Sunday, October 20, 2024

Latest Posts

ಡೈಲಿ ಹೆಲ್ತ್ ಕೇರ್ ಟಿಪ್ಸ್ ನಿಮ್ಮ ಜೀವನ ಶೈಲಿಯನ್ನು ಆರೋಗ್ಯವಾಗಿಡುತ್ತದೆ :

- Advertisement -

Health tips:

ಪ್ರಪಚದಲ್ಲಿ ಆರೋಗ್ಯವಾದ ದೇಹವೇ ಒಂದು ದೊಡ್ಡ ಸಂಪತ್ತು ಎನ್ನಬಹುದು ನಾವು ನಮ್ಮನ್ನು ಆರೋಗ್ಯವಾಗಿ ಇಡುವುದಕ್ಕಾಗಿ ದುಬಾರಿ ಆಹಾರಗಳನ್ನು ತಿನ್ನುತ್ತೇವೆ, ಪೌಷ್ಟಿಕ ತಜ್ಞರಿಂದ ಸಲಹೆ ಪಡೆಯುತ್ತೇವೆ. ಆದರೆ ಕೆಲವು ಸಣ್ಣ ಸಲಹೆಗಳನ್ನು ಪ್ರತಿದಿನ ಅನುಸರಿಸಿದರೆ,ದೇಹವು ಸಹಜವಾಗಿ ಆರೋಗ್ಯಕರವಾಗಿರುತ್ತದೆ. ಹಾಗಾದರೆ ಉತ್ತಮ ಆರೋಗ್ಯಕ್ಕೆ (Health) ಅತ್ಯಗತ್ಯವಾಗಿರುವ ಸಲಹೆಗಳನ್ನು ತಿಳ್ಕೊಂಡು ಬರೋಣ ಬನ್ನಿ .

ತುಸಿ :
ಮೊದಲನೆಯದಾಗಿ ನಿಮ್ಮ ದಿನನಿತ್ಯದ ಆಹಾರದಲ್ಲಿ ತುಳಸಿ ಎಲೆಗಳನ್ನು ಸೇರಿಸುವುದು ಬಹಳಮುಖ್ಯ ,ತುಳಸಿ ಟಿ ಯನ್ನು ಮಾಡಿ ಕುಡಿಯಬಹುದು , ಅಂಗಡಿಯಲ್ಲಿ ಸಿಗುವಂತಹ ಟಿ ಪೌಡರ್ ಅನ್ನು ಬಳಸುವ ಬದಲು ಹೀಗೆ naturial ಟೀಯನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಹೆಚ್ಚಿನ ಲಾಭವಿದೆ ,ಇದರಲ್ಲಿ ಎರಡು ತುಳಸಿ ಎಲೆಗಳನ್ನು ಸೇರಿಸಿ ದಿನವು ಕುಡಿಯುತ್ತಾ ಬಂದರೆ ಕ್ಯಾನ್ಸರ್ ನಂತಹ ರೋಗಗಳು ನಿಮ್ಮ ಹತ್ತಿರಾನು ಬರುವುದಿಲ್ಲ ,ತುಲಸಿ ಎಲೆಗಳು ಕ್ಯಾನ್ಸರ್ ವಿರುದ್ಧ ಫೈಟ್ ಮಾಡುವ ಶಕ್ತಿಯನ್ನು ಹೊಂದಿದೆ .

ಆಪಲ್ :
ದಿನನಿತ್ಯ ನೀವು ಆಪಲ್ ಅನ್ನು ಸೇವಿಸುತ್ತಾ ಬಂದ್ರೆ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚಾಗುತ್ತದೆ ,ಅದು ನಿಮಗೆ ದುಬಾರಿ ಅಂದರೆ ನೆಲ್ಲಿಕಾಯಿಯನ್ನು ಸೇವನೆ ಮಾಡ ಬಹುದು ,ಎಲ್ಲರೂ ಹೇಳುವ ಹಾಗೆ ಡಾಕ್ಟರ್ ನಿಂ ದೂ ರಬೇಕಾದರೆ ಪ್ರತಿ ನಿತ್ಯ ಒಂದು ಆಪಲ್ ಅನ್ನು ಅಥಾವ ನೆಲ್ಲಿಕಾಯಿಯನ್ನು ಸೇವನೆ ಮಾಡಬೇಕು .

ಮೊಸರು :
ಮನೆಯಲ್ಲಿ ಶೇಖರಿಸಿದ ಮೊಸರನ್ನು ಸೇವನೆ ಮಾಡುವುದರಿಂದ ನಿಮಗೆ ಕ್ಯಾಲ್ಸಿಯಂ ಸಮೃದ್ಧವಾಗಿ ಸಿಗುತ್ತದೆ ,ಹಾಗು ವಿಟಮಿನ್, ಕ್ಯಾಲೊರಿ, ಪ್ರೋಟೀನ್‍ಗಳು ದೇಹಕ್ಕೆ ಸೂಕ್ತವಾದ ಪೋಷಣೆಯನ್ನು ನೀಡುತ್ತವೆ. ಆದರೆ ಇದನ್ನು ಸರಿಯಾದ ಪ್ರಮಾಣದಲ್ಲಿ ಮತ್ತು ಸರಿಯಾದ ಸಮಯದಲ್ಲಿ ಸೇವಿಸಿದರೆ ಮಾತ್ರ ಆರೋಗ್ಯ ಉತ್ತಮವಾಗಿರುತ್ತದೆ. ಗ್ಯಾಸ್ಟ್ರಿಕ್, ಅಜೀರ್ಣ, ಮಲಬದ್ಧತೆ, ಹೊಟ್ಟೆಯ ಕಿರಿಕಿರಿ ಮೊದಲಾದ ಸಮಸ್ಯೆಗಳಿಗೂ ಇದು ಪರಿಹಾರ ನೀಡುತ್ತದೆ.

ನಿಂಬೆ ಹಣ್ಣು :
ನೀವು ಪ್ರತಿ ದಿನ ನಿಂಬೆಹಣ್ಣಿನ ರಸವನ್ನು ಸೇವಿಸುತ್ತಾ ಬಂದರೆ ನೀವು ಸೇವಿಸಿರುವಂ ಆಹಾರದಿಂದ ನಿಮ್ಮ ದೇಹದಲ್ಲಿರುವಂ ಬ್ಯಾಡ್ ಕೊಲೆಸ್ಟ್ರಿಲ್ ಅನ್ನು ಕ್ರಮೇಣವಾಗಿ ಕಡಿಮೆ ಮಾಡುತ್ತಾ ಹೋಗುತದ್ದೆ ,ನೀವು ನಿಂಬೆ ಹಣ್ಣನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿನ ಜೊತೆ ಕುಡಿಯ ಬಹುದು ,ಹಾದರೆ ಗ್ಯಾಸ್ಟ್ರಿಕ್ ಇರುವವರು ಖಾಲಿ ಹೊಟ್ಟೆಯಲ್ಲಿ ಕುಡಿಯ ಬಾರದು ,ಮದ್ಯಾನ್ನ ಊಟ ಆದ ಗಂಟೆಯ ನಂತರ ಕುಡಿಯಬಹುದು .ಇದರಿಂದ ದೇಹ ಡಿಟಾಕ್ಸಿಫೈಡ್ ಗುತ್ತದೆ ಇದರಿಂದ ಚರ್ಮದ ಕಾಂತಿಯು ಹೆಚ್ಚುತ್ತದೆ .

ತುಪ್ಪ :
ಬೆಳಗಿನ ಆಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟದಲ್ಲಿ ಒಂದು ಟೀ ಚಮಚ ತುಪ್ಪವನ್ನು ಸೇವಿಸಿ. ಇದರಿಂದ ಹಲವು ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ . ತುಪ್ಪ ಕೊಬ್ಬಿನಲ್ಲಿ ಕರಗುವ ವಿಟಮಿನ್ ಡಿ, ಕೆ, , ಅನ್ನು ಹೊಂದಿರುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೀರ್ಣ ಕ್ರಿಯೆ ಸುಗಮ ಗೊಳ್ಳುತ್ತದೆ .

ಹಾಲು :
ನಿಮ್ಮ ದಿನ ನಿತ್ಯದ ಆಹಾರದಲ್ಲಿ ಹಾಲನ್ನು ತಪ್ಪದೆ ಸೇವನೆ ಮಾಡಬೇಕು ಏಕೆಂದರೆ ಇದನ್ನು ಒಂದು ಪರಿಪೂರ್ಣ ಆಹಾರ ವೆಂದು ಪರಿಗಣಿಸಲಾಗಿದೆ ,ಮನುಷ್ಯನಿಗೆ ಬೇಕಾದ ಪೌಷ್ಟಿಕಾಂಶಗಳು ಹಾಲಿನಲ್ಲಿ ಪರಿಪೂರ್ಣವಾಗಿದೆ ,ಆದರೆ ಕೆಲವರಿಗೆ ಹಾಲು ಕುಡಿಯುವುದರಿಂದ ಅಲರ್ಜಿ ಯಾಗುವ ಸಾಧ್ಯತೆಗಳು ಇದೆ ,ಕೆಲವರಿಗೆ ವಾಮಿಟ್ ಬರುವ ಸಾಧ್ಯತೆಯು ಇರುತ್ತದೆ ,ಹಾಗು ಕೆಲವರಲ್ಲಿ ಹೊಟ್ಟೆ ಬ್ಬು ಸಾಧ್ಯತೆ ಇರುತ್ತದೆ ,ಇಂತಹ ಸಮಸ್ಯೆ ಇರುವವರು ಹಾಲನು ಕಡಿಮೆ ಪ್ರಮಾಣದಲ್ಲಿ ಒಳ್ಳೆಯದು .ಹಾದರೆ ಪ್ರತಿದಿನ ಹಾಲನ್ನು ಕುಡಿಯುವುದರಿಂದ ನಿಮ್ಮ ಮೂಳೆ ಸ್ಟ್ರಾಂಗ್ ಆಗಿ ಇರುತ್ತದೆ ಹಾಗು ಮೂಳೆಗೆ ಸಂಬಂದಿಸಿದ ಕಾಯಿಲೆಗಳು ಬರುವ ಸಾಧ್ಯತೆ ಕಡಿಮೆ ಇರುತ್ತದೆ .

ನೀರು :
ದಿನದಲ್ಲಿ ೩ಲೀಟರ್ ನೀರು ನೀವು ತಪ್ಪದೆ ಕುಡಿಯಬೇಕು , ಒಂದೇ ಸಲ ೩ಲೀಟರ್ ನೀರು ಕುಡಿಯಬಾರದು ಬದಲಾಗಿ ದಿನವಿಡೀ ಸ್ವಲ್ಪ ಸ್ವಲ್ಪ ನೀರನ್ನು ಕುಡಿಯುತ್ತಾ ಬರಬೇಕು ,ಒಂದು ಸಲ ನೀವು ನೀರು ೨೫೦ಗ್ರಾಂ ಕುಡಿಯ ಬಹುದು , ಅದ್ದಕಿಂತ ಜಾಸ್ತಿ ಕುಡಿಯ ಬಾರದು ಕುಡಿದರೆ ನಿಮಗೆ ಡೀಜೇಷನ್ ಪ್ರಾಬ್ಲಮ್ ಬರುವ ಸಾಧ್ಯತೆ ಜಾಸ್ತಿ ಇರುತ್ತದೆ .

ಋತುಮಾನದ ತರಕಾರಿಗಳನ್ನು (Green Vegetables) ಸಿವಿಸುವುದನ್ನು ತಪ್ಪಿಸ ಬೇಡಿ. ಸೌತೆಕಾಯಿ, ಬದನೆ, ಸೊಪ್ಪು, ಬೆಂಡೆಕಾಯಿ ಮೊದಲಾದ ತರಕಾರಿಗಳನ್ನು ಸೇವಿಸುವುದನ್ನು ತಪ್ಪಿಸಬೇಡಿ. ಯಾವ ಋತುಮಾನಕ್ಕೆ ಯಾವ ತರಕಾರಿಗಳು ಸಿಗುತ್ತವೆಯೋ ಅವುಗಳನ್ನು ಸೇವಿಸಿ. ಉತ್ತಮ ಆರೋಗ್ಯವನ್ನು ಪಡೆಯಿರಿ. ಆಹಾರದಲ್ಲಿ ರಾಗಿ (Ragi), ಜೋಳದಂತಹ ಧಾನ್ಯಗಳಳು ಇರುವಂತೆ ನೋಡಿಕೊಳ್ಳಿ . ಧಾನ್ಯಗಳು ಸದೃಢ ಶರೀರಕ್ಕೆ ಉತ್ತಮ ಆಹಾರವಾಗಿದೆ. ಇವುಗಳಿಂದ ರೊಟ್ಟಿ, ರಾಗಿ ಮುದ್ದೆ ಮೊದಲಾದ ಆಹಾರಗಳನ್ನು ಮಾಡಿ ಸೇವಿಸಬಹುದು. ದಿನಗಲು ಸೇವನೆ ಮಾಡಲು ಸಾಧ್ಯವಾಗದಿದ್ದರೂ ವಾರದಲ್ಲಿ ಒಂದೆರಡು ಬಾರಿಯಾದರೂ ಸೇವಿಸಿ .
ಹೆಲ್ತ್ ಟಿಪ್ಸ್ ಗಳು ನಿಮ್ಮ ಜೀವನ ಶೈಲಿಯನ್ನು ಆರೋಗ್ಯವಾಗಿ ಇಡುವುದಕ್ಕೆ ಸಹಾಯ ಮಾಡುತ್ತದೆ ತಪ್ಪದೆ ಫಾಲೋ ಮಾಡಿ .

PCOD / PCOS ಸಿಂಟಮ್ಸ್ :

ಕಣ್ಣುಗಳ ಅರೋಗ್ಯದ ರಹಸ್ಯ ….!

ಚಳಿಗಾಲ ಬಂತು ಹುಷಾರ್..! ಇನ್ನು ಇದನ್ನು ತಿನ್ನುವುದನ್ನು ಕಡಿಮೆ ಮಾಡಿ…!

- Advertisement -

Latest Posts

Don't Miss