Wednesday, October 29, 2025

Latest Posts

ಶಿಷ್ಟಾಚಾರ ಉಲ್ಲಂಘನೆ ಆರೋಪ, ಪಿಡಿಓ ವಿರುದ್ಧ ಪ್ರತಿಭಟನೆ

- Advertisement -

ಹಾಸನ: ಚನ್ನರಾಯಪಟ್ಟಣ ತಾಲೂಕು ನೊರನಕ್ಕಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ  ಹೇಮಾಕ್ಷಿ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ನಾಡನಹಳ್ಳಿ ಗ್ರಾಮದಲ್ಲಿ ಎನ್.ಆರ್.ಐ.ಜಿ ಅಡಿಯಲ್ಲಿ ನಿರ್ಮಿಸಲಾದ ಕಟ್ಟಡದ ಉದ್ಘಾಟನೆಯಲ್ಲಿ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆಂದು ಆರೋಪಿಸಿ ಪ್ರತಿಭಟನೆ ಮಾಡಲಾಗುತ್ತಿದೆ. ಬೆಳಗ್ಗೆಯಿಂದ ತಾಲೂಕು ಪಂಚಾಯತಿ ಸರ್ಕಾರಿ ನಾಮ ನಿರ್ದೇಶಕ ವಿದ್ಯಾ ಪ್ರಸಾದ್ ನೇತೃತ್ವದಲ್ಲಿ ಧರಣಿ ಮಾಡಲಾಗುತ್ತಿದೆ. ಸರ್ಕಾರದ ನಿಯಮಗಳನ್ನು ಕಾಲಿಗೆ ತೋರಿ ಶಿಷ್ಟಾಚಾರ ಉಲ್ಲಂಘಿಸಿದ್ದಾರೆಂದು ಪಿಡಿಓ ಹೇಮಾಕ್ಷಿ ಅವರ ಅಮಾನತು ಮಾಡುವಂತೆ ಆಗ್ರಹಿಸುತ್ತಿದ್ದಾರೆ.

ಇಂದು ಕುಮಾರಸ್ವಾಮಿ 64ನೇ ವರ್ಷದ ಹುಟ್ಟುಹಬ್ಬ : ರಾಮನಗರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ

ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ತಾಲೂಕು ಪಂಚಾಯಿತಿ ಸರ್ಕಾರಿ ನಾಮ ನಿರ್ದೇಶಕ ವಿದ್ಯಾ ಪ್ರಸಾದ್ ಅವರನ್ನು ಆಹ್ವಾನಿಸಿಲ್ಲ ಎಂಬುದೇ ಮುಖ್ಯ ಆರೋಪವಾಗಿದ್ದು, ಪಿಡಿಒ ಹೇಮಾಕ್ಷಿಯವರನ್ನು ಪ್ರಶ್ನಿಸಿದ್ದಕ್ಕೆ ಉಡಾಫೆ ಉತ್ತರ ನೀಡಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ಎನ್‌ಆರ್‌ಐಜಿ  ಯೋಜನೆಯನ್ನು ಗುತ್ತಿಗೆ ನೀಡಿರುವುದು ಕಾನೂನು ಬಾಹಿರವಾಗಿದೆ. ಇವೆಲ್ಲ ಕಾರಣಗಳಿಂದ ಪಿಡಿಓ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಆನಂದ್, ರೈತ ಮೋರ್ಚಾ ಅಧ್ಯಕ್ಷ ಮಂಜು, ಪುರಸಭೆ ನಾಮ ನಿರ್ದೇಶನ ಸದಸ್ಯ ಧರಣೀಶ್ ಮತ್ತು ಜಗದೀಶ್ ಹಾಗೂ ನಾಡನಹಳ್ಳಿ ಗ್ರಾಮಸ್ಥರು ಪ್ರತಿಭಟನೆಯಲ್ಲಿ ತೊಡಗಿದ್ದರು.

ಕೊಬ್ಬರಿ ಬೆಲೆ ಕುಸಿತ ಹಿನ್ನೆಲೆ, ಇಂದು ಅರಸೀಕೆರೆ ಬಂದ್

ಚೀನಾ ಘರ್ಷಣೆ ನಂತರ ಅಗ್ನಿ ವಿ ಪ್ರಯೋಗ ನಡೆಸಿದ ಭಾರತ

 

- Advertisement -

Latest Posts

Don't Miss