Thursday, December 12, 2024

Latest Posts

‘ಜೂ ರೈಡ್’ ಇನ್ಸ್ಟಾಲ್ ಮಾಡಿದರೆ ಮನೆ ಬಾಗಿಲಿಗೆ ಬರಲಿದೆ ಆಟೋ

- Advertisement -

ಹಾಸನ: ನಗರದ ಬಾಡಿಗೆ ಆಟೋ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ  ಮನೆ ಬಾಗಿಲಿಗೆ ಬಾಡಿಗೆ ಆಟೋ ವ್ಯವಸ್ಥೆ ಕಲ್ಪಿಸಲು (JUU RIDE)ಜೂ ರೈಡ್ ಆಪ್ ಪರಿಚಯಿಸಲಾಗಿದೆ ಎಂದು ಜೂ ರೈಡ್ ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ(ಸಿಇಒ) ಶಂಕರ್ ಹೇಳಿದರು. ಹಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುರ್ತು ಹಾಗೂ ಅಗತ್ಯ ಸಂದರ್ಭಗಳಲ್ಲಿ ವೃದ್ಧರು ,ಮಕ್ಕಳು , ಮಹಿಳೆಯರು  ಪ್ರಯಾಣಿಸಲು ಆಟೋ ಸಿಗದ ಪರಿಸ್ಥಿತಿ ಎದುರಿಸಿದ್ದಾರೆ. ರಾತ್ರಿ ವೇಳೆ ಬಾಡಿಗೆ ವಾಹನಗಳು ಹಲವರ ಸಂಕಷ್ಟ ಅರಿತು ಈ ಹೊಸ ಪ್ರಯೋಗಕ್ಕೆ ಮುಂದಾಗಿದ್ದು ದಿನದ 24 ಗಂಟೆಯೂ ಆಟೋ ವ್ಯವಸ್ಥೆಗೆ ಆಪ್ ತುಂಬಾ ಸಹಕಾರಿಯಾಗಲಿದೆ ಎಂದರು.

ಐಹೊಳೆಯ ಚರಿತ್ರೆ ಸಾರುವ ‘ಐಹೊಳೆ’ ಚಿತ್ರದ ಹಾಡುಗಳು

ಗ್ರಾಹಕರು ಗೂಗಲ್ ಆಪ್ ಮೂಲಕ ನಮ್ಮ ಆಪ್ ಡೌನ್ಲೋಡ್ ಮಾಡಿಕೊಂಡು ಕುಳಿತಲ್ಲಿಯೇ ಆಪ್ ನಲ್ಲಿ ಅಗತ್ಯ ಮಾಹಿತಿ ದಾಖಲಿಸಿ ತಮಗೆ ಕೈಗೆಟುಕುವ ದರದಲ್ಲಿ ಆಟೋ ಬುಕ್ ಮಾಡುವ ಮೂಲಕ ತಾವು ಇದ್ದಲ್ಲಿಗೆ ವಾಹನವನ್ನು ಕರೆಸಿಕೊಳ್ಳುವ ಜೊತೆಗೆ ಸುರಕ್ಷಿತ ಪ್ರಯಾಣ ಮಾಡಲು ಅನುಕೂಲವಾಗಲಿದೆ. ಆಟೋ ಚಾಲಕರ ಮಾಹಿತಿ ಹಾಗೂ ಇತರೆ ದಾಖಲೆ ಪರಿಶೀಲಿಸಿ ನಂತರವೇ ನಮ್ಮ ಸಂಸ್ಥೆ ಯೊಂದಿಗೆ ಒಡಂ ಬಡಿಕೆ ಮಾಡಿಕೊಳ್ಳಲಾಗಿದೆ. ಆಟೋ ಚಾಲಕರಿಗೆ  ಈ ನಿಟ್ಟಿನಲ್ಲಿ ಮಾಹಿತಿ ನೀಡಲು ಎರಡು ಮೂರು ದಿನದಲ್ಲಿ ಸಭೆ  ಕರೆಯಲಾಗಿದ್ದು ಅಧಿಕೃತ ದಾಖಲೆಗಳನ್ನು ಒಳಗೊಂಡಿರುವ ಆಟೋಗಳನ್ನು ಮಾತ್ರ ನೋಂದಣಿ ಮಾಡಲಾಗುವುದು ಎಂದರು.

ನ.26 ರಂದು ರೋಟರಿ ಪ್ರತಿಷ್ಠಾನ-ಪೋಲಿಯೋ ಪ್ಲಸ್ ಜಿಲ್ಲಾ ಮಟ್ಟದ ವಿಚಾರ ಸಂಕೀರಣ

- Advertisement -

Latest Posts

Don't Miss