Health tips
ಆಹಾರ ವಿಷಯಕ್ಕೆ ಬಂದಾಗ ಚಳಿಗಾಲದಲ್ಲಿ ಬೇಸಿಗೆಗಿಂತಲೂ ಹೆಚ್ಚು ಜಾಗರೂಕರಾಗಿರಬೇಕು, ಏಕೆಂದರೆ ಹಲವು ಸೋಂಕುಗಳು ಮತ್ತು ಕಾಯಿಲೆಗಳು ಉಂಟಾಗುವ ಸಾಧ್ಯತೆಗಳು ಇರುತ್ತದೆ .ಶೀತ ಬಂದರೆ ಅದು ಸುಲಭವಾಗಿ 5-7 ದಿನಗಳವರೆಗೆ ಇರುತ್ತದೆ. ಅಂತಹ ಸನ್ನಿವೇಶದಲ್ಲಿ, ಚಳಿಗಾಲದಲ್ಲಿ ಕೆಲವು ಆಹಾರ ಪದಾರ್ಥಗಳನ್ನು ತಪ್ಪಿಸುವುದು ಉತ್ತಮ. ಆಗ ನಿಮ್ಮ ದೇಹವು ಆರೋಗ್ಯಕರವಾಗಿರುತ್ತದೆ ಹಾಗು ಆರೋಗ್ಯಕರವಾಗಿರಲು ನೀವು ಇವುಗಳನ್ನು ತಿನ್ನುವುದು ಬಿಡಬೇಕು.
ಸಿಹಿ ತಿಂಡಿಗಳು:
ನೀವು ಸಿಹಿತಿಂಡಿಗಳನ್ನು ಇಷ್ಟಪಡುತ್ತಿದ್ದರೆ,ಈ ಸೀಸನ್ ನಲ್ಲಿ ಹಲವಾರು ಕಾಯಿಲೆಗಳಿಗೆ ಬಲಿಯಾಗಬಹುದು. ಹಾಗಾಗಿ ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿಕೊಳ್ಳಿ ಮತ್ತು ತಿನ್ನುವಾಗ ಯೋಚಿಸಿ ತಿನ್ನಿ ಸಾಧ್ಯವಾದಷ್ಟು ಅವಾಯ್ಡ್ ಮಾಡಿ.
ಮೊಸರು:
ಚಳಿಗಾಲದಲ್ಲಿ ಮೊಸರಿನಂತಹ ಡೈರಿ ಉತ್ಪನ್ನಗಳನ್ನು ತಪ್ಪಿಸಬೇಕು ಮೊಸರು ತಿನ್ನುವುದರಿಂದ ನೀಮಗೆ ಶೀತ ಮತ್ತು ಕೆಮ್ಮು ಬರಬಹುದು ಇದು ಚಳಿಗಾಲದಲ್ಲಿ ಸಾಮಾನ್ಯವಾಗಿ ಕಂಡುಬರುವ ಕಾಯಿಲೆಗಳಾಗಿವೆ. ನಿಮಗೆ ತಿನ್ನಬೇಕು ಎನಿಸಿದರೆ, ಮನೆಯ ಉಷ್ಣಾಂಶಕ್ಕೆ ತಕ್ಕಹಾಗೆ ಮೊಸರು ತಿನ್ನಬಹುದು ಆದರೆ ಮಧ್ಯಾಹ್ನದಲ್ಲಿ ಮಾತ್ರ. ರಾತ್ರಿ ಮೊಸರು ಸೇವಿಸಬಾರದು .
ಕೋಲ್ಡ್ ಡ್ರಿಂಕ್ಸ್ :
ಚಳಿಗಾಲದಲ್ಲಿ ನೀವು ತಂಪು ಪಾನೀಯಗಳು, ಸೋಡಾ ಮತ್ತು ಇನ್ನಿತರ ಪಾನೀಯಗಳನ್ನು ಕುಡಿಯುವ ಅಭ್ಯಾಸ ನಿಮಗಿದ್ದರೆ ,ನಿಮ್ಮ ಆಹಾರ ಪದ್ಧತಿಯನ್ನು ಚೇಂಜ್ ಮಾಡುವುದು ಉತ್ತಮ. ಕೋಲ್ಡ್ ಡ್ರಿಂಕ್ಸ್ ಕುಡಿಯುವುದರಿಂದ ನಿಮ್ಮ ದೇಹವು ಎರಡು ಪಟ್ಟು ಹೆಚ್ಚು ಶ್ರಮವಹಿಸ ಬೇಕಾಗಿದೆ, ಮೊದಲು ಆಹಾರವನ್ನು ದೇಹದ ಉಷ್ಣಾಂಶಕ್ಕೆ ತಂದು ನಂತರ ಅದನ್ನು ಜೀರ್ಣಿಸಿಕೊಳ್ಳಬೇಕು.ನಂತರ ಚಳಿಗಾಲದಲ್ಲಿ ರೆಫ್ರಿಜರೇಟರ್‌ನಲ್ಲಿ ಇರುವ ಪಾನೀಯಗಳನ್ನು ಸೇವಿಸುವುದರಿಂದ ಶೀತ ,ತುರಿಕೆ ಗಂಟಲು ಹಿಡಿಯುವ ಸಾಧ್ಯತೆ ಇರುತ್ತದೆ .
ಬಾಳೆಹಣ್ಣು
ಚಳಿಗಾಲದಲ್ಲಿ ಬಾಳೆಹಣ್ಣುತಿನ್ನುವುದರಿಂದ ಜೀರ್ಣವಾಗಲು ತುಂಬಾ ಸಮಯ ತೆಗೆದು ಕೊಳ್ಳುತ್ತದೆ . ಹಾಗಾಗಿ ಶೀತ, ನೆಗಡಿ ,ಕೆಮ್ಮು ಜಾಸ್ತಿಯಾಗುವ ಸಾದ್ಯತೆ ಇದೆ .