Monday, December 23, 2024

Latest Posts

ಪ್ರೇಮಿ ಜೊತೆಗಿದ್ದ ವಿಚ್ಚೇದಿತ ಮಹಿಳೆ ಅನುಮಾನಾಸ್ಪದ ಸಾವು

- Advertisement -

ಹಾಸನ: ಪ್ರೇಮಿಯ ಜೊತೆಗಿದ್ದ ವಿಚ್ಚೇದಿತ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಅರಕಲಗೂಡು ತಾಲ್ಲೂಕಿನ ಕಾವ್ಯ (22) ಮೃತಪಟ್ಟ ಮಹಿಳೆ. ಹಾಸನ ಜಿಲ್ಲೆ, ಹೊಳೆನರಸೀಪುರ ತಾಲೂಕಿನ, ಪಾರಸನಹಳ್ಳಿಯಲ್ಲಿ ಘಟನೆ ನಡೆದಿದೆ. ಪ್ರೇಯಸಿಯನ್ನು ಕೊಂದು ಶವವನ್ನು ಕಬ್ಬಿನ ಗದ್ದೆಯಲ್ಲಿ ಹೂತು ಹಾಕಿರುವುದಾಗಿ ಆರೋಪಿಸಲಾಗಿದೆ. ಮಗಳನ್ನು ಕೊಲೆ ಮಾಡಿ ಹೂತು ಹಾಕಿದ್ದಾನೆಂದು ಪೋಷಕರ ಆರೋಪಿಸುತ್ತಿದ್ದಾರೆ.

ಸ್ಟ್ರಾಬೇರಿ ಮತ್ತು ಕಲ್ಲಂಗಡಿ ಹಣ್ಣಿನ ಸ್ಮೂದಿ..

ಕಾವ್ಯಳನ್ನು ಮದುವೆ ಆಗುವುದಾಗಿ ಜೊತೆಗಿಟ್ಟುಕೊಂಡಿದ್ದ ಪ್ರಿಯಕರ ಅವಿನಾಶ್ ವಿರುದ್ಧ  ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಹಸೀಲ್ದಾರ್ ಕೃಷ್ಣಮೂರ್ತಿ ಸಮ್ಮುಖದಲ್ಲಿ ಮೃತ ಮಹಿಳೆ ಶವವನ್ನು ಹೊರ ತೆಗೆದು ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಬಿಬಿಎಂ ಓದುವಾಗ ಕಾವ್ಯ ಪ್ರೀತಿಸಿ ಮಧುವೆಯಾಗಿದ್ದರು. ನಂತರ ಸಂಸಾರದಲ್ಲಿ ಹೊಂದಾಣಿಕೆ ಆಗದ ಕಾರಣ ಗಂಡನಿಂದ ವಿಚ್ಚೇಧನ ಪಡೆದಿದ್ದರು. ನಂತರ ಪಾರಸನಹಳ್ಳಿಯ ಅವಿನಾಶ್‌ನನ್ನು ಪ್ರೀತಿಸಿ ಆತನ ಮನೆಯಲ್ಲೇ ವಾಸವಾಗಿದ್ದರು. ಕಳೆದ ಹದಿನೈದು ದಿನಗಳಿಂದ  ಕಾವ್ಯ ಕಾಣೆಯಾಗಿದ್ದರು. ಅವಿನಾಶ್‌ನನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಸತ್ಯ ಬಯಲಾಗಿದ್ದು, ಪ್ರೇಯಸಿ ಶವವನ್ನು ತಮ್ಮ ಕಬ್ಬಿನಗದ್ದೆಯಲ್ಲಿ ಹೂತು ಹಾಕಿರುವದಾಗಿ ಅವಿನಾಶ್ ಒಪ್ಪಿಕೊಂಡಿದ್ದಾನೆ.

ಜನವರಿ 3 ರಂದು ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ: ಡಾ: ಹೆಚ್.ಎನ್‌.ಗೋಪಾಲಕೃಷ್ಣ

ದಾಬಾ ಸ್ಟೈಲ್ ಛೋಲೆ ರೆಸಿಪಿ..

- Advertisement -

Latest Posts

Don't Miss