Astrology tips:
ನಿಮ್ಮ ಅದೃಷ್ಟ ನಿಮ್ಮ ಅಂಗೈಯಲ್ಲಿಯೇ ಇದೆ ಎಂಬುವುದು ಹೆಚ್ಚಿನವರಿಗೆ ತಿಳಿದಿಲ್ಲ ನಿಮ್ಮ ಅಂಗೈಯಲ್ಲಿ ಅಡಗಿರುವ ಚಿಹ್ನೆಗಳು ನಿಮ್ಮ ಬದುಕಿನ ಸೋಲು ಗೆಲುವುಗಳನ್ನು ಸೂಚಿಸುತ್ತದೆ .ಹಾಗಾಗಿ ಬದುಕಿನಲ್ಲಿ ಯಶಸ್ಸು ಬೇಕೆಂದರೆ ನಿಮ್ಮ ಅಂಗೈ ರೇಖೆಯನ್ನು ನೀವು ತಿಳಿದುಕೊಳ್ಳಲೇ ಬೇಕು ಈ ರೀತಿಯ ಶಾಸ್ತ್ರವನ್ನು ಹಸ್ತಾ ಸಾಮುದ್ರಿಕ ಚಿಹ್ನೆ ಅಥವಾ ಅಂಗೈ ರೇಖೆ ಶಾಸ್ತ್ರ ಎಂದು ಕರೆಯುತ್ತಾರೆ. ಅಂಗೈಯಲ್ಲಿರುವ ಪ್ರತಿಯೊಂದು ರೇಖೆಗಳ ಹಿಂದೆ ಒಂದೊಂದು ಲಕ್ಷಣ ಅಡಗಿರುತ್ತದೆ ಅದನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕು .ಹಾಗಾದರೇ ಆ ರೇಖೆಗಳು ಯಾವುದು ಎಂದು ತಿಳಿದುಕೊಳ್ಳೋಣ ಬನ್ನಿ .
ಸೂರ್ಯನ ರೇಖೆ ಇದ್ದವರು ಅದೃಷ್ಟಶಾಲಿ
ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ನಿಮ್ಮ ಅಂಗೈಯಲ್ಲಿ ಇರುವ ಒಂದೊಂದು ರೇಖೆಗಳು ಒಂದೊಂದು ರೀತಿಯ ಅದೃಷ್ಟವನ್ನು ನಿಮಗೆ ತರುತ್ತದೆ. ಯಾರ ಕೈಯಲ್ಲಿ ಸೂರ್ಯನ ರೇಖೆ ಏರುವಂತಿರುತ್ತದ್ದೆಯೋ ಹಾಗು ಸೂರ್ಯನ ರೇಖೆಯಿಂದ ಬೇರೆ ಯಾವುದೇ ರೇಖೆಯು ಹೊರಹೊಮ್ಮಿ ಗುರು ಪರ್ವತವನ್ನು ತಲುಪಿರುತ್ತದೆಯೋ , ಅಂತಹ ವ್ಯಕ್ತಿಯು ತುಂಬಾ ಅದೃಷ್ಟಶಾಲಿ ಎನ್ನಬಹುದು ಹಾಗೂ ಅವರಿಗೆ ಜೀವನದಲ್ಲಿ ಸರ್ಕಾರಿ ಹುದ್ದೆ ಸಿಗುವ ಸಾಧ್ಯತೆ ಇರುತ್ತದೆ .
ತ್ರಿಕೋನ ಚಿಹ್ನೆಯಿಂದ ಉನ್ನತ ಸ್ಥಾನ ಸಿಗುತ್ತದೆ .
ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಬರುವ ಪ್ರಕಾರ ಬುಧದ ಪರ್ವತದಲ್ಲಿರುವ ತ್ರಿಕೋನ ಶುಭ ಫಲಿತಾಂಶಗಳನ್ನು ನೀಡುತ್ತದೆ. ಹೀಗಾಗಿ ಯಾರ ಅಸ್ತದಲ್ಲಿ ತ್ರಿಕೋನ ಚಿಹ್ನೆಗಳು ಬುಧ ಪರ್ವತ ಮೇಲಿನ ರೇಖೆಗಳನ್ನು ಸೇರಿದರೆ ಅಂತಹ ಜನರು ಆಡಳಿತ ಕ್ಷೇತ್ರದಲ್ಲಿ ಉನ್ನತ ಸ್ಥಾನಮಾನಕ್ಕೆ ಹೋಗುತ್ತಾರಂತೆ. ಇನ್ನು ಆರೋಗ್ಯ ರೇಖೆಯು ಮೆದುಳಿಗೆ ಮತ್ತು ಅಂಗೈಯಲ್ಲಿ ಅದೃಷ್ಟ ರೇಖೆಗೆ ಸೀಮಿತವಾಗಿದೆ, ಅಂತಹ ಜನರು ಆರೋಗ್ಯವಾಗಿರುತ್ತಾರೆ. ಮತ್ತೊಂದೆಡೆ, ಉಗುರುಗಳು ಅಂದವಾಗಿ ಮತ್ತು ಸ್ವಚ್ಛವಾಗಿ ಕಾಣುತ್ತಿದ್ದರೆ, ಅಂತಹ ಜನರು ಅದೃಷ್ಟದ ಬೆಂಬಲವನ್ನು ಪಡೆಯುತ್ತಾರೆ.
ಉತ್ತಮ ತಲೆ ರೇಖೆಯಿಂದ ಒಳ್ಳೆಯ ಕೆಲಸ ಪಡೆಯುತ್ತಾರೆ .
ಮನುಷ್ಯ ಸಮಾಜದಲ್ಲಿ ಒಳ್ಳೆಯ ಕೆಲಸವನ್ನು ಪಡೆಯಬೇಕು ಎಂದರೆ ಆತನ ಅಂಗೈಯಲ್ಲಿರುವ ರೇಖೆಗಳು ಸಹಾಯ ಮಾಡುತ್ತದೆ, ಒಬ್ಬ ವ್ಯಕ್ತಿಯು ಸುಂದರವಾದ ಮತ್ತು ಬಲವಾದ ಹೆಬ್ಬೆರಳು ಹಾಗೂ ಉತ್ತಮ ತಲೆ ರೇಖೆಯನ್ನು ಹೊಂದಿದ್ದರೆ ಆತ ಉದ್ಯೋಗದಲ್ಲಿ ಸಾಕಷ್ಟು ಪ್ರಗತಿ ಪಡೆಯುವುದಲ್ಲದೆ ಮಹತ್ತರ ಸ್ಥಾನಕ್ಕೆ ಹೋಗುತ್ತಾನೆ.ಹಾಗೂ ಅಂಗೈಯಲ್ಲಿರುವ ಚಕ್ರದ ಗುರುತು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ ಅವರು ಶ್ರೀಮಂತ ಮತ್ತು ಅದೃಷ್ಟಶಾಲಿಗಳು ಎಂದು ಪರಿಗಣಿಸುತ್ತಾರೆ .
ನಿಮಗೆ ಮದುವೆ ಬೇಗ ಆಗ್ತಿಲ್ವ ಹೀಗೆ ಮಾಡಿ ಖಂಡಿತ ಮದುವೆ ಯೋಗ ಕೂಡಿಬರುತ್ತದೆ :
ದೀಪಾವಳಿಯ ಮುಂಚೆ ಈ ಒಂದು ಕೆಲಸ ಮಾಡಿದರೆ ನಿಮಗೆ ಹಣದ ಕೊರತೆ ಉಂಟಾಗುವುದಿಲ್ಲ …!


