Tuesday, November 18, 2025

Latest Posts

ಬಿಹಾರದಲ್ಲಿ ಭೀಕರ ರಸ್ತೆ ಅಪಘಾತ, 7 ಮಕ್ಕಳು ಸೇರಿ 15 ಜನರ ಸಾವು : ಮೃತರ ಕುಟುಂಬಕ್ಕೆ ಮೋದಿ ತಲಾ 2 ಲಕ್ಷ ಪರಿಹಾರ ಘೋಷಣೆ

- Advertisement -

ಬಿಹಾರ: ವೈಶಾಲಿ ಜಿಲ್ಲೆಯ ಮೆಹನಾರ್ ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 15 ಜನರು ಮೃತಪಟ್ಟಿದ್ದಾರೆ. ಘಟನೆಯಲ್ಲಿ 7 ಮಕ್ಕಳೂ ಸೇರಿ 15 ಜನರ ದುರ್ಮರಣವಾಗಿದೆ. ರಸ್ತೆ ಬಳಿಯ ಜನವಸತಿ ಪ್ರದೇಶಕ್ಕೆ ಟ್ರಕ್ ವೇಗವಾಗಿ ಬಂದು ಎಲ್ಲರ ಮೇಲೆ ಹರಿದಿದೆ. ಘಟನೆಯಲ್ಲಿ ಮಕ್ಕಳು ಸೇರಿ 15 ಜನರು ಸಾವನ್ನಪ್ಪಿದ್ದಾರೆ ಮತ್ತು ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಗುಜರಾತ್ ನಲ್ಲಿ ವಿಧಾನಸಭೆ ಚುನಾವಣಾ ಪ್ರಚಾರ ಚುರುಕುಗೊಳಿಸಿದ ಮೋದಿ

ಭೂಯಾನ್ ಬಾಬಾರವರ ಪೂಜೆ ಸಂಬಂಧ ಔತನಕೂಟ ಮುಗಿಸಿ ಎಲ್ಲರು ಹಿಂತಿರುಗುತ್ತಿದ್ದಾಗ ಆಲದ ಮರದ ಕೆಳಗೆ ನಿಂತಿರುವಾಗ ಟ್ರಕ್ ಹರಿದು ಘಟನೆ ಸಂಭವಿಸಿದೆ. ಮೃತರ ಕುಟುಂಬಗಳಿಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂತಾಪ ಸೂಚಿಸಿ, ನಿಗದಿತ ಪ್ರಮಾಣಿತ ವಿಧಾನದ ಪ್ರಕಾರ ಎಕ್ಸ್ ಗ್ರೇಷಿಯಾ ಅನುದಾನ ನೀಡಲು ಸೂಚಿಸಿದ್ದಾರೆ. ಟ್ರಕ್ ಚಾಲಕ ಕುಡಿದ ಅಮಲಿನಲ್ಲಿ ವಾಹನ ಚಲಾಯಿಸುತ್ತಿದ್ದ ಎಂದು ಹೇಳಲಾಗಿದೆ. ಟ್ರಕ್ ಚಾಲಕನಿಗೂ ಸಣ್ಣ ಗಾಯಗಳಾಗಿದ್ದು, ಚಾಲಕನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಭಾರತದ ನೂತನ ಚುನಾವಣಾ ಆಯುಕ್ತರಾಗಿ ಅರುಣ್ ಗೋಯೆಲ್ ಅಧಿಕಾರ ಸ್ವೀಕಾರ

ಘಟನೆಯ ನಂತರ ಆಸ್ಪತ್ರೆಗೆ ಶಾಸಕ ಡಾ. ಮುಖೇಶ್ ರೋಷನ್ ಹಾಜಿಪುರ ಸದರ್ ಆಗಮಿಸಿ ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಮೃತರ ಸಂಬಂಧಿಕರು ಮೃತ ದೇಹಗಳನ್ನು ನೋಡಿ ದುಃಖ ವ್ಯಕ್ತಪಡಿಸುತ್ತಿದ್ದರು. ಅಪಘಾತ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಸಂತಾಪ ವ್ಯಕ್ತ ಪಡಿದ್ದಾರೆ. ಬಿಹಾರದ ವೈಶಾಲಿಯಲ್ಲಿ ನಡೆದ ಅಪಘಾತ ದುಃಖಕರವಾಗಿದೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ. ಮೃತರ ಕುಟುಂಬಗಳಿಗೆ 2 ಲಕ್ಷ ರೂಪಾಯಿ ಮತ್ತ ಗಾಯಾಳಯಗಳಿಗೆ 50 ಸಾವಿರ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.

ವೋಟರ್ ಐಡಿ ಹಗರಣ : ಚಿಲುಮೆ ಸಂಸ್ಥೆ ಮುಖ್ಯಸ್ಥ ರವಿಕುಮಾರ್ ಬಂಧನ

ಜಮೀನು ವಿಷಯದಲ್ಲಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ

- Advertisement -

Latest Posts

Don't Miss