ಮಂಡ್ಯ: ಇದೇ ತಿಂಗಳು 22ರಂದು ಪಂಚರತ್ನ ಯಾತ್ರೆಯು ಮಂಡ್ಯ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ಯಾತ್ರೆಯನ್ನು ಯಶಸ್ವಿಗೊಳಿಸಬೇಕಿರುವುದು ನಮ್ಮೆಲ್ಲರ ಜವಾಬ್ದಾರಿ, ಮುಂದಿನ 2023ಕ್ಕೆ ಕುಮಾರ ಸ್ವಾಮಿಯವರನ್ನು ಮುಖ್ಯ ಮಂತ್ರಿಯಾಗಿಸುವುದು ನಮ್ಮ ಗುರಿ ಎಂದು ಮಂಡ್ಯ ಶಾಸಕರಾದ ಎಂ.ಶ್ರೀನಿವಾಸ್ ತಿಳಿಸಿದರು. ಇದೇ ಸಮಯದಲ್ಲಿ ಮಾತನಾಡಿದ ಜೆ.ಡಿಎಸ್ ಜಿಲ್ಲಾಧ್ಯಕ್ಷಾರದ ಡಿ.ರಮೇಶ್ ರವರು ಪಂಚರತ್ನ ಎಂಬುದು ಒಂದು ಅದ್ಭುತವಾದ ಕಾರ್ಯವಾಗಿದೆ.
ಇಂದೂ ಕೂಡ ಬೆಂಗಳೂರಿನಲ್ಲಿ ಮಳೆ, ನಾಳೆಯಿಂದ ಕಡಿಮೆಯಾಗಲಿದೆ ವರುಣನ ಅಬ್ಬರ : ಹವಾಮಾನ ಇಲಾಖೆ
ಉಚಿತ ಉತ್ತಮ ಶಿಕ್ಷಣ, ಹೋಬಳ್ಳಿಗೆ ಒಂದು ಸುಸಜ್ಜಿತ ಆಸ್ಪತ್ರೆ, ರೈತರ ಚೈತನ್ಯ, ಯುವ ಹಾಗೂ ಮಹಿಳಾ ಸಬಲಿಕರಣ ಮತ್ತು ಪ್ರತಿಯೊಂಬರಿಗೂ ಆಸರೆ ಮನೆ ಇಂತಹ ಯೋಜನೆಯನ್ನು ಯಾರು ಸಹ ಜಾರಿಗೆ ತರಲು ಸಾದ್ಯವಿಲ್ಲ ಕುಮಾರಸ್ವಾಮಿ ಒಬ್ಬರಿಂದ ಮಾತ್ರ ಇದು ಸಾಧ್ಯ ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಯೋಗೆಶ್,ವಿಜಯಾನಂದ ತಾಲ್ಲೂಕು ಅಧ್ಯಕ್ಷರಾದ ತಿಮ್ಮನಗೌಡ, ಇತರರು ಹಾಜರಿದ್ದರು.