Saturday, July 5, 2025

Latest Posts

ಕಪ್ಪು ಮೆಣಸಿನಲ್ಲಿ ಬಂಗಾರದಂತ ಆರೋಗ್ಯದ ಲಾಭಗಳು …!

- Advertisement -

Health tips:

ಕಪ್ಪು ಬಂಗಾರ ಎಂದು ಕರೆಯಲ್ಪಡುವ ಕಪ್ಪು ಮೆಣಸಿನ ಸೇವನೆಯಿಂದ ನಮ್ಮ ದೇಹದಲ್ಲಿ ಬಹಳ ರೋಗಗಳನ್ನು ತಡೆಗಟ್ಟಬಹುದು ಹಾಗಾದರೆ ಇದರಲ್ಲಿ ಅಂತಹ ಶಕ್ತಿ ಏನಿದೆ ಎಂದು ತಿಳಿದು ಕೊಳ್ಳೋಣ .

ಇದರಲ್ಲಿ ವಿಟಮಿನ್ A ,ವಿಟಮಿನ್ C ,ವಿಟಮಿನ್ K ,ಪೊಟ್ಯಾಶಿಯಮ್, ಮ್ಯಾಗ್ನಿಶಿಯಂ, ಐರನ್ , Antioxidants,ಹೀಗೆ ಇನ್ನು ಹಲವಾರು ಖನಿಜಾಂಶವನ್ನು ,ಜೀವಸತ್ವಗಳನ್ನು ,ಪೋಷಕಾಂಶಗಳನ್ನು, ಹೊಂದಿರುವಂತಹ ಆಹಾರ ಎನ್ನಬಹುದು .ಹಾಗಾದರೆ ಕಪ್ಪು ಮೆಣಸನ್ನು ಹೇಗೆ ಬಳಸಬೇಕು ಹಾಗೂ ಯಾವ ರೀತಿಯ ತೊಂದರೆಗಳಿಗೆ ಇದನ್ನು ಬಳಸಬೇಕು ಎಂದು ತಿಳಿದುಕೊಳ್ಳೋಣ.

ಕಪ್ಪು ಮೆಣಸನ್ನು ಪುಡಿ ಮಾಡಿ ಒಂದು ಡಬ್ಬದಲ್ಲಿ ಶೇಖರಣೆ ಮಾಡಿ ಇಟ್ಟುಕೊಳ್ಳಬೇಕು. ನಂತರ ನೀವು ಅದನ್ನು 2ಚಿಟಿಕೆಯಷ್ಟು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿಗೆ ಬೆರೆಸಿ ಕುಡಿಯಬೇಕು ,ಇದರ ಫಲಿತಾಂಶ ನಿಮಗೆ ಇನ್ನು ಹೆಚ್ಚಾಗಿ ಬೇಕಾದರೆ, 2ಕಾಳು ಮೆಣಸನ್ನು ಚೆನ್ನಗಿ ಅಗಿದು ತಿಂದು, ಅರ್ಧ ಗ್ಲಾಸ್ ಬೆಚ್ಚಗಿನ ನೀರನ್ನು ಕುಡಿಯಬೇಕು .ಹೀಗೆ ಮಾಡುವುದರಿಂದ ನಿಮ್ಮ ಶರೀರದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಹಾಗೂ ಬೊಜ್ಜ ಕಡಿಮೆಯಾಗುತ್ತಾ ಹೋಗುತ್ತದೆ.ಇದರ ಸೇವನೆ ಯಿಂದ ರಕ್ತ ನಾಳಗಳಲ್ಲಿ ಉಂಟಾಗುವ ಬ್ಲಾಕೇಜ್ ಕಡಿಮೆಯಾಗಿ ರಕ್ತ ಶುದ್ದೀಕರಣವಾಗುತ್ತದೆ. ಹಾಗೂ ಬ್ರೈನ್ ಸ್ಪೆಲಿಂಗ್,ಬ್ರೈನ್ ಬ್ಲಡ್ ಕ್ಲೋಟ್ ,ಕಡಿಮೆ ಮಾಡಲು ಇದು ಪರಿಣಾಮಕಾರಿ ಯಾಗಿದೆ. ಕ್ರಮವಾದ ಸೇವನೆಯಿಂದ ಅಲ್ಸರ್ ಕಡಿಮೆಯಾಗುತ್ತದೆ ,ಹಾಗೂ ನಿಮ್ಮ ಚರ್ಮದ ಕಾಂತಿ ಹೆಚ್ಚುತ್ತದೆ, ಹಲವಾರು ಚರ್ಮದ ವ್ಯಾದಿಗಳನ್ನು ಇದು ನಿವಾರಣೆ ಮಾಡುತ್ತದೆ .ಅಜೀರ್ಣ ಸಮಸ್ಯೆ ಇರುವವರು ಹಾಗೂ ಮಲಬದ್ಧತೆ ಇರುವವರು ರಾತ್ರಿ ಊಟದ ನಂತರ 2ಮೆಣಸಿನ ಕಾಳನ್ನು ಚೆನ್ನಾಗಿ ಅಗಿದು ತಿನ್ನಬೇಕು ಇದರಿಂದ ನಿಮ್ಮ ಸಮಸ್ಯೆ ಪರಿಹಾರ ವಾಗುತ್ತದೆ .

ನೆನೆಸಿದ ಒಣ ದ್ರಾಕ್ಷಿಯ ಜೊತೆ 2ಕಪ್ಪು ಮೆಣಸನ್ನು ಸೇರಿಸಿ ತಿನ್ನುವುದರಿಂದ ರಕ್ತ ಹೀನತೆ ಸಮಸ್ಯೆ ದೂರವಾಗುತ್ತದೆ. ಈ 2ಜೊತೆಗೆ ಸೇವಿಸುವುದರಿಂದ ಸಂಪೂರ್ಣ ಪೋಷಕ ತತ್ವಗಳು ಶರೀರಕ್ಕೆ ಸಿಗುತ್ತದೆ ಹಾಗೂ ನಿಮಗೆ ತಲೆಯಲ್ಲಿ DANDRUF ಇದ್ದರೆ, ಒಂದು ಸ್ಪೂನ್ ಕಾಳು ಮೆಣಸಿನ ಪುಡಿಯನ್ನು ಕೊಬ್ಬರಿ ಎಣ್ಣೆಗೆ ಮಿಕ್ಸ್ ಮಾಡಿ ಕೊದಲಿಗೆ ಹಚ್ಚಿ 1ಗಂಟೆಯ ವರೆಗೂ ಹಾಗೆಯೆ ಬಿಟ್ಟು ಸೀಗೆಕಾಯಿಯಿಂದ ನಿಮ್ಮ ಕೂದಲನ್ನು ತೊಳಿಯಬೇಕು. ಹೀಗೆ ಮಾಡಿದರೆ ತಲೆಯಲ್ಲಿ ಹೊಟ್ಟು ಕ್ರಮೇಣ ಕಡಿಮೆ ಯಾಗುತ್ತಾ ಬರುತ್ತದೆ .

ಜ್ವರ ,ನೆಗಡಿ ,ಕೆಮ್ಮು,ಯಾವುದೇ INFECTION ಆಗಿರಲಿ ತುಳಸಿ ಎಲೆಯ ಜೊತೆ ಕಪ್ಪು ಮೆಣಸನ್ನು ಬೆರೆಸಿ ಕಷಾಯ ಮಾಡಿ ಕುಡಿದರೆ ನಿಮ್ಮ INFICTION ಕಡಿಮೆ ಯಾಗುತ್ತದೆ .ಚಿಕ್ಕ ಮಕ್ಕಳಿಗೆ ಅವರು ತಿನ್ನುವ ಅನ್ನದಲ್ಲಿ ಈ ಪುಡಿಯನ್ನು ಒಂದು ಚಿಟಿಕೆ ಮಿಕ್ಸ್ ಮಾಡಿ ಕೊಡಿ ಇದರಿಂದ ಅವರ ಆರೋಗ್ಯ ಸುಧಾರಣೆ ಯಾಗುತ್ತದೆ, ಇದರಿಂದ ಮಕ್ಕಳಲ್ಲಿ ಜ್ಞಾಪಕ ಶಕ್ತಿ ಹೆಚ್ಚುತ್ತದೆ .

ಕಿತ್ತಳೆ ಹಣ್ಣು ನಿಮ್ಮ ಚರ್ಮಕ್ಕೆ ವರದಾನವಾಗಿದೆ…!

ಕೇವಲ ಒಂದು ತಿಂಗಳಲ್ಲಿ ನಿಮ್ಮ ತೂಕ ಕಡಿಮೆ ಮಾಡಬಹುದು ….!

ಮನುಷ್ಯರು ಇವುಗಳನ್ನು ತಡೆದರೆ…. ಅಕಾಲಿಕ ಮರಣ ಸಂಭವಿಸುತ್ತದೆ …!

 

- Advertisement -

Latest Posts

Don't Miss