Saturday, July 5, 2025

Latest Posts

ಪೋಸ್ಟರ್ ವಾರ್ ಮೂಲಕ ರಾಜಕೀಯ ಹೈಡ್ರಾಮಾ..! ಮಧ್ಯ ಪ್ರವೇಶಿಸಿದ ಕೋರ್ಟ್ ..!

- Advertisement -

Political News:

ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ  ಹೈಡ್ರಾಮಾ ಗಳು ತಾರಕಕ್ಕೇರಿದೆ. ಸಿದ್ದು ಕುರಿತಾದ ಪುಸ್ತಕ ಬಿಡುಗಡೆ ಮಾಡುವ ಯೋಜನೆಯನ್ನು ಬಿಜೆಪಿ ಹಮ್ಮಿಕೊಂಡಿತ್ತಾದರೂ ಗೊಂದಲಗಳಿಗೆ ಕೊನೆಗೂ ಕೋರ್ಟ್ ಮದ್ಯ ಪ್ರವೇಶಿಸಿ ಪುಸ್ತಕ ಬಿಡುಗಡೆಗೆ ತಡೆಯಾಜ್ಞೇ ತರುವ ಮೂಲಕ ಪರಿಸ್ಥಿತಿ ಸರಿದೂಗಿಸಿತು.

ಪೋಸ್ಟರ್ ನಲ್ಲಿ ಸಿದ್ದು ವಿರುದ್ಧವಾಗಿ ಹಲವು ಹುನ್ನಾರವನ್ನು ಮಾಡಲಾಗಿತ್ತು. ಸಿದ್ದು ನಿಜ ಕನಸು ಪುಸ್ತಕ ಹಲವು ವಿವಾದಗಳನ್ನು ಸೃಷ್ಟಿ ಮಾಡಿದೆ .  ಸಿದ್ದು ಸಿಎಂ ಅದರೆ  ಕರ್ನಾಟಕದಲ್ಲಿ ಏನೆಲ್ಲ ಬದಲಾವಣೆಗಳು ಆಗಲಿವೆ ಎಂಬುದನ್ನು ಬರೆದಿರುವ ಪೋಸ್ಟರ್ಗಳು  ಕಾಂಗ್ರೇಸ್ ನಾಯಕರು ಕೆರಳುವಂತೆ ಮಾಡಿತು. ಇನ್ನು ಈ ಪುಸ್ತಕದಲ್ಲಿ ಸಿದ್ದು ಸಿಎಂ ಆದರೆ  ಆಗುವ ಬದಲಾವಣೆಗಳು  ರಸ್ತೆಗಳಿಗೆ ಮತ್ತು ನಗರಗಳಿಗೆ  ಇರುವ ಕುವೆಂಪು ರಸ್ತೆ ಮತ್ತು ಕುವೆಂಪು ನಗರಗಳಿಗೆ ಮರು ನಾಮಕರಣ ಮಾಡಿ ರಾಹುಲ್ ಗಾಂದಿ ಹೆಸರನ್ನು ಮರುನಾಮಕರಣ ಮಾಡುವುದು ಸಿದ್ದು ನಿಜ ಕನಸು ಮತ್ತು ಪಾಕಿಸ್ತಾನ ಜಿಂದಾಬಾದ್ ಎಂದವರಿಗೆ ಸರ್ಕಾರದಿಂದ ರಕ್ಷಣೆ ಮಾಡಲಾಗುವುದು ,  ಸಿದ್ದು ಏನಾದರೂ ಮುಖ್ಯಮಂತ್ರಿಯಾದರೆ ಟಿಪ್ಪು ಜಯಂತಿ ಆಚರಣೆ ಜಾರಿಗೆ ತರಲಾಗುವುದು  ರಾಜ್ಯದಲ್ಲಿ ಟಿಪ್ಪು ಪ್ರತಿಮೆಗಳನ್ನು ಪ್ರತಿಷ್ಟಾಪನೆ  ಮತ್ತು ಟಿಪ್ಪು ಹೆಸರಲ್ಲಿ ವಿವಿ ಗಳನ್ನು ಸ್ಥಾಪನೆ ಮಾಡುವುದು ಸಿದ್ದುವಿನ ನಿಜ ಕನಸಾಗಿದೆ, ಸಿದ್ದು ಏನಾದರೂ ಸಿಎಂ ಆದರೆ ಹಿಜಾಬ್ ಅನ್ನು ಶಾಲಾ ಮತ್ತು ಕಾಲೇಜುಗಳಲ್ಲಿ ಕಡ್ಡಾಯಗೊಳಿಸಿ ಹಾಗೂ ಹಿಂದೂ ಮಹಿಳೆಯರಿಗೂ  ಹಿಜಾಬ್ ಅನ್ನು ಕಡ್ಡಾಯ ಮಾಡುತ್ತಾರೆ. ಹಾಗೂ ಹಿಂದೂಗಳ  ಪವಿತ್ರ ಆಚರಣೆ ಯಾದ , ಪ್ರತಿ ವರ್ಷವೂ ವಿಜೃಂಭಣೆಯಿಂದ ಆಚರಣೆ ಮಾಡುವ ಸಾರ್ವಜನಿಕ  ಗಣೇಶ ಹಬ್ಬದ  ಆಚರಣೆಗಿ ನಿರ್ಭಂದ ವಿಧಿಸಲಾಗುವುದು. ಈಗಾಗಲೆ ರಾಜ್ಯದ ಎಲ್ಲಾ ಜಾತಿಯವರಿಗೆ ಏಕರೂಪದ ಬಜೆಟ್ ಜಾರಿಯಲ್ಲಿದೆ ,ಆದರೆ ಸಿದ್ದು ಮುಖ್ಯಮಂತ್ರಿಯಾದರೆ ಅಲ್ಪಸಂಖ್ಯಾತರಿಗಾಗಿಯೇ ಪ್ರತ್ಯೇಕ ಬಜೆಟ್ ಜಾರಿಗೆ ತರುತ್ತಾರೆ. ಲವ್ ಜಿಹಾದ್ ಅಭಿವೃದ್ದಿ ಮಂಡಳೀ ಸ್ಥಪನೆ ಮಾಡುತ್ತಾರೆ.  ಹಾಗೂ ಸಹಾಯ ಧನವಾಗಿ  ಮಹಿಳೆಯರಿಗೆ 20 ಸಾವಿರ ಹಾಗೂ ಪುರುಷರಿಗೆ 1ಲಕ್ಷ 80 ಸಾವಿರ ಪ್ರೋತ್ಸಾಹ ಧನ ಘೋಷಣೆ ಮಾಡುತ್ತಾರೆ.

ಎಂಬುವುದಾಗಿ ಪೋಸ್ಟರ್ ಗಳನ್ನು ಹಿಡಿದು ಸಿದ್ದರಾಮಯ್ಯ ಗೆ ಟಾರ್ಗೆಟ್ ಮಾಡಲಾಗಿತ್ತು.ಇವೆಲ್ಲದಕ್ಕೂ ಯತೀಂದ್ರ ಕೋರ್ಟ್ ಮೊರೆ ಹೋದ ಕಾರಣ ಪುಸ್ತಕ ಬಿಡುಗಡೆಗೆ ತಡೆಯಾಜ್ಞೇ ತಂದಿತು.

- Advertisement -

Latest Posts

Don't Miss