ಪ್ರವೀಣ್ ನೆಟ್ಟಾರ್, ಶರತ್ ಮಡಿವಾಳ ಹತ್ಯೆಗೆ ನಡೆದಿತ್ತು ಈ ಹಾಲ್ ನಲ್ಲಿ ಟ್ರೈನಿಂಗ್..!

Manglore News:

ಪಿಎಫ್ಐ ಮತ್ತು ಉಗ್ರಚಟುವಟಿಕೆಗೆ ಕುರಿತು ಎನ್‌ಐಎ ತೀವ್ರ ತನಿಖೆ ನಡೆಸುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆ ವಿವಿಧ ಕಡೆ ಉಗ್ರಚಟುವಟಿಕೆಗಳಿಗೆ ತರಬೇತಿ ನಡೆಸಲಾಗುತ್ತಿದೆ ಎಂಬ ಮಾಹಿತಿಯ ಆಧಾರದಲ್ಲಿ ದಾಳಿ ಮಾಡಿರುವ ಎನ್ಐಎ ಮಿತ್ತೂರಿನಲ್ಲಿರುವ ಫ್ರೀಡಂ ಕಮ್ಯುನಿಟಿ ಹಾಲ್ ಟ್ರಸ್ಟಿ ಓರ್ವನನ್ನು ಬಂಧಿಸಿದ್ದು ಮತ್ತೊಬ್ಬ ನಾಪತ್ತೆಯಾಗಿದ್ದಾನೆ ಎಂದು  ತಿಳಿದು ಬಂದಿದೆ. ಇನ್ನು  ಈ  ಹಾಲ್ ನಲ್ಲಿ ಪ್ರವೀಣ್ ನೆಟ್ಟಾರ್  ಶರತ್ ಮಡಿವಾಳ ಹತ್ಯೆಗೆ ಟ್ರೈನಿಂಗ್ ನೀಡಲಾಗುತ್ತಿತ್ತು  ಎಂದು ತಿಳಿದು  ಬಂದಿದೆ.ಮಂಗಳೂರಿನ ಮಿತ್ತೂರಿನಲ್ಲಿ  ಫ್ರೀಡಂ ಕಮ್ಯುನಿಟಿ ಹಾಲ್  ನಲ್ಲಿ  ಇವರಿಬ್ಬರ ಹತ್ಯೆಗೆ ಸಂಚು  ನಡೆಸಲಾಗಿತ್ತು. ಹಾಗೆಯೇ ಇದೇ ಹಾಲ್ ನಲ್ಲಿ  ಸಭೆ ನಡೆಸಿ ಟ್ರೈನಿಂಗ್ ನೀಡಲಾಗಿತ್ತು. ಅನೇಕ ಜನರ ಹತ್ಯೆಗೆ  ಈ ಹಾಲ್  ನಲ್ಲೇ ಕುಳಿತು  ಸಂಚು ಹಾಕಲಾಗುತ್ತಿತ್ತು ಎಂದು ತಿಳಿದು ಬಂದಿದೆ.

ರಾಹುಲ್ ಗಾಂಧಿಯನ್ನು ಬರಮಾಡಿಕೊಂಡ ಸಿದ್ದರಾಮಯ್ಯ..!

ದಸರಾ ವೈಶಿಷ್ಟ್ಯದಲ್ಲಿ ಪಾರಂಪರಿಕತೆ ತಿಳಿಸಲು ಟಾಂಗಾ ಸವಾರಿ…!

ಪೊಲೀಸರಿಗೆ ವಾರ್ನಿಂಗ್ ನೀಡಿದ ಡಿಕೆಶಿ…!

About The Author