Monday, December 23, 2024

Latest Posts

ಶಾಸಕ ಹರೀಶ್ ಪೂಂಜಾರಿಗೆ ತಲವಾರು ಝಲಪಿಸಿದ ದುಷ್ಕರ್ಮಿಗಳು…!

- Advertisement -

State News:

ದುಷ್ಕರ್ಮಿಗಳ ಗುಂಪೊಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಕಾರಿಗೆ ಅಡ್ಡಗಟ್ಟಿ ತಲವಾರು ಝಳಪಿಸಿದ ಘಟನೆ ನಡೆದಿದೆ.ಮಂಗಳೂರು ನಗರ ಹೊರವಲಯದ ಫರಂಗಿಪೇಟೆ ಎಂಬಲ್ಲಿ ಗುರುವಾರ ರಾತ್ರಿ ಘಟನೆ ನಡೆದಿದೆ. ಇದನ್ನೂ ಓದಿ… ಮಂಡ್ಯ ಮೂಲದ ಯುವಕನ ಮತಾಂತರ..?!

ಗುರುವಾರ ರಾತ್ರಿ ರ ವೇಳೆಗೆ ಘಟನೆ ನಡೆದಿದ್ದು, ಶಾಸಕರು ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿ ಬೆಳ್ತಂಗಡಿಗೆ ತೆರಳುತ್ತಿದ್ದರು. ತನ್ನ ಕಾರು ಬದಲಾಗಿ ಶಾಸಕರು ತಮ್ಮ ಸಂಬಂಧಿಯೋರ್ವರ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಪಡೀಲ್‌ನಿಂದ ಫರಂಗಿಪೇಟೆಯವರೆಗೆ ದುಷ್ಕರ್ಮಿಗಳು ಕಾರನ್ನು ಬೆನ್ನಟ್ಟಿದ್ದಾರೆ. ಇದನ್ನೂ ಓದಿ… ಟ್ಯೂಶನ್ ಗೆ ಹೋಗಿದ್ದ ಬಾಲಕಿ ಶವವಾಗಿ ಪತ್ತೆ…! 

ಫರಂಗಿಪೇಟೆಯಲ್ಲಿ ಕಾರು ಸೈಡ್ ಹಾಕುತ್ತಿದ್ದಂತೆಯೇ ಕಿಡಿಗೇಡಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ತಲವಾರು ಝಳಪಿಸಿ ಪರಾರಿಯಾಗಿದ್ದಾರೆ. ಈ ಬಗ್ಗೆ ಶಾಸಕ ಹರೀಶ್ ಪೂಂಜಾ ಕಾರು ಚಾಲಕ ನವೀನ್ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ.ಇದನ್ನೂ ಓದಿ… ಶವ ಬಿಸಾಕಲು ಬಂದವರು ಪೊಲೀಸರ ವಶವಾದರು…!

ಕೆ.ಆರ್.ಪೇಟೆಯಲ್ಲಿ ಧಾರ್ಮಿಕ ಚಟುವಟಿಕೆಗೆ ಹೊಸ ಸ್ವರೂಪ: ಸುನೀಲ್ ಕುಮಾರ್

ಹಾಸನಾಂಬೆ ಮೊದಲ ದಿನದ ದರ್ಶನಕ್ಕೆ ಹರಿದು ಬಂತು ಭಕ್ತ ಸಾಗರ…!

ಅ.14 ರಂದು ಮಹಾ ಕುಂಭಮೇಳದ ಉದ್ಘಾಟನಾ ಕಾರ್ಯಕ್ರಮಗಳ ವಿವರ ಇಂತಿದೆ…

- Advertisement -

Latest Posts

Don't Miss