ಮಂಡ್ಯ: ಇಂದು ಜಿಲ್ಲೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುತ್ತಿರುವ ಹಿನ್ನೆಲೆ, ರಸ್ತೆಗೆ ಡಾಂಬರೀಕರಣ ಮತ್ತು ಸ್ವಚ್ಚತಾ ಕಾರ್ಯವನ್ನು ಮಾಡಲಾಗಿದೆ. ಮಂಡ್ಯದ ವಿವಿ ಪಕ್ಕದ ರಸ್ತೆಗೆ ಹೊಸದಾಗಿ ಡಾಂಬರೀಕರಣ ಮಾಡಿದ್ದು, ರಸ್ತೆಬದಿಯಲ್ಲಿ ನಗರಸಭೆ ಸಿಬ್ಬಂದಿ ಸ್ವಚ್ಚತಾ ಕಾರ್ಯವನ್ನು ಮಾಡಿದ್ದಾರೆ. ರಸ್ತೆಯಲ್ಲಿ ಗುಂಡಿಗಳು ಬಿದ್ದು ಅನೇಕ ಅಪಘಾತಗಳು ಸಂಭವಿಸಿದ್ದರು, ಗುಂಡಿಗಳನ್ನು ಮುಚ್ಚುವ ಕಾರ್ಯ ಮಾಡಿರಲಿಲ್ಲ ಆದರೆ ಈಗ ಗೃಹ ಸಚಿವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ತ್ವರಿತವಾಗಿ ರಸ್ತೆಗಳನ್ನು ಮರು ಡಾಂಬರೀಕರಣ ಮಾಡಲಾಗಿದೆ.
ರೈತರರೊಂದಿಗೆ ಸಂದಾನ ಸಫಲ : ಅಮಿತ್ ಶಾ ಅವರನ್ನು ರೈತರಿಗೆ ಭೇಟಿ ಮಾಡಿಸುವುದಾಗಿ ಕೆ.ಗೋಪಾಲಯ್ಯ ಭರವಸೆ
ಇನ್ನು ಜಿಲ್ಲಾಡಳಿತದಿಂದಲೂ ಸ್ವಚ್ಚತಾ ಕಾರ್ಯ ನಡೆದಿದೆ. ಶಾ ಅವರು ಮಂಡ್ಯಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ೨ ದಿನ ಮಂಡ್ಯ ವಿಶ್ವವಿದ್ಯಾನಿಲಯಕ್ಕೆ ರಜೆ ಘೋಷಣೆ ಮಾಡಲಾಗಿದೆ. ಮಂಡ್ಯದ ವಿವಿ ಮೈದಾನದಲ್ಲಿ ಬಿಜೆಪಿ ಸಮಾವೇಶ ಆಯೋಜನೆ ಮಾಡಲಾಗಿದ್ದು, ಅಮಿತ್ ಶಾ ಅವರು ಪಾಲ್ಗೊಳ್ಳಲಿರುವ ಹಿನ್ನೆಲೆಯಲ್ಲಿ ಹಾಗೂ ಅವರಿಗೆ ಜಡ್ಪ್ಲಸ್ ಭದ್ರತೆ ಇರುವ ಕಾರಣ ರಜೆ ಘೋಷಣೆ ಮಾಡಲಾಗಿದೆ.
ಇವು ಕಿಡ್ನಿಯಲ್ಲಿ ಕಲ್ಲುಗಳನ್ನು ಉಂಟುಮಾಡುವ ಆಹಾರಗಳು ಇವುಗಳಿಂದ ದೂರವಿರುವುದು ಉತ್ತಮ..!