ಕೋಲಾರ: ಕೋಲಾರದಿಂದ ಸ್ಪರ್ಧೆಗೆ ಸಿದ್ದರಾಮಯ್ಯ ಇಂಗಿತ ವಿಚಾರವಾಗಿ ಕೋಲಾರ ಬಿಜೆಪಿ ಸಂಸದ ಎಸ್ ಮುನಿಸ್ವಾಮಿ ಅವರು ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯ ಅಂತಹ ನಾಯಕರು ಕ್ಷೇತ್ರ ಹುಡುಕಾಟ ನಡೆಸುವುದು ಶೋಚನೀಯ ಸಂಗತಿಯಾಗಿದೆ. ಇದನ್ನು ಜನರು ಗಮನಿಸುತ್ತಿದ್ದಾರೆ. ಕೋಲಾರಕ್ಕೆ ಸಿದ್ದರಾಮಯ್ಯನವರು ಇನ್ನು 50 ಬಾರಿ ಬಂದು ಹೋದರು ಯಾರು ಹೆದರುವುದಿಲ್ಲ.
ಪರೀಕ್ಷೆಯಲ್ಲಿ ಕಾಪಿ ಚೀಟಿ ತಂದಿದ್ದಕ್ಕೆ ವಿದ್ಯಾರ್ಥಿನಿ ನಿಂದಿಸಿದ ಶಿಕ್ಷಕಿ : ಮನನೊಂದ ಬಾಲಕಿ ನೇಣಿಗೆ ಶರಣು
ಕೋಲಾರದ ಕೆಲ ಶಾಸಕರಿಗೆ ಸೋಲಿನ ಭೀತಿಯಿಂದ ಸಿದ್ದರಾಮಯ್ಯ ರನ್ನ ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ. ಟಿಕೆಟ್ ಕೊಡಿಸುವುದಾಗಿ ಹೇಳಿ ಕಾಂಗ್ರೆಸ್ ಸೇರ್ಪಡೆ ಮಾಡಿಸಿ ಕೊತ್ತೂರು ಮಂಜುನಾಥ್ ರಿಗೆ ಮೋಸ ಮಾಡಿದ್ದಾರೆ. ನೆನ್ನೆ ಸಿದ್ದರಾಮಯ್ಯ ಜೊತೆಗಿದ್ದವರು ಭೂಮಿ ಕಬಳಿಕೆ ಹಾಗು ಸರ್ಕಾರಿ ಬೆಟ್ಟ ನುಂಗಿದವರು ಎಂದು ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಹಾಗು ಮಾಲೂರು ಶಾಸಕ ನಂಜೇಗೌಡ ವಿರುದ್ಧ ಸಂಸದ ಮುನಿಸ್ವಾಮಿ ಕೋಲಾರದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಮಹೇಶ್ ಬಾಬು ತಂದೆ ಮತ್ತು ಸೂಪರ್ ಸ್ಟಾರ್ ಕೃಷ್ಣ ಆಸ್ಪತ್ರೆಗೆ ದಾಖಲು..!