Saturday, December 21, 2024

Latest Posts

‘ಹೋಲ್ ಸೇಲ್, ರೀಟೇಲ್ ವ್ಯಾಪಾರ ಮಾಡ್ತಿರೋದು ನಾಚಿಕೆಗೇಡು’- ಸಿದ್ದು ಕಿಡಿ

- Advertisement -

ಬೆಂಗಳೂರು: ಆಪರೇಷನ್ ಕಮಲದ ಕುರಿತು ಸಿಎಲ್ ಪಿ ನಾಯಕ ಸಿದ್ದರಾಮಯ್ಯ ಭರ್ಜರಿ ಚರ್ಚೆಗಿಳಿದಿದ್ದಾರೆ. ಅಧಿಕಾರದ ಆಸೆಯಿಂದ ಶಾಸಕರನ್ನು ಕೊಂಡುಕೊಳ್ಳಲು ಹೋಲ್ ಸೇಲ್ ರೀಟೇಲ್ ವ್ಯಾಪಾರ ಮಾಡ್ತಿರೋದು ನಾಚಿಕೆಗೇಡಿನ ಸಂಗತಿ ಅಂತ ಆಕ್ರೋಶ ಹೊರಹಾಕಿದ್ರು.

ತಮ್ಮ ಶಾಸಕರನ್ನು ಸೆಳೆದು ಮುಂಬೈನಲ್ಲಿಟ್ಟಿಕೊಂಡಿರುವ ಬಿಜೆಪಿ ಅಧಿಕಾರದ ಮೇಲೆ ಅತಿಯಾದ ವ್ಯಾಮೋಹ ಹೊಂದಿದೆ ಎಂದ ಸಿದ್ದರಾಮಯ್ಯ, ನೀವು ಇವರನ್ನೆಲ್ಲಾ ನಂಬಿಕೊಂಡು 1 ವರ್ಷವಲ್ಲ, 6 ತಿಂಗಳೂ ಕೂಡ ಸರ್ಕಾರ ಮಾಡಲು ಆಗೋದಿಲ್ಲ ನಿಮಗೆ ಅಂತ ಯಡಿಯೂರಪ್ಪಾಗೆ ಹೇಳಿದ್ರು. ಪಕ್ಷಾಂತರ ರೋಗ ಹೀಗೆ ಹರಡಿದ್ರೆ ಯಾವ ಸರ್ಕಾರಕ್ಕೂ ಉಳಿಗಾಲವಿಲ್ಲ ಎಂದರು. ಒಬ್ಬರೋ ಇಬ್ಬರೋ ಹೋದರೆ ಸರ್ಕಾರಕ್ಕೆ ಅಪಾಯವಾಗೋದಿಲ್ಲ. ಆದರೆ ಈ ರೀತಿ ಹೋಲ್ ಸೇಲ್ ಟ್ರೇಡ್ ಆದರೆ ಅಪಾಯ ಅಂತ ಸಿದ್ದರಾಮಯ್ಯ ಹೇಳಿದ್ರು. ಇನ್ನು ಬಿಜೆಪಿಯವರು 104 ಸೀಟ್ ಗೆದ್ದಿದ್ದಾರೆ ಅವರು ಅಧಿಕಾರಕ್ಕೇರವು 113 ಸಂಖ್ಯಾ ಬಲ ಇರಬೇಕಿತ್ತು. ಹೀಗಾಗಿ ಉಳಿದ 9 ಜನರಿಗಾಗಿ ಅವರು ಹೋಲ್ ಸೇಲ್ ವ್ಯಾಪಾರ ಮಾಡಿದ್ದಾರೆ. ಈ ರೀತಿ ಮಾಡೋದು ತಪ್ಪಲ್ಲವೇ, ಇದು ನಾಚಿಕೆಗೇಡಿನ ಸಂಗತಿಯಲ್ಲವೇ ಅಂತ ಸಿದ್ದು ಇದೇ ವೇಳೆ ಕಿಡಿ ಕಾರಿದ್ರು.

10ನೇ ಪರಿಚ್ಛೇದದಲ್ಲಿ ಎರಡು ವಿಷಗಳ ಬಗ್ಗೆ ಹೇಳಲಾಗಿದೆ, ಇಲ್ಲಿ ಶಾಸಕರ ಅನರ್ಹತೆಗೆ 2 ಕಾರಣಗಳನ್ನು ಉಲ್ಲೇಖಿಸಲಾಗಿದೆ. ಈ ಎರಡೂ ಕಾರಣಗಳು 15 ಮಂದಿ ಅತೃಪ್ತ ಶಾಸಕರಿಗೆ ಅನ್ವಯಿಸುತ್ತದೆ ಅಂತ ಸಿದ್ದರಾಮಯ್ಯ ಅತೃಪ್ತ ಶಾಸಕರ ಅನರ್ಹತೆ ಖಚಿತ ಅನ್ನೋದನ್ನು ಮತ್ತೆ ಸದನದಲ್ಲಿ ಪುನರುಚ್ಚರಿಸಿದರು.

- Advertisement -

Latest Posts

Don't Miss