Friday, February 7, 2025

Latest Posts

ಕೊಂಕಣಿ ಶೈಲಿಯ ಸುರ್ನಳಿ ರೆಸಿಪಿ..

- Advertisement -

ಪ್ರತಿದಿನ ಒಂದೇ ರೀತಿಯ ಬ್ರೇಕ್‌ಫಾಸ್ಟ್ ತಿಂದು ಬೋರ್ ಬರಬಹುದು. ಹಾಗಾಗಿ ನಾವಿಂದು ಕೊಂಕಣಿ ಶೈಲಿಯ ಸುರ್ನಳಿ, ಅಂದ್ರೆ ಸ್ವೀಟ್ ದೋಸೆ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಹಾಗಾದ್ರೆ ಅದನ್ನ ಮಾಡೋದು ಹೇಗೆ..? ಇದಕ್ಕೆ ಬೇಕಾಗುವ ಸಾಮಗ್ರಿಗಳೇನು ಅಂತಾ ತಿಳಿಯೋಣ ಬನ್ನಿ..

ಬೇಕಾಗುವ ಸಾಮಗ್ರಿ: ಎರಡು ಕಪ್ ಅಕ್ಕಿ, ಒಂದು ಕಪ್ ಅವಲಕ್ಕಿ, ಅರ್ಧ ಸ್ಪೂನ್ ಮೆಂತ್ಯೆ, ಅರ್ಧ ಕಪ್ ಮೊಸರು, ಅರ್ಧ ಕಪ್ ಕೊಬ್ಬರಿ ತುರಿ, ಅರ್ಧ ಕಪ್ ಬೆಲ್ಲ, ಅಗತ್ಯಕ್ಕೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ಅಕ್ಕಿ, ಅವಲಕ್ಕಿ ಮತ್ತು ಮೆಂತ್ಯೆಯನ್ನು ಚೆನ್ನಾಗಿ ತೊಳೆದು, 4ರಿಂದ 5 ಗಂಟೆ ನೆನೆಸಿಡಬೇಕು. ನಂತರ ಇದನ್ನು ಮಿಕ್ಸಿ ಜಾರ್‌ಗೆ ಹಾಕಿ, ಮೊಸರು ಮತ್ತು ಕೊಬ್ಬರಿ ತುರಿ, ಉಪ್ಪು ಹಾಕಿ, ದೋಸೆ ಹಿಟ್ಟು ರೆಡಿ ಮಾಡಿ.  ಇದನ್ನು ಒಂದು ರಾತ್ರಿ ಹಾಗೆ ಇರಿಸಿ, ಹುಳಿ ಬರಿಸಬೇಕು. ನಂತರ ದೋಸೆ ಮಾಡುವ ಸಮಯದಲ್ಲಿ ಬೆಲ್ಲ ಹಾಕಿ ಮಿಕ್ಸ್ ಮಾಡಿ, ತುಪ್ಪ ಬಳಸಿ ದೋಸೆ ಮಾಡಿ. ಈ ಸುರ್‌ನಳಿಯನ್ನು ಕೊಬ್ಬರಿ ಚಟ್ನಿಯೊಂದಿಗೆ ಸರ್ವ್ ಮಾಡಿ.

ಈ ಜ್ಯೂಸ್ ಕುಡಿದ್ರೆ, ನಿಮ್ಮ ತ್ವಚೆ ಹೊಳಪಿನಿಂದ ಕೂಡಿರುತ್ತದೆ..

ಪ್ರತಿದಿನ 2 ಎಸಳು ಬೆಳ್ಳುಳ್ಳಿ ಸೇವನೆಯಿಂದ ನಿಮಗಾಗಲಿದೆ ಭರಪೂರ ಲಾಭ..

- Advertisement -

Latest Posts

Don't Miss