Thursday, December 12, 2024

Latest Posts

ಕಾರ್ತಿಕ ಮಾಸ ಆರಂಭ, ಅಂತ್ಯ, ಹಾಗೂ ಆಚರಣೆ…!

- Advertisement -

Devotional:

ಹಿಂದೂ ಧರ್ಮದಲ್ಲಿ ಕಾರ್ತಿಕ ಮಾಸವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಶಿವನ ಪ್ರಿಯವಾದ ಮಾಸದಲ್ಲಿ ಪೂಜೆ, ಆಚರಣೆಗಳು, ಯಾಗ, ಸ್ನಾನ, ದಾನ ಇತ್ಯಾದಿಗಳು ಎಲ್ಲಾ ಪಾಪಗಳನ್ನು ನಾಶಪಡಿಸುವುದಲ್ಲದೆ, ಸಂತೋಷ, ಸಮೃದ್ಧಿ ಮತ್ತು ಸಂಪತ್ತನ್ನು ಹೆಚ್ಚಿಸುತ್ತವೆ.

ದೀಪಗಳ ಮಾಸ ಎಂದೇ ಹೆಸರು ಪಡೆದ ಕಾರ್ತಿಕ ಮಾಸವು ಹಿಂದೂ ಪಂಚಾಂಗದ ಎಂಟನೇ ತಿಂಗಳು, ಶಿವನ ಆರಾಧನೆಗೆ ಶ್ರೇಷ್ಠ ಮಾಸ ಎಂದು ಹಿಂದೂ ಪುರಾಣಗಳಲ್ಲಿ ಹೇಳಲಾಗಿದೆ. ಈ ಮಾಸದಲ್ಲಿ ಪ್ರತಿ ದಿನ, ಅಥವಾ ಪ್ರತಿ ಸೋಮವಾರ ಮನೆಯಲ್ಲಿ ದೀಪ ಬೆಳಗುವುದು ಅತ್ಯಂತ ಶುಭಕರ ಎಂದು ಭಾವಿಸಲಾಗಿದೆ .ಅತ್ಯಂತ ಪವಿತ್ರ ಮಾಸ ಎಂದೇ ಹೆಸರಾದ ಕಾರ್ತಿಕ ಮಾಸವು, 2022ನೇ ಸಾಲಿನಲ್ಲಿ ಅಕ್ಟೋಬರ್ 26 ರಂದು ಬಲಿ ಪಾಡ್ಯಮಿಯೊಂದಿಗೆ ಆರಂಭವಾಗುತ್ತದೆ. ಹಾಗೂ ನವೆಂಬರ್ 23ರಂದು ಮುಗಿಯಲಿದೆ .ಕಾರ್ತಿಕ ಮಾಸದ ಆರಂಭ, ಅಮಾವಾಸ್ಯೆ, ಪೌರ್ಣಿಮೆ, ಸಂಕಷ್ಟ ಚತುರ್ಥಿ ಹಾಗೂ ಇತರ ವಿಶೇಷ ದಿನಗಳು ಯಾವುವು ಎಂದು ನೋಡೋಣ.

ಗಣೇಶನಿಗೆ ಸಮರ್ಪಿತವಾದ ಸಂಕಷ್ಟಹರ ಚತುರ್ಥಿ ವ್ರತವು ಕಾರ್ತಿಕ ಮಾಸದ 2022ರಲ್ಲಿ ನವೆಂಬರ್ 12ರಂದು, ಬರಲಿದೆ ಚಂದ್ರೋದಯವು ರಾತ್ರಿ 8:59 ಕ್ಕೆ.

2022 ಕಾರ್ತಿಕ ಮಾಸದ ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷ , ಶುಕ್ಲ ಪಕ್ಷವು ಅಕ್ಟೋಬರ್ 26ರಿಂದ ನವೆಂಬರ್ 8ರವರೆಗೆ ಇರುತ್ತದೆ. ಕೃಷ್ಣ ಪಕ್ಷ ನವೆಂಬರ್ 9ರಿಂದ ನವೆಂಬರ್ 23ರವರೆಗೆ ಇರುತ್ತದೆ.

ಕಾರ್ತಿಕ ಮಾಸದಲ್ಲಿ ಏಕಾದಶಿ ದಿನಗಳು ,ಪ್ರಬೋಧಿನಿ ಏಕಾದಶಿ ನವೆಂಬರ್4 ,ಕಾರ್ತಿಕ ಏಕಾದಶಿ ಮತ್ತು ಪಂಢರಪುರ ಯಾತ್ರೆ ತುಳಸಿ ವಿವಾಹ, ಉತ್ಪತ್ತಿ ಏಕಾದಶಿ  ನವೆಂಬರ್20.

ಕಾರ್ತೀಕ ಪೂರ್ಣಿಮಾ ಅಥವಾ ಹುಣ್ಣಿಮೆ ನವೆಂಬರ್8 ,ಪೂರ್ಣಿಮಾ ನವೆಂಬರ್7 ರಂದು ಮಧ್ಯಾಹ್ನ 3:58 ಕ್ಕೆ ಪ್ರಾರಂಭವಾಗುತ್ತದೆ, ಮತ್ತು ನವೆಂಬರ್8 ರಂದು 3:53ಕ್ಕೆ ಕೊನೆಗೊಳ್ಳುತ್ತದೆ. ತ್ರಿಪುರಾರಿ ಪೂರ್ಣಿಮೆ ನವೆಂಬರ್ 7, ಪೂರ್ಣಿಮಾ ವ್ರತ ,ನವೆಂಬರ್ 7, ಕಾರ್ತಿಕ ಸ್ನಾನ ಅಂತ್ಯದ ದಿನ ,ಕಾರ್ತಿಕ ಮಾಸ ತುಳಸಿ ಪೂಜೆ ಕೊನೆಯ ದಿನ.

ಕಾರ್ತಿಕ ಅಮಾವಾಸ್ಯೆ ನವೆಂಬರ್23 ರಂದು. ಬೆಳಿಗ್ಗೆ 6:07ಕ್ಕೆ ಪ್ರಾರಂಭವಾಗುತ್ತದೆ ಮತ್ತು ನವೆಂಬರ್ 24 ರಂದು ಮುಂಜಾನೆ 3:02ಕ್ಕೆ ಅಂತ್ಯವಾಗುತ್ತದೆ. 2022ರ ಕಾರ್ತಿಕ ಮಾಸದಲ್ಲಿ ನಾಲ್ಕು ಕಾರ್ತಿಕ ಸೋಮವಾರಗಳು ಇದೆ , 31ಅಕ್ಟೋಬರ್ , ನವೆಂಬರ್ 7 , 14ನವೆಂಬರ್ , ನವೆಂಬರ್ 21.

ಕಾರ್ತಿಕ ಮಾಸದ ಪ್ರಮುಖ ಹಬ್ಬಗಳು ಮತ್ತು ಮಂಗಳಕರ ದಿನಗಳು ಬಲಿ ಪ್ರತಿಪದ , ಅಕ್ಟೋಬರ್ 26 ಗೋವರ್ಧನ ಪೂಜೆ ,ಯಮ ದ್ವಿತೀಯಾ ಅಕ್ಟೋಬರ್ 26 ,ವೈಕುಂಠ ಚತುರ್ದಶಿ ನವೆಂಬರ್ 7 ,ತ್ರಿಪುರಾರಿ ಪೂರ್ಣಿಮಾ ನವೆಂಬರ್ 7 ,ಕಾಲಭೈರವ ಜಯಂತಿ ನವೆಂಬರ್ 16.

ದೀಪಾವಳಿ ಆಚರಣೆಯ ಹಿಂದಿನ ಪುರಾಣ…!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಮ್ಮ ರೊಮ್ಯಾಂಟಿಕ್ ಲೈಫ್‌‌‌‌‌‌ಗಾಗಿ ಗುಟ್ಟು…!

ದಶಕಂಠ ರಾವಣ ರಚಿಸಿದ ಸ್ತೋತ್ರ ….!

 

 

- Advertisement -

Latest Posts

Don't Miss