State News:
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೈರ್ಲ, ನಂದಳಿಕೆ ಎಂಬಲ್ಲಿ ೧೪ ಅಥವಾ ೧೫ನೇ ಶತಮಾನಕ್ಕೆ ಸೇರಿದ ನಾಗಭೈರವನ ಅಪರೂಪದ ಶಿಲ್ಪವೊಂದು ಪತ್ತೆಯಾಗಿದೆ. ಕಾರ್ಕಳ ತಾಲೂಕಿನ ಕೈರ್ಲದ ಮಹಾಕಾಳಿ ದೇವಾಲಯದ ಬಳಿ ಇರುವ ನಾಗಬನದಲ್ಲಿ ಪುರಾತನ ನಾಗಭೈರವ ಶಿಲ್ಪ ಪತ್ತೆಯಾಗಿದೆ.ಶಿರ್ವದಲ್ಲಿರುವ ಎಂಎಸ್‌ಆರ್‌ಎಸ್ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹ ಪ್ರಾಧ್ಯಾಪಕ ಟಿ. ಮುರುಗೇಶಿ ನೇತೃತ್ವದ ತಂಡ ಪುರಾತತ್ತ್ವ ಶಾಸ್ತ್ರದ ಪರಿಶೋಧನೆಯಲ್ಲಿದ್ದ ವೇಳೆ ಈ ಶಿಲ್ಪ ಪತ್ತೆಯಾಗಿದೆ.
ಅ.13 ರಂದು ಮಹಾ ಕುಂಭಮೇಳದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ಇಂತಿದೆ.




