Health tips:
ಕೆಲವರಿಗೆ ಸಿಹಿತಿಂಡಿ ಎಂದರೆ ತುಂಬಾ ಇಷ್ಟ. ಎದುರಿಗೆ ಸಿಹಿ ತಿಂಡಿ ಕಂಡರೆ ತಿನ್ನದೇ ಇರಲಾರರು. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ,ಜನರು ಇತರ ರುಚಿಗಳಿಗಿಂತ ಹೆಚ್ಚಾಗಿ ಸಿಹಿ ತಿಂಡಿಗೆ ಅಡಿಕ್ಟ್ ಹಾಗಿ ಬಿಡುತ್ತಾರೆ, ನಾವು ಸಿಹಿತಿಂಡಿಗಳನ್ನು ಸೇವಿಸಿದಾಗ, ನಮ್ಮ ದೇಹದಲ್ಲಿ ಡೋಪಮೈನ್ ಅನ್ನೋ enzyme ಬಿಡುಗಡೆಯಾಗುತ್ತದೆ. ಇದರಿಂದ ಸಿಹಿ ತಿನ್ನಬೇಕು ಅನ್ನುವ ಬಯಕೆ ಹೆಚ್ಚಾಗುತ್ತದೆ. ಆದರೆ ಹೆಚ್ಚು ಸಿಹಿ ತಿಂದಷ್ಟೂ ದೇಹಕ್ಕೆ ಹೆಚ್ಚು ಹಾನಿಯಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಸಕ್ಕರೆಯಿಂದ ಮಾಡಿದ ಸಿಹಿತಿಂಡಿಗಳನ್ನು ಅತಿಯಾಗಿ ಇಷ್ಟಪಡುವವರು ರೋಗಗಳನ್ನು ಅವರ ಕೈಯಿಂದಾನೆ ಸೃಷ್ಟಿ ಮಾಡಿಕೊಳ್ಳುತ್ತಾರೆ ಎನ್ನುತ್ತಾರೆ ತಜ್ಞರು. ಹಾಗಾದರೆ ಅತಿಯಾಗಿ ಸಿಹಿ ತಿನ್ನುವುದರಿಂದ ಆಗುವ ದುಷ್ಪರಿಣಾಮಗಳೇನು ಎಂದು ನಾವೂ ನಿಮಗೆ ಹೇಳುತ್ತೇವೆ .
1.ನೀವು ಹೆಚ್ಚು ಸಿಹಿತಿಂಡಿಗಳನ್ನು ಸೇವಿಸಿದರೆ, ನಿಮ್ಮ ದೇಹದಲ್ಲಿ ಹೆಚ್ಚಿನ ಕೊಬ್ಬುಶೇಖರಣೆಯಾಗುತ್ತದೆ. ಇದರಿಂದ ನಿಮ್ಮ ತೂಕ ಹೆಚ್ಚಾಗುತ್ತದೆ. ಅಧಿಕ ತೂಕದಿಂದಾಗಿ, ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂದಿ ಕಾಯಿಲೆಗಳು ಬರುವ ಸಾಧ್ಯತೆ ಇದೆ .
2.ಕೆಲವರಿಗೆ ಊಟದ ನಂತರ ಸಿಹಿ ತಿನ್ನುವ ಅಭ್ಯಾಸ ಇರುತ್ತದೆ. ಈ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ನಾವು ತಿನ್ನುವ ಅನ್ನದಲ್ಲೂ ಸಕ್ಕರೆ ಪ್ರಮಾಣ ಇರುತ್ತದೆ ನೀವು ಸಿಹಿತಿಂಡಿಗಳನ್ನು ಸೇವಿಸಿದರೆ, ರಕ್ತದಲ್ಲಿ ಸಕ್ಕರೆ ಪ್ರಮಾಣದ ಏಕಕಾಲದಲ್ಲಿ ಬಿಡುಗಡೆಯಾಗುತ್ತದೆ ಇದು ಮಧುಮೇಹಕ್ಕೆ ಕಾರಣವಾಗಬಹುದು.
3.ಅನೇಕ ಜನರು ದುಃಖ್ಖದಲ್ಲಿರುವಾಗ ಅತಿಯಾದ ಸಿಹಿಯನ್ನು ಸೇವಿಸುತ್ತಾರೆ ಕೇಕ್, ಪೇಸ್ಟ್ರಿ ಮತ್ತು ಚಾಕೊಲೇಟ್ಗಳನ್ನು ತಿನ್ನುತ್ತಾರೆ. ಆದರೆ ಕೆಲವು ಅಧ್ಯಯನಗಳಲ್ಲಿ ಇದು ಡಿಪ್ರಷನ್ ಗೆ ಕಾರಣವಾಗಬಹುದು ಎಂದು ಹೇಳುತ್ತಾರೆ .
4.ಕೆಲವರಿಗೆ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸಿಹಿ ತಿನ್ನುವ ಅಭ್ಯಾಸವಿರುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ಮೂಡ್ ಡಲ್ ಆಗುವ ಜತೆಗೆ ಯಾವುದೇ ಕೆಲಸದಲ್ಲೂ ಆಸಕ್ತಿ ಇರುವುದಿಲ್ಲ ಎನ್ನುತ್ತಾರೆ ತಜ್ಞರು.
5.ರಾತ್ರಿಯಲ್ಲಿ ಅನೇಕ ಜನರು ಪೇಸ್ಟ್ರಿ ಮತ್ತು ಐಸ್ ಕ್ರೀಮ್ ತಿನ್ನುತ್ತಾರೆ. ಇದು ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಒತ್ತಡದ ಹಾರ್ಮೋನ್ ಮೇಲೆ ಪರಿಣಾಮ ಬೀರುತ್ತದೆ ಇದರಿಂದ ಸರಿಯಾಗಿ ನಿದ್ದೆ ಮಾಡಲು ಆಗುತ್ತಿಲ್ಲ. ನೀವು ರಾತ್ರಿಯಲ್ಲಿ ಸಿಹಿ ತಿನ್ನುವ ಅಭ್ಯಾಸವನ್ನು ಹೊಂದಿದ್ದರೆ, ಅದು ನಿದ್ರಾಹೀನತೆಗೆ ಕಾರಣವಾಗುತ್ತದೆ.
6.ಹೆಚ್ಚು ಸಿಹಿ ತಿನ್ನುವುದು ಬಾಯಿಯ ಆರೋಗ್ಯಕ್ಕೆ ಒಳ್ಳೆಯದಲ್ಲ ಸಿಹಿತಿಂಡಿಗಳನ್ನು ಹೆಚ್ಚು ಸೇವಿಸುವವರಿಗೆ ಹಲ್ಲು ಹುಳುಕಾಗುತ್ತದೆ. ನೀವು ಹೆಚ್ಚು ಸಿಹಿತಿಂಡಿಗಳನ್ನು ಸೇವಿಸಿದರೆ, ನಿಮಗೆ ಹೊಟ್ಟೆ ನೋವು ಮತ್ತು ಅಜೀರ್ಣವಾಗಬಹುದು.
7.ಹೆಚ್ಚು ಸಕ್ಕರೆ ತಿನ್ನುವವರಿಗೆ ವಯಸ್ಸಾದ ಛಾಯೆ ಬೇಗ ಬರುತ್ತದೆ. ಮೊಡವೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ ಚರ್ಮಕ್ಕೆ ಅಗತ್ಯವಿರುವ ಕೊಲಾಜೆನ್ ಪ್ರಮಾಣ ಕಡಿಮೆಯಾಗುತ್ತದೆ. ಈ ಕಾರಣದಿಂದಾಗಿ, ಚರ್ಮದ ಮೇಲೆ ಸುಕ್ಕುಗಳು, ಗೀರುಗಳು ಮತ್ತು ಕಲೆಗಳು ತ್ವರಿತವಾಗಿ ಕಾಣಿಸಿಕೊಳ್ಳುತ್ತವೆ ಹೆಚ್ಚು ವಯಸ್ಸು ಆದಂತೆ ಕಾಣುತ್ತಾರೆ .
ಗಮನಿಸಿ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ಮಾಹಿತಿಗಾಗಿ ಮಾತ್ರ ಯಾವುದೇ ಸಣ್ಣ ಆರೋಗ್ಯ ಸಮಸ್ಯೆಗಳಿಗೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.