Bengaluru: ಬೆಂಗಳೂರಿನ ಮಲ್ಲೇಶ್ವರದಲ್ಲಿರುವ CTR ಹೋಟೇಲ್ ಅಂದ್ರೆ ಯಾರಿಗೆ ತಿಳಿದಿಲ್ಲಾ ಹೇಳಿ..? ಪ್ರಸಿದ್ಧ ಉಪಹಾರ ಕೇಂದ್ರ ಅದು. ಸೆಲೆಬ್ರಿಟಿಗಳು ಕೂಡ ಇಲ್ಲಿ ಬರ್ತಾರೆ. ಆದರೆ ಇದೀಗ ಓರ್ವ ಗ್ರಾಹಕರು ಇಲ್ಲಿನ ಮಸಾಲೆ ದೋಸೆಯಲ್ಲಿ ಹಾಕಿದ್ದ ಪಲ್ಯದಲ್ಲಿ ತಮಗೆ ಜಿರಳೆ ಸಿಕ್ಕಿದೆ ಎಂದು ಆರೋಪಿಸಿದ್ದಾರೆ.
ಇದನ್ನ ಅಲ್ಲಿನ ಸಿಬ್ಬಂದಿಗೆ ಹೇಳಿದಾಗ, ಅವರು ನಾವು ನಿಮಗೆ ಬೇರೆ ದೋಸೆ ಕ“ಡ್ತೀವಿ ಅಂತಾ ಹೇಳಿದ್ರು, ಆದ್ರೆ ಅಲ್ಲಿನ ಶುಚಿತ್ವದ ಬಗ್ಗೆ ಈಗ ಪ್ರಶ್ನೆ ಎದ್ದಿದೆ. ಹೀಗೆ ಮಾಡಿದ್ರೆ ಗ್ರಾಹಕರ ಆರೋಗ್ಯದ ಸ್ಥಿತಿ ಏನಾಗಬೇಡಾ ಅಂತಾ ಪ್ರಶ್ನಿಸಿದ್ದಾರೆ.
ಅಲ್ಲದೇ ಈ ಹೋಟೇಲ್ನ್ ಕಿಡಕಿಯಲ್ಲಿ ಧೂಳು ತುಂಬಿದ್ದು, ಜೇಡಗಳು ಬಲೆ ಕಟ್ಟಿತ್ತು. ಇದೇ ಹಿಂಗದ್ದ ಮೇಲೆ ಕಿಚನ್ ಹೇಗಿರಬೇಕು ಅನ್ನೋ ಪ್ರಶ್ನೆ ಖಂಡಿತವಾಗಿಯೂ ಕಾಡುತ್ತದೆ ಎಂದು ಗ್ರಾಹಕರು ಹೇಳಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೋ ವೈರಲ್ ಆಗಿದ್ದು, ಹಲವರು ಸಿಬ್ಬಂದಿಗಳ ವರ್ತನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.




