ್ತಿಯನ್ನು ಪ್ರಚೋದಿಸುವಂತಹ ಗಾಯತ್ರಿ ದೇವಿಯ ಜಪವಾಗಿದೆ. ಹಾಗು ಭಗವಾನ್ ಸೂರ್ಯನಾರಾಯಣನ ಜಪವೂ ಆಗಿದೆ ಎಲ್ಲಲೋಕಗಳಲ್ಲಿ ಬೆಳಕನ್ನು ನೀಡಿ ಜೀವಿಗಳಿಗೆ ಚೈತನ್ಯವನ್ನು ನೀಡುತ್ತಿರುವ ಸೂರ್ಯದೇವಾನೇ ನಮಗೆ ಧೀಶಕ್ತಿಯನ್ನು ಪ್ರಚೋದಿಸು ಎಂಬುದು ಈ ಮಂತ್ರದ ತಾತ್ಪರ್ಯ. ಹಾಗಾದರೆ ಗಾಯತ್ರಿ ಮಂತ್ರದ ಬಗ್ಗೆ ಎಲ್ಲರು ತಿಳಿದುಕೊಳ್ಳಲೇಬೇಕಾದ ಕೆಲವು ವಿಷಯಗಳನ್ನು ನೋಡ್ಕೊಂಡು ಬರೋಣ ಬನ್ನಿ .
ಪ್ರತ್ತಿಯೊಬ್ಬ ಮನುಷ್ಯನಿಗೊ ಗಾಯಿತ್ರಿ ಮಂತ್ರದ ಅರಿವು ತಿಳಿದೇ ಇರುತ್ತದೆ ಆದರೆ ಈ ಮಂತ್ರವನ್ನು ಏತಕ್ಕಾಗಿ ಪಠಿಸುತ್ತರೆ ಎನ್ನುವುದು ಬಹಳ ಜನರಿಗೆ ತಿಳಿದಿರುವುದಿಲ್ಲ ಇನ್ನು ಕೆಲವರಂತೂ ಅತ್ರದಲ್ಲಿ ಬೇಗಬೇಗ ಮಂತ್ರವನ್ನು ಪಠಿಸಿ ಹಬ್ಬ ನಾನು ಈ ದಿನ ಮಂತ್ರವನ್ನು ಪಠಿಸಿದೆನು ಎಂದು ಕೊಳ್ಳುತ್ತರೆ ,ಆದರೆ ಗಾಯತ್ರೀ ಮಂತ್ರವನ್ನು ಈ ರೀತಿಯಾಗಿ ಪಟಿಸುವುದರಿಂದ ನಿಮಗೆ ಮಂತ್ರದಿಂದ ಸಿಗುವ ಯಾವುದೇ ರೀತಿಯ ಪ್ರಯೋಜನ ವಾಗುವುದಿಲ್ಲ .
ಈ ಮಂತ್ರವನ್ನು ಓದುವಾಗ ೪ಬಾರಿ ನಿಲ್ಲಿಸಿ ಓದಬೇಕು ಅದು ಹೇಗೆದರೆ
ಓಂ
ಭೂರ್ಭುವಃ ಸ್ವಃ
ತತ್ಸವಿತುರ್ವರೇಣ್ಯಂ
ಭರ್ಗೋದೇವಸ್ಯ ಧೀಮಹಿ
ಧಿಯೋ ಯೋನಃ ಪ್ರಚೋದಯಾತ್
ಈ ರೀತಿಯಾಗಿ ಮಂತ್ರವನ್ನು ೪ಬಾರಿ ನಿಲ್ಲಿಸಿ ಓದಬೇಕು
ಓಂ: ಓಂ ಅನ್ನುವ ಶಬ್ದವು ಮೂರು ಶಬ್ದಗಳಿಂದ ರೂಪುಗೊಂಡಿದೆ ಅ, ಉ, ಮ ಈ ಮೂರು ಶಬ್ದಗಳ ಅರ್ಥ ಉಪನಿಷತ್ತುಗಳಲ್ಲಿಯೂ ಕಂಡುಬರುತ್ತದೆ ಈ ಮಂತ್ರಕ್ಕೆ ಯಾವುದೇ ಅಂತ್ಯವೆನ್ನುವುದು ಇರುವುದಿಲ್ಲ.
ಭೂರ್ಭುವಃ ಸ್ವಃ : ಭೂ ಎಂದರೆ ಭೂಮಿ, ರ್ಭುವಃ ಎಂದರೆ ಬಾಹ್ಯಾಕಾಶ ಮತ್ತು ಸ್ವಃ ಎಂದರೆ ಸ್ವರ್ಗ.
ತತ್ಸವಿತುರ್ವರೇಣ್ಯಂ:ತಃ ಎಂದರೆ ಪರಮಾತ್ಮ ಅಥವಾ ಬ್ರಹ್ಮ, ಸವಿತುಃ ಎಂದರೆ ದೇವರು ಅಥವಾ ಬ್ರಹ್ಮಾಂಡದ ಸೃಷ್ಟಿಕರ್ತ, ವರೇಣ್ಯಂ ಎಂದರೆ ಆರಾಧನೀಯ
ಭರ್ಗೋ ಎಂದರೆ: ಅಜ್ಞಾನ ಮತ್ತು ಪಾಪವನ್ನು ಹೋಗಲಾಡಿಸುವವನು.
ದೇವಸ್ಯ: ಜ್ಞಾನದ ದೇವರ ರೂಪ.
ಧೀಮಹಿ ಧಿಯೋ: ನಾವು ಬುದ್ಧಿ ಮತ್ತು ಬುದ್ಧಿವಂತಿಕೆಯನ್ನು ಧ್ಯಾನಿಸುತ್ತೇವೆ.
ಯೋ ನಃ: ನಾವು.
ಪ್ರಚೋದಯಾತ್: ಪ್ರಕಾಶಿಸು.
ಮಂತ್ರಗಳನ್ನು ಪಠಿಸುವ ಮೊದಲು ಮಂತ್ರದ ಅರ್ಥವನ್ನು ತಿಳಿದುಕೊಂಡು ಪಠಿಸುವುದರಿಂದ ಉತ್ತಮ ಫಲಗಳನ್ನು ಪಡೆಯಬಹುದು ಮಂತ್ರಗಳ ಅರ್ಥ ತಿಳಿದಿದ್ದರೆ ಮಾತ್ರ ಆ ಮಂತ್ರದ ಶಕ್ತಿಯು ತಿಳಿಯುತ್ತದೆ ಹಾಗು ಪ್ರತಿಯೊಂದು ಪದದ ಉಚ್ಚಾರಣೆ ಸ್ಪಷ್ಟವಾಗಿರಬೇಕು ಹಾಗು ಈ ಮಂತ್ರವನ್ನು ದಿನದಲ್ಲಿ ಮೂರು ಬಾರಿ ಪಠಿಸಬೇಕು ಮುಂಜಾನೆ ಸೂರ್ಯೋದಯಕ್ಕೆ 2 ಗಂಟೆ ಮೊದಲು ಹಾಗು ದಿನದ ಮಧ್ಯದಲ್ಲಿ ಮತ್ತು ಸಂಜೆ ಸೂರ್ಯಾಸ್ತದ ನಂತರ ಪಠಿಸಬೇಕು. ಮುಂಜಾನೆ ಪಠಣ ಮಾಡುವಾಗ, ಪೂರ್ವಕ್ಕೆ ಮುಖ ಮಾಡಬೇಕು. ಸಂಜೆ ಪಠಣ ಮಾಡುವಾಗ, ಪಶ್ಚಿಮಕ್ಕೆ ಮುಖ ಮಾಡಬೇಕು.ಈ ಮಂತ್ರವನ್ನು ಮುಂಜಾನೆ ಸಮಯದಲ್ಲಿ ಊಟಕ್ಕೆ ಮೊದಲು ಪಠಿಸುವುದರಿಂದ ಉತ್ತಮ ಫಲಗಳು ಸಿಗುತ್ತದೆ. ಜಪ ಮಾಡುವಾಗ ಯಾವಾಗಲೂ ನಿಮ್ಮ ಕಣ್ಣುಗಳನ್ನು ಮುಚ್ಚಿರಬೇಕು ಹಾಗು ಮಂತ್ರವನ್ನು ಅರ್ಥಮಾಡಿಕೊ೦ಡು ಪ್ರತಿಯೊಂದು ಪದದ ಮೇಲೆ ಕೇಂದ್ರೀಕರಿಸಿ ಪದಗಳ ಉಚ್ಚಾರಣೆ ಮಾಡಬೇಕು .
ಹಾಗಾದರೆ ಇಷ್ಟು ಪವಿತ್ರವಾದ ಗಾಯತ್ರಿ ಮಂತ್ರದ ಪ್ರಯೋಜನಗಳನ್ನು ತಿಳಿದುಕೊಳ್ಳೋಣ ಬನ್ನಿ…
ಈ ಮಂತ್ರ ಪಠಿಸುವುದರಿಂದ ನಮ್ಮ ಕಲಿಕೆಯ ಶಕ್ತಿಯು ಹೆಚ್ಚಾಗಿ, ಮನಸ್ಸನ್ನು ಕೇಂದ್ರೀಕರಿಸುವಲ್ಲಿ ಸಹಾಯಕವಾಗುತ್ತದೆ ಹಾಗು ಮನುಷ್ಯರ ಜೀವನದಲ್ಲಿ ಅಡೆತಡೆಗಳಿಂದ ರಕ್ಷಣೆ ಸಿಗುತ್ತದೆ ಹಾಗು ಅಂತಃಪ್ರಜ್ಞೆಯಿಂದ ದೈವಿಕ ಕಡೆಗೆ ಮಾರ್ಗದರ್ಶನ ನೀಡುವುದಕ್ಕೆ ಸಹಾಯ ಮಾಡುತ್ತದೆ .ಈ ಮಂತ್ರವನ್ನು ದಿನನಿತ್ಯ ಪಠಿಸುವುದರಿಂದ ಮುಖದ ಮೇಲೆ ಹೊಳಪು ಬಂದು, ಉತ್ತಮ ಇಂದ್ರಿಯಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಮಂತ್ರವನ್ನು ಪಠಿಸುವಾಗ ಉಂಟಾಗುವ ಕಂಪನಗಳು ಕೊನೆಯ ಮೂರು ಚಕ್ರಗಳನ್ನು ನೇರವಾಗಿ ಸಕ್ರಿಯಗೊಳಿಸುತ್ತವೆ , ಗಂಟಲು ಚಕ್ರ , ಕಣ್ಣಿನ ಚಕ್ರ ಮತ್ತು ಕಿರೀಟ ಚಕ್ರ .ಇದರಿಂದ ಏಕಾಗ್ರತೆ ಹೆಚ್ಚಾಗುತ್ತದೆ ಹಾಗು ನೀವು ಶತ್ರುಗಳಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಪ್ರತಿ ಮಂಗಳವಾರ, ಭಾನುವಾರ, ಅಮವಾಸ್ಯೆಯಂದು ಕೆಂಪು ಬಟ್ಟೆಯನ್ನು ಧರಿಸಿ ಈ ಮಂತ್ರವನ್ನು ದುರ್ಗಾ ದೇವಿಯನ್ನು ಸ್ಮರಿಸುತ್ತಾ ಪಠಿಸುವುದರಿಂದ ನೀವು ಶತ್ರುಗಳ ಸಮಸ್ಯೆಯಿಂದ ಪಾರಾಗಬಹುದು ಎನ್ನಲಾಗಿದೆ.