ಬೆಂಗಳೂರು: ಪಂಜಾಬ್ ಮೂಲದ ಮಹಿಳೆಯನ್ನು ಕನ್ನಡ ಮಾತನಾಡಲು ಬರವುದಿಲ್ಲವೆಂದು ಆರೋಪಿಸಿ ಮಹಿಳೆಯರ ಗುಂಪು ಸೇರಿ ಥಳಿಸಿದ್ದಾರೆ. ಸಲೂನ್ ಮತ್ತು ಸ್ಪಾ ಹೊಂದಿರುವ ಪಂಜಾಬ್ ಮಹಿಳೆ ಲೂಧಿಯಾನದ ನೀಲಂಜಿತ್ ಕೌರ್(46) ಹಲ್ಲೆಗೊಳಗಾದ ಮಹಿಳೆ. ದೊಡ್ಡಬೊಮ್ಮಸಂದ್ರದ ಸರ್ಕಾರಿ ಶಾಲೆಯ ಹತ್ತಿರ ಘಟನೆ ನಡೆದಿದೆ. ಸ್ಕೂಟಿ ಸುತ್ತುವರೆದು ಮಹಿಳೆಯರ ಗುಂಪೊಂದು ಪಂಜಾಬ್ ಮೂಲದ ಮಹಿಳೆಯನ್ನು ಥಳಿಸಿದ್ದಾರೆ. ರಸ್ತೆಯಲ್ಲಿ ಅಡ್ಡ ಬಂದ ಮಗುವನ್ನು ಪಾಲಕರಿಗೆ ಸರಿಯಾಗಿ ನೋಡಿಕೊಳ್ಳಿ ಎಂದು ಮನವಿ ಮಾಡಿದ್ದು, ಈ ಸಮಯದಲ್ಲಿ ಆಕೆಗೆ ಕನ್ನಡ ಬರುವುದಿಲ್ಲವೆಂದು ಮಹಿಳೆಯರು ಸೇರಿ ನಿಂದಿಸಿದ್ದಾರೆ. ಕರ್ನಾಟಕದಿಂದ ಹೋರ ಹೋಗುವಂತೆ ಕೂಗಾಡಿದ್ದಾರೆ. ಪ್ಲಾಸ್ಟಿಕ್ ಪೈಪ್ ನಿಂದ ಥಳಿಸಿ ಕೂದಲನ್ನು ಎಳೆದಾಡಿದ್ದಾರೆ. ಒಂಟಿಯಾಗಿದ್ದ ಮಹಿಳೆ ಅಸಹಾಯಕಳಾಗಿ ಹಲ್ಲೆ ಮಾಡುತ್ತಿರುವವರನ್ನು ವಿಡಿಯೋ ಮಾಡಿಕೊಂಡಿದ್ದಾಳೆ
ಕೋವಿಡ್ ಲಸಿಕೆಗೆ ಸಂಬಂಧಿಸಿದ ಸಾವುಗಳಿಗೆ ಸರ್ಕಾರ ಜವಾಬ್ದಾರಿಯಲ್ಲ: ಸುಪ್ರೀಂ ಕೊರ್ಟ್ ಗೆ ತಿಳಿಸಿದ ಕೇಂದ್ರ ಸರ್ಕಾರ
ಕಡಿಮೆ ಅಂಕ ಬಂದಿದೆ ಎಂದು ಪ್ರೀನ್ಸಿಪಾಲ್ ಫೈನ್ ಹಾಕುವುದಾಗಿ ಬೈದಿದ್ದಕ್ಕೆ ಪಿಯು ವಿದ್ಯಾರ್ಥಿನಿ ನೇಣಿಗೆ ಶರಣು