Monday, December 23, 2024

Latest Posts

ಐಸಿಸಿ ಅಕ್ಟೋಬರ್ ತಿಂಗಳ ಆಟಗಾರ ಪ್ರಶಸ್ತಿ ಗೆದ್ದ ವಿರಾಟ ಕೊಹ್ಲಿ..!

- Advertisement -

ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಐಸಿಸಿ ಅಕ್ಟೋಬರ್ ತಿಂಗಳ ಪ್ರಶಸ್ತಿ ಲಭಿಸಿದ್ದು, ಏಷ್ಯಾಕಪ್ ನಿಂದ ಮತ್ತೆ ಫಾರ್ಮ್ ಗೆ ಇಳಿದಿರುವ ಕೊಹ್ಲಿ ಟಿ20 ಕ್ರಿಕೆಟ್ ನಲ್ಲಿ ಹಲವು ಅರ್ಧಶತಕಗಳನ್ನು ಬಾರಿಸಿ ರನ್ ಗಳ ಮಳೆ ಸುರಿಸಿದ್ದರು. ಈಗ ಐಸಿಸಿ ಅಕ್ಟೋಬರ್ ತಿಂಗಳ ಕ್ರಿಕೆಟಿಗ ಪ್ರಶಸ್ತಿ ಪಟ್ಟಿ ಬಿಡುಗಡೆ ಮಾಡಿದೆ. ಪುರುಷರ ವಿಭಾಗದಲ್ಲಿ ಕೊಹ್ಲಿಗೆ ಪ್ರಶಸ್ತಿ ಬಂದಿದೆ. ಈ ತಿಂಗಳಲ್ಲಿ 205 ರನ್ ಗಳಿಸಿರುವ ವಿರಾಟ್, ಪಾಕ್ ವಿರುದ್ಧದ ಮೊದಲ ಪಂದ್ಯದಲ್ಲಿ 53 ಎಸೆತಗಳಲ್ಲಿ 82 ರನ್ ಗಳ ಇನ್ನಿಂಗ್ಸ್ ಆಡಿದ್ದರು. ಕೊಹ್ಲಿಯ ಈ ಅದ್ಭುತ ಆಟದಿಂದ ಪಾಕಿಸ್ತಾನ ಸೋಲಿಸಿದ್ದರು. ನಂತರ ನೆದರ್ಲ್ಯಾಂಡ್ ವಿರುದ್ಧ 62 ರನ್ ಗಳಿಸಿದ್ದು ಬಾಂಗ್ಲಾ ವಿರುದ್ಧದ ಪಂದ್ಯದಲ್ಲೂ ಅರ್ಧಶತಕ ಬಾರಿಸಿದ್ದರು. ಇದರ ಫಲವಾಗಿ ಕೊಹ್ಲಿಗೆ ಪ್ರಶಸ್ತಿ ಲಭಿಸಿದೆ.

- Advertisement -

Latest Posts

Don't Miss