ಇಂಡೋನೇಷ್ಯಾದ ಮುಖ್ಯ ದ್ವೀಪ ಜಾವಾದಲ್ಲಿ ಇಂದು 5.6 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸುಮಾರು 44 ಜನ ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಕಟ್ಟಡಗಳಿಗೆ ಹಾನಿಯಾಗಿದ್ದು, ಭೂಕುಸಿವಾಗಿದೆ.
ಶಾರುಖ್ ಖಾನ್ ಮನ್ನತ್ ಬಂಗಲೆಗೆ ವಜ್ರಖಚಿತ ನಾಮಫಲಕ : ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೃರಲ್
ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ಪ್ರಕಾರ, ಪಶ್ಚಿಮ ಜಾವಾದ ಸಿಯಾಂಜೂರ್ ಪ್ರದೇಶದಲ್ಲಿ ಭೂಕಂಪವು ಕೇಂದ್ರೀಕೃತವಾಗಿತ್ತು. ಮತ್ತು ಜಕಾರ್ತಾದ ರಾಜಧಾನಿಯವರೆಗೂ ಭಾಸವಾಗಿದೆ. ಭಯಭೀತರಾದ ನಿವಾಸಿಗಳು ಬೀದಿಗೆ ಓಡಿದ್ದಾರೆ. ಸುಮಾರು 44 ಜನರು ಸಾವನ್ನಿಪ್ಪಿದ್ದಾರೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಹಚ್ಚಿನವರು ಕಟ್ಟಡಗಳಲ್ಲಿ ಸಿಕ್ಕಿಹಾಕಿಕೊಂಡಿದ್ದರಿಂದ ಕೈ ಕಾಲುಗಳನ್ನು ಮುರಿದುಕೊಂಡಿದ್ದಾರೆ ಎಂದು ಸಿಯಾಂಜೂರ್ ಆಡಳಿತದ ಮುಖ್ಯಸ್ಥ ಹರ್ಮನ್ ಸುಹೆರ್ಮನ್ ಹೇಳಿದರು.

