Friday, November 22, 2024

Latest Posts

ಕಾರ್ತಿಕ ಸೋಮವಾರ ಉಪವಾಸದ ನಿಯಮಗಳೇನು…?

- Advertisement -

Devotional:

ಕಾರ್ತಿಕ ಮಾಸದ ಸೋಮವಾರದ ಪೂಜೆಯನ್ನು ಉಪವಾಸವಿದ್ದು ಮಾಡಿದರೆ ಪುಣ್ಯ ಪ್ರಾಪ್ತಿಯಾಗುವುದು. ಆದ್ದರಿಂದ ಉಪವಾಸಕ್ಕೆ ಕಾರ್ತಿಕ ಸೋಮವಾರ ಶ್ರೇಷ್ಠವೆಂದು ಹೇಳಲಾಗುತ್ತದೆ. ಉಪವಾಸ ಮಾಡುವುದರಿಂದ  ಸಾತ್ವಿಕತೆಯ ಕಡೆಗೆ ನಮ್ಮ ಮನಸ್ಸು ಇರುತ್ತದೆ ಹಾಗೂ ದೇಹಕ್ಕೆ ಚೈತನ್ಯ ದೊರೆಯುತ್ತದೆ .

ಕಾರ್ತಿಕ ಸೋಮವಾರ ಉಪವಾಸ ಮಾಡುವಾಗ ಅನುಸರಿಬೇಕಾದ ನಿಯಮಗಳೇನು..?
ಈ ದಿನ ಉಪವಾಸ ಮಾಡುವುದರಿಂದ ಶಿವನ ಕೃಪೆಗೆ ಪಾತ್ರರಾಗಬಹುದು ,ಬೆಳಗ್ಗೆ ಸೂರ್ಯೋದಕ್ಕಿಂತ ಮುಂಚೆ ಎದ್ದು ನದಿ ಸ್ನಾನ ಅಥವಾ ಮನೆಯಲ್ಲೇ ತಣ್ಣೀರಿನಲ್ಲಿ ಸ್ನಾನ ಮಾಡಿ, ಶಿವ ಪಾರ್ವತಿ ಫೋಟೋಗೆ ಹೂಗಳಿಂದ ಅಲಂಕಾರ ಮಾಡಿ, ಸೂರ್ಯ ಹುಟ್ಟುವ ಮುಂಚೆ ದೇವರಿಗೆ ದೀಪ ಹಚ್ಚಬೇಕು. ನಂತರ ಗಣಪತಿಯ ಪ್ರಾರ್ಥನೆಯಿಂದ ಪೂಜೆಯನ್ನೂ ಪ್ರಾರಂಭಿಸಬೇಕು. ಶಿವನನನ್ನು ಮನಸ್ಸಿನಲ್ಲಿ ಧ್ಯಾನ ಮಾಡುತ್ತಾ ದೂಪ, ದೀಪಗಳನ್ನು ಹಚ್ಚಬೇಕು. ಸಮೀಪದ ಶಿವನ ದೇವಾಲಯಕ್ಕೆ ಹೋಗಿ ಶಿವನ ದರ್ಶನ ಪಡೆಯಬೇಕು, ಸಾಧ್ಯವಾದರೆ ದೇವಾಲಯದಲ್ಲೂ ದೀಪವನ್ನು ಹಚ್ಚಿ. ಕಾರ್ತಿಕ ಸೋಮವಾರ ಉಪವಾಸ ಮಾಡುವವರು ಮಜ್ಜಿಗೆ, ಕಾಫಿ, ಟೀ ಇವುಗಳನ್ನು ತೆಗೆದುಕೊಳ್ಳುವಂತಿಲ್ಲ, ಬೇಯಿಸಿದ ಅಥವಾ ಕಾಯಿಸಿದ ಯಾವುದೇ ಆಹಾರವನ್ನು ತೆಗೆದುಕೊಳ್ಳಬಾರದು. ನಂತರ ಸಂಜೆ ಮತೊಮ್ಮೆ ಸ್ನಾನ ಮಾಡಿ ಶಿವನಿಗೆ ದೀಪ ಹಚ್ಚಿ ಶಿವನನ್ನು ಆರಾಧಿಸಿ, ನಕ್ಷತ್ರಗಳ ದರ್ಶನ ಮಾಡಿದ ಬಳಿಕ ಊಟ ಮಾಡಬಹುದು. ಸಾತ್ವಿಕ ಆಹಾರವನ್ನಷ್ಟೇ ಸೇವಿಸಿ. ನೀರು, ಹಣ್ಣಿನ ರಸ ಶಿವನಿಗೆ ಅರ್ಪಿಸಿದ ಹಣ್ನುಗಳನ್ನು ಸೇವಿಸಬಹುದು. ದೀಪಾರಾಧನೆ ನಂತರವಷ್ಟೇ ಆಹಾರ ಸೇವಿಸಿ. ಮಾಂಸ, ಮದ್ಯ ಮುಟ್ಟಬಾರದು.

ಕಾರ್ತಿಕ ಸೋಮಾವಾರ ಉಪವಾಸದಲ್ಲಿ 3ಬಗೆಗಳಿದೆ :
ಸೋಮವಾರದ ಉಪವಾಸ ,ಸೋಮವಾರ ಪ್ರದೋಷ ಉಪವಾಸ ,16 ಸೋಮವಾರ ಉಪವಾಸ ,ಈ ವ್ರತಗಳನ್ನು ಆಚರಿಸುವಾಗ ಅನುಸರಿಸಬೇಕಾದ ನಿಯಮಗಳು ಒಂದೇ ರೀತಿ ಇರುತ್ತದೆ. ಬೆಳಗ್ಗೆ ಎದ್ದು ಸ್ನಾನ ಮಾಡಿ, ಮಡಿಯುಟ್ಟು ದೀಪ ಹಚ್ಚಿ ಶಿವನ ಪೂಜೆ ಮಾಡಬೇಕು. ಆದರೆ 16 ಸೋಮವಾರಗಳ ವ್ರತಗಳನ್ನು ಮಾಡುವ ವಿಧಾನದಲ್ಲಿ ಸ್ವಲ್ಪ ವ್ಯತ್ಯಾಸವಿದೆ.

ಕಾರ್ತಿಕ ಸೋಮವಾರ ಮಾಡುವ ಉಪವಾಸ: ಬೆಳಗ್ಗೆ ಎದ್ದು ಸ್ನಾನಾದಿ ಕಾರ್ಯಗಳನ್ನು ಮುಗಿಸಿ, ಶಿವನಿಗೆ ಪೂಜೆ ಸಲ್ಲಿಸಿ ದಿನವಿಡೀ ಉಪವಾಸವನ್ನು ಮಾಡಬೇಕು ನಂತರ, ರಾತ್ರಿ ಶಿವನಿಗೆ ಪೂಜೆ ಸಲ್ಲಿಸಿ, ಶಿವಾಲಯ ಬಾಗಿಲು ಹಾಕಿದ ಬಳಿಕ ನಕ್ಷತ್ರಗಳ ದರ್ಶನದ ನಂತರ ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಬೇಕು. ಈ ರೀತಿ ಉಪವಾಸ ಮಾಡುವವರು ದಿನದಲ್ಲಿ ನೀರು, ಹಣ್ಣಿನ ರಸಗಳನ್ನು ,ಹಣ್ಣುಗಳನ್ನು ಮಾತ್ರ ತಿನ್ನಬಹುದು.

16 ಸೋಮವಾರಗಳ ವ್ರತ ಮಾಡುವ ವಿಧಾನ: ಈ ವ್ರತವನ್ನು ಪ್ರಾರಂಭಿಸುವಾ ಮೊದಲು ಶಿವನ್ನು ಧ್ಯಾನಿಸುತ್ತಾ ಪ್ರಾಂಭಿಸಬೇಕು, ಬೆಳಗ್ಗೆ ಶಿವನಿಗೆ ಬಗ್ಗೆಬಗ್ಗೆಯ ಹೂಗಳನ್ನು ಅರ್ಪಿಸಿ, ದೂಪ ದೀಪಗಳನ್ನು ಹಚ್ಚಿ ಪೂಜಿಸಬೇಕು, ಪೂಜೆಯಲ್ಲಿ ವೀಳ್ಯೆದೆಲೆ, ತೆಂಗಿನಕಾಯಿ ಹಾಗೂ ಸಿಹಿ ಪದಾರ್ಥಗಳನ್ನು ನೈವೇದ್ಯವಾಗಿ ಇಡಬೇಕು. ನಂತರ 16 ಸೋಮವಾರ ವ್ರತ ಮಂತ್ರವನ್ನು ಹೇಳಬೇಕು. ಈ ವ್ರತ ಮಾಡುವವರು ಉಪವಾಸವಿದ್ದು ವ್ರತವನ್ನು ಆಚರಿಸಬೇಕು. ದಿನವಿಡೀ ಶಿವನ ಧ್ಯಾನದಲ್ಲಿಯೇ ಇರಬೇಕು,ನೀವು ಆಫೀಸ್‌ಗೆ ಹೋದರು ಸಹ ಕೆಲಸ ಮಾಡುವಾಗ ಮನಸ್ಸಿನಲ್ಲಿ ಶಿವನ ಮಂತ್ರಗಳನ್ನು ಪಠಿಸುತ್ತಾ ಇರಬೇಕು. ನಂತರ ಸಂಜೆ ಶಿವನಿಗೆ ದೀಪ ಬೆಳಗಿ ಆರತಿ ಎತ್ತಿ, ನಂತರವಷ್ಟೇ ನೀವು ಅಹಾರ ಸೇವಿಸಬೇಕು.ಈ ರೀತಿ 16 ಸೋಮವಾರ ಮಾಡಬೇಕು.

ಪ್ರದೋಷ ಉಪವಾಸ ಮಾಡುವ ವಿಧಾನ:
ಈ ಉಪವಾಸವನ್ನು ಸೂರ್ಯ ಹುಟ್ಟುವ ಮೊದಲು ಪ್ರಾಂಭಿಸಬೇಕು .ಯಾರು ಈ ಉಪವಾಸವನ್ನು ಮಾಡುತ್ತಾರೋ ಅವರು ದಿನವಿಡೀ ಉಪವಾಸವಿರಬೇಕು .ಮಾರನೆಯ ದಿನ ಸೋರ್ಯೋದಯವಾದ ಬಳಿಕವಷ್ಟೇ ಆಹಾರವನ್ನು ಸೇವಿಸಬೇಕು .ಯಾರು ಈ ವ್ರತ ಮಾಡುತ್ತಾರೋ ಅವರು ದಿನವಿಡೀ ತಪ್ಪದೆ ಶಿವ ನಾಮ ಜಪ ಮಾಡುತ್ತಾ ಇರಬೇಕು .ಸೂರ್ಯಾಸ್ತಕ್ಕೆ ಮುಂಚೆ ಸ್ನಾನ ಮಾಡಿ ಬಡವರಿಗೆ ಧಾನ ಮಾಡಿದರೆ ಶುಭ ಫಲಗಳು ಪ್ರಾಪ್ತಿ ಯಾಗುತ್ತದೆ .

ಮಂಗಳವಾರ ಹನುಮನ ಕೃಪೆಗೆ ಪಾತ್ರರಾಗಬೇಕಾದರೆ ಹೀಗೆ ಪೂಜಿಸಿ….!

ಕಾರ್ತಿಕ ಮಾಸ ಆರಂಭ, ಅಂತ್ಯ, ಹಾಗೂ ಆಚರಣೆ…!

ದಶಕಂಠ ರಾವಣ ರಚಿಸಿದ ಸ್ತೋತ್ರ ….!

 

- Advertisement -

Latest Posts

Don't Miss