- Advertisement -
ಡಯಟ್ ಮಾಡುವವರು ಹೆಚ್ಚಾಗಿ ಸಲಾಡ್, ಸ್ಮೂದಿ, ಜ್ಯೂಸ್‌ಗಳನ್ನು ಸೇವಿಸುತ್ತಾರೆ. ಅಂಥವರಿಗಾಗಿ ನಾವಿಂದು ಸ್ಟ್ರಾಬೇರಿ ಮತ್ತು ಕಲ್ಲಂಗಡಿ ಹಣ್ಣಿನ ಸ್ಮೂದಿ ರೆಸಿಪಿ ತಂದಿದ್ದೇವೆ. ಇದನ್ನು ಡಯಟ್ ಮಾಡುವವರಷ್ಟೇ ಅಲ್ಲ, ಯಾರೂ ಬೇಕಾದ್ರೂ ಸೇವಿಸಬಹುದು. ಹಾಗಾದ್ರೆ, ಸ್ಟ್ರಾಬೇರಿ ಮತ್ತು ಕಲ್ಲಂಗಡಿ ಹಣ್ಣಿನ ಸ್ಮೂದಿ ಮಾಡೋಕ್ಕೆ ಏನೇನು ಬೇಕು ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ಒಂದು ಕಪ್ ಕಲ್ಲಂಗಡಿ ಹಣ್ಣು, ಒಂದು ಕಪ್ ಸ್ಟ್ರಾಬೇರಿ, ಎರಡು ಸ್ಪೂನ್ ಯೋಗರ್ಟ್, ಒಂದು ಸ್ಪೂನ್ ಜೇನುತುಪ್ಪ.
ಮಾಡುವ ವಿಧಾನ: ಸ್ಟ್ರಾಬೇರಿ ಮತ್ತು ಕಲ್ಲಂಗಡಿ ಹಣ್ಣು, ಯೋಗರ್ಟ್ ಮತ್ತು ಜೇನುತುಪ್ಪ ಹಾಕಿ, ಗ್ರೈಂಡ್ ಮಾಡಿದ್ರೆ, ಕಲ್ಲಂಗಡಿ ಮತ್ತು ಸ್ಟ್ರಾಬೇರಿ ,ಸ್ಮೂದಿ ರೆಡಿ..
- Advertisement -