ಸಿದ್ದರಾಮಯ್ಯ ವಿರುದ್ಧ ವರ್ತೂರು ಪ್ರಕಾಶ್ ವಾಗ್ದಾಳಿ

ಕೋಲಾರ: ಸಿದ್ದರಾಮಯ್ಯ ಆವರನ್ನು ಕೋಲಾರದಲ್ಲಿ ಗೆಲ್ಲಿಸುವ ಶಕ್ತಿ ರಮೇಶ್ ಕುಮಾರ್ ರವರಿಗೆ ಇದ್ದರೆ, ಸಿದ್ದರಾಮಯ್ಯ ಕೋಲಾರಕ್ಕೆ ಬಂದಾಗ ಸ್ಥಳೀಯರನ್ನು ಯಾವುದೇ ದುಡ್ಡು ಕೊಡದೆ ಐದು ಸಾವಿರ ಜನರನ್ನು ಸೇರಿಸಲಿ ಎಂದು ಕೋಲಾರದಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್ ಸವಾಲು ಎಸೆದಿದ್ದಾರೆ, ಇತ್ತೀಚಿಗೆ ಸಿದ್ದರಾಮಯ್ಯ ಕೋಲಾರದಲ್ಲಿ ಚುಣಾವಣೆಗೆ ನಿಂತರೆ ವರ್ತೂರು ಪ್ರಕಾಶ್ ಅಡ್ರೆಸ್ ಇಲ್ಲಿದೆ ಹೋಗ್ತಾರೆ ಎಂಬ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾತಿಗೆ ಕೋಲಾರ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವರ್ತೂರು ಪ್ರಕಾಶ್, ರಮೇಶ್ ಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕ ವಿಧಾನಸಭೆ ಅತಂತ್ರ..!? ಕರ್ನಾಟಕ ಟಿವಿ ಡಿಸೆಂಬರ್​ ಸರ್ವೇ ಟ್ರೆಂಡ್

ಜನವರಿ 9 ರಂದು ಕೋಲಾರ ಕ್ಷೇತ್ರಕ್ಕೆ ಸಿದ್ದರಾಮಯ್ಯ ಅವರನ್ನು ಎರಡನೇ ಬಾರಿಗೆ ಘಟಬಂಧನ್ ನಾಯಕರು ಕರೆತರುತ್ತಿದ್ದಾರೆ. ಅದಕ್ಕೂ ಮುಂಚೆ ಅಲ್ಪಸಂಖ್ಯಾತರನ್ನು ಹೊರತು ಪಡಿಸಿ 5 ಸಾವಿರ ಕಾರ್ಯಕರ್ತರನ್ನು ಸೇರಿಸಿ ಘಟಬಂಧನ್ ನಾಯಕರು ಕೋಲಾರದಲ್ಲಿ ಒಂದು ಸಮಾವೇಶ ಮಾಡಿ ತೋರಿಸಲಿ ಎಂದು ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರಿಗೆ ಆರ್.ವರ್ತೂರು ಪ್ರಕಾಶ್ ಸವಾಲು ಹಾಕಿದರು. ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವರ್ತೂರು ಪ್ರಕಾಶ್ ಅವರು, ಸಿದ್ದರಾಮಯ್ಯ ಅವರನ್ನು ಕೋಲಾರಕ್ಕೆ ಕರೆತರಲು ಸುಮಾರು 6 ತಿಂಗಳಿಂದ ಘಟಬಂಧನ್ ನಾಯಕರು ಪ್ರಯತ್ನ ಪಟ್ಟಿದ್ದಾರೆ. ಇದೀಗ ಸಿದ್ದರಾಮಯ್ಯರನ್ನು ಕೋಲಾರಕ್ಕೆ ಕರೆತರುವ ಮೂಲಕ ನನ್ನ ಗೆಲುವಿಗೆ ರಮೇಶ್ ಕುಮಾರ್ ಅವರೇ ಮೊದಲನೇ ಮೆಟ್ಟಿಲಾಗಿದ್ದಾರೆ. ಕಾಂಗ್ರೆಸ್ ತೊರೆದ 17 ಜನ ಸಚಿವರು ರಮೇಶ್ ಕುಮಾರ್ ಮತ್ತು ಸಿದ್ದರಾಮಯ್ಯ ಅವರನ್ನು ಅಡ್ರೆಸ್ ಇಲ್ಲದೆ ಮಾಡಲು ಪ್ಲಾನ್ ಮಾಡಿದ್ದಾರೆ. 2018ರಲ್ಲಿ ನಾನೂ ಪಕ್ಷವನ್ನು ಕಟ್ಟಿದ್ದೆ. ಬೇರೆಯವರನ್ನು ಸೋಲಿಸಲು ಹೋಗಿ ನಾನೇ ಸೋತುಹೋದೆ. ಈಗ ರಮೇಶ್ ಕುಮಾರ್ ಸಹ ಅದೇ ಕೆಲಸ ಮಾಡುತ್ತಿದ್ದಾರೆ. ಆದರೆ ಕಳೆದ ಬಾರಿ ಅವರು ನನ್ನನ್ನು ಸೋಲಿಸಲಿಲ್ಲ. ನನ್ನ ಕ್ಷೇತ್ರದಲ್ಲಿ ಸೋಲಲು ನಾನೇ ಕಾರಣ ಎಂದರು.

ಕೊರಿಯರ್ ಶಾಪ್‌ನಲ್ಲಿ ಮಿಕ್ಸಿ ಸ್ಪೋಟ ಪ್ರಕರಣ : ಎಫ್‌ಎಸ್‌ಎಲ್ ತಂಡ ಪರಿಶೀಲನೆ

ರಮೇಶ್ ಕುಮಾರ್ ಅವರು ಕೋಲಾರ ಕ್ಷೇತ್ರಕ್ಕೆ ಸಿದ್ದರಾಮಯ್ಯರನ್ನು ಕರೆದು ಬಲಿ ಕೊಡುವ ಮುಂಚೆ ಐದು ಸಾವಿರ ಜನರನ್ನು ಸೇರಿಸಿ ಸಭೆ ಮಾಡಲಿ. ನಾನು ಸಭೆಗೆ ಬಂದು ಅಲ್ಲೇ ಪಕ್ಕದಲ್ಲಿ ಇರುತ್ತೇನೆ. ಅಲ್ಲದೆ ಸಿದ್ದರಾಮಯ್ಯಗೆ ಕೋಲಾರಕ್ಕೆ ಬರಲು ಇಷ್ಟ ಇಲ್ಲದಿದ್ದರೂ ಅವರನ್ನು ಕರೆತಂದು ಕುರುಬ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಇನ್ನು ಕೋಲಾರ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ 25 ಸಾವಿರ ಮತಗಳಿವೆ. ಸಿದ್ದರಾಮಯ್ಯ ಬಂದ್ರೆ ಅಲ್ಪಸಂಖ್ಯಾತರ ಮತ ಕಾಂಗ್ರೆಸ್ ಗೆ ಬರುತ್ತೆ. ಆದ್ರೆ ಹಿಂದೂ ಸಮಾಜದವರದ್ದು 1 ಲಕ್ಷ 80 ಸಾವಿರ ಮತದಾರರಿದ್ದಾರೆ. ಜನವರಿ 9 ರಂದು ಕೋಲಾರಕ್ಕೆ ಸಿದ್ದರಾಮಯ್ಯ ಬಂದ್ರೆ ಅಂದು ನಮ್ಮದೂ ಒಂದು ಕಾರ್ಯಕ್ರಮ ಇರುತ್ತೆ. ಅವರು ನೂರು ಜನರನ್ನು ಸೇರಿಸಿದರೆ ನಾವು ಐನೂರು ಜನರನ್ನು ಸೇರಿಸುತ್ತೇವೆ. ಧಮ್ಮು ತಾಕತ್ತು ಇದ್ರೆ ಚರ್ಚ್ ಗಳಲ್ಲಿ ಅಲ್ಲ, ಮೈದಾನದಲ್ಲಿ ಕಾರ್ಯಕ್ರಮ ಮಾಡಿ ತೋರಿಸಲಿ. ಆದರೆ ಬೇರೆ ಕಡೆಯಿಂದ ಜನರನ್ನು ಕರೆದುಕೊಂಡು ಶೋ ಕೊಡಬಾರದು ಎಂದು ಹೇಳಿದರು.

ಇಂದಿನಿಂದ ಡಿ. 29ರವರೆಗೆ ಕರ್ನಾಟಕದಲ್ಲಿ ಹಲವೆಡೆ ಮಳೆ..!

ಸಿದ್ದರಾಮಯ್ಯ ಬಂದ್ರೆ ಫೇಸ್ ಮಾಡಲು ನಾನು ರೆಡಿ ಇದ್ದೇನೆ. ಆದರೆ ಅಂತ ದೊಡ್ಡ ವ್ಯಕ್ತಿಯನ್ನು ಕರೆದು ಬಾವಿಗೆ ತಳ್ಳುತ್ತಿದ್ದಾರೆ ಅಂತ ನೋವಾಗುತ್ತಿದೆ. ಒಂದು ವೇಳೆ ಸಿದ್ದರಾಮಯ್ಯ ಬಂದರೂ 50 ಸಾವಿರ ಮತಗಳ ಅಂತರದಲ್ಲಿ ನಾನು ಗೆಲ್ಲುತ್ತೇನೆ. ಜನವರಿ 15ರೊಳಗೆ ಕೋಲಾರದ ಹಳ್ಳಕೊಳ್ಳಗಳನ್ನು ಮುಚ್ಚಿಸಬೇಕು. ಇಲ್ಲದಿದ್ದರೆ ನಮ್ಮ ಜನಪ್ರತಿನಿಧಿಗಳು ಅಸಮರ್ಥರು ಎಂದು ಅರ್ಥ. ಜನವರಿ 15 ರ ನಂತರ ಸಿಎಂ ರವರ ಕೈಕಾಲು ಹಿಡಿದು ನಾನೇ ಕೋಲಾರ ನಗರದ ಹಳ್ಳಕೊಳ್ಳಗಳನ್ನು ಮುಚ್ಚಿಸುತ್ತೇನೆ.

ಇಂದು ಮಾಕ್ ಡ್ರಿಲ್‌ ನಡೆಸಲಿರುವ ಭಾರತ : ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರು ಭಾಗಿ

ಪಂಚರರತ್ನ ಕಾರ್ಯಕ್ರಮಕ್ಕೆ ಕುಮಾರಸ್ವಾಮಿ ಬಂದಾಗ ಜೆಡಿಎಸ್ ಪಕ್ಷದವರು ಹಣ ಕೊಟ್ಟು ಜನರನ್ನು ಕರೆಸಿದ್ದರು. ಕುಮಾರಣ್ಣಗೆ ಜೈ ಅಂದ್ರೆ 500 ರೂಪಾಯಿ, ಕಳಶ ಹೊತ್ತ ಮಹಿಳೆಯರಿಗೆ 1 ಸಾವಿರ ರೂಪಾಯಿ ಕೊಟ್ಟಿದ್ದಾರೆ. ನಾಲ್ಕು ತಲೆಮಾರುಗಳಿಗೆ ಆಗುವಷ್ಟು ದುಡ್ಡು ಜೆಡಿಎಸ್ ಬಳಿ ಇದೆ. ಕಾಂಗ್ರೆಸ್ ಪಕ್ಷದವರಾಗಲಿ, ಜೆಡಿಎಸ್ ಪಕ್ಷದವರಾಗಲಿ ಒಂದು ರೂಪಾಯಿ ಹಣ ಕೊಡದೆ ಜನರನ್ನು ಸೇರಿಸಿ ಕಾರ್ಯಕ್ರಮ ಮಾಡಲಿ ನೋಡೋಣ. ಆದರೆ ನಾನು ಯಾವುದೇ ಹಣ ಕೊಟ್ಟು ಕಾರ್ಯಕ್ರಮಗಳನ್ನು ಮಾಡುತ್ತಿಲ್ಲ. ನನ್ನ ಗೆಲುವಿಗಾಗಿ ಜನರೇ ಹಣ ಖರ್ಚು ಮಾಡಿ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ಎದುರಾಳಿಗಳ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಹಾಸನದ ಕೊರಿಯರ್ ಶಾಪ್ ನಲ್ಲಿ ಮಿಕ್ಸಿ ಬ್ಲಾಸ್ಟ್ ಪ್ರಕರಣ : ಎಸ್ಪಿ ಹರಿರಾಮ್ ಶಂಕರ್ ಭೇಟಿ

ಕರ್ನಾಟಕ ವಿಧಾನಸಭೆ ಅತಂತ್ರ..!? ಕರ್ನಾಟಕ ಟಿವಿ ಡಿಸೆಂಬರ್​ ಸರ್ವೇ ಟ್ರೆಂಡ್

About The Author