News: ನಂದಿನಿ ಮೊಸರಿಗೆ 2 ರೂಪಾಯಿ ಕಡಿಮೆ ಮಾಡಿದ ಕೆಎಂಎಫ್

News: ಸಿಎಂ ಡಿ.ಕೆ.ಶಿವಕುಮಾರ್ ನಂದಿನಿ ಮೊಸರಿಗೆ 2 ರೂಪಾಯಿ ಕಡಿಮೆ ಮಾಡಬೇಕು ಎಂದು 20 ದಿನಗಳ ಹಿಂದೇ ಹೇಳಿದ್ದರು. ಆದರೆ ಕೆಎಂಎಫ್ ಮಾತ್ರ ಸಿಎಂ ಮಾತಿಗೆ ಕಿಮ್ಮತ್ತೇ ನೀಡಿಲ್ಲವೆಂದು ಕೆಲ ದಿನಗಳಿಂದ ಜನ ಆಕ್ರೋಶ ವ್ಯಕ್ತಪಡಿಸಿದ್ದರು. ಇಂದು ಹೆಚ್ಚಿನ ಸಂಖ್ಯೆಯಲ್ಲಿ ಆಕ್ರೋಶ ವ್ಯಕ್ತವಾದ ಹಿನ್ನೆಲೆ. ಎಚ್ಚೆತ್ತ ಕೆಎಂಎಫ್ ನಂದಿನಿ ಮೊಸರಿಗೆ 2 ರೂಪಾಯಿ ಕಡಿಮೆ ಮಾಡಿದೆ.

ಈ ಪರಿಷ್ಕೃತ ದರವು ಇದೇ ನವೆಂಬರ್ 29ರಿಂದ ಜಾರಿಗೆ ಬರಲಿದೆ. ರಾಜ್ಯದ ಹಾಲು ಉತ್ಪಾದಕ ರೈತರು ಮನವಿ ಮಾಡಿದ್ದಕ್ಕಾಗಿ ನವೆಂಬರ್ 1ರಿಂದ ಹಾಲು, ಮತ್ತು ಮೊಸರಿಗೆ ದರ ಹೆಚ್ಚಿಸಲಾಗಿತ್ತು. ಆದರೆ ಮೊಸರಿಗೆ ಬೆಲೆ ಅತೀ ಹೆಚ್ಚು ಮಾಡಲಾಗಿದೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಡಿ.ಕೆ.ಶಿವಕುಮಾರ್ ಮೊಸರಿಗೆ 2 ರೂಪಾಯಿ ದರ ಕಡಿಮೆ ಮಾಡಿ ಎಂದು ಆದೇಶ ನೀಡಿದ್ದರು.

ಆದರೆ ಇಲ್ಲಿಯವರೆಗೂ ದರ ಕಡಿಮೆಯಾಗಿರಲಿಲ್ಲ. ಆದರೆ ಆಕ್ರೋಶ ಹೆಚ್ಚಾದ ಹಿನ್ನೆಲೆ ಇದೀಗ ದರ ಕಡಿತಗ“ಳಿಸಲಾಗಿದೆ. ಅರ್ಧ ಲೀ. ಮೊಸರಿಗೆ 34ರಿಂದ 33 ರೂಪಾಯಿ ಮಾಡಲಾಗಿದೆ. 1 ಲೀ. ಮೊಸರಿಗೆ 68ರಿಂದ 66 ರೂಪಾಯಿ ಮಾಡಲಾಗಿದೆ.

About The Author