State News:
ಓಲಾ ಊಬರ್ ಆಟೋಗಳ ಅನಧಿಕೃತ ಚಾಲನೆಯ ವಿರುದ್ಧ ಅಧಿಕಾರಿಗಳು ಇದೀಗ ಎಚ್ಚೆತ್ತುಕೊಂಡಿದ್ದು ಇದೀಗ ಫೀಳ್ಡಿಗಿಳಿದಿದೆ.
ಓಲಾ, ಊಬರ್ ,ಆಟೋ ಚಾಲಕರೇ ಹುಷಾರ್. ಏಕೆಂದರೆ ಮಧ್ಯಾಹ್ನದ ನಂತರ ಓಲಾ ಊಬರ್ ಆ್ಯಪ್ ಆನ್ ಮಾಡಿದ್ರೆ ನಿಮ್ಮ ಆಟೋಗಳನ್ನು ಸೀಜ್ ಮಾಡಲಾಗುತ್ತೆ. ಆರ್ಟಿಒ ಅಧಿಕಾರಿಗಳು ಮಧ್ಯಾಹ್ನದ ನಂತರ ಫೀಲ್ಡಿಗೆ ಇಳಿಯಲಿದ್ದು ಅನಧಿಕೃತ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಮಾದರಿಯಲ್ಲಿ ಓಲಾ, ಊಬರ್, ಆಟೋ ಚಾಲಕರಿಗೆ ಎರಡರಿಂದ ಐದು ಸಾವಿರ ದಂಡ ಹಾಕಲು ಮುಂದಾಗಿದ್ದಾರೆ. ಮಧ್ಯಾಹ್ನದ ನಂತರ ಆರ್ಟಿಒ ಅಧಿಕಾರಿಗಳ ಕೈಗೆ ಸಿಕ್ಕರೆ ಕೇಸ್ ಅಂಡ್ ಫೈನ್ ಬೀಳೋದು ಪಕ್ಕ.
ಇವತ್ತು ಮಧ್ಯಾಹ್ನದ ವರೆಗೆ ಓಲಾ, ಊಬರ್ ಕಂಪನಿಗೆ ಸಾರಿಗೆ ಇಲಾಖೆ ಗಡುವು ನೀಡಿದ್ದು ಸಾರಿಗೆ ಇಲಾಖೆಯ ಅಧಿಕಾರಿಗಳು ಓಲಾ, ಊಬರ್, ಆಟೋ ಸೀಜ್ ಮಾಡಲು ಮುಂದಾಗಿದ್ದಾರೆ. ಮಧ್ಯಾಹ್ನದೊಳಗೆ ಎರಡು ಕಂಪನಿಗಳು ತಮ್ಮ ಪ್ರತಿಕ್ರಿಯೆ ನೀಡಿಲ್ಲವೆಂದರೆ. ರಾಜಧಾನಿಯ ರೋಡ್ ರೋಡ್ ನಲ್ಲಿ ಆಟೋಗಳನ್ನು ಸೀಜ್ ಮಾಡಲಿದ್ದಾರೆ. ಇಂದು ಮತ್ತು ನಾಳೆ ಖಡಕ್ ಆಗಿ ಆಟೋಗಳನ್ನು ಸೀಜ್ ಮಾಡಲು ಅಧಿಕಾರಿಗಳು ತಯಾರಿ ನಡೆಸಿದ್ದಾರೆ. ರಾಜ್ಯ ಸಾರಿಗೆ ಇಲಾಖೆ ನಾಳೆ ಎರಡು ಕಂಪನಿಗಳ ಮೇಲೂ ಕೇಸ್ ದಾಖಲಿಸಲಿದೆ ಎಂದು ಆರ್ಟಿಒ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಕರ್ನಾಟಕ ಟಿವಿ ಸಹಯೋಗದೊಂದಿಗೆ ಬ್ಯಾಟರಾಯನಪುರದಲ್ಲಿ ಅದ್ಧೂರಿ ದಸರಾ ಮಹೋತ್ಸವ..
ಗಣಪತಿ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಯುವಕರ ದಾರುಣ ಸಾವು..